BBMP Order: ಫೆ.18ರ ಮಹಾಶಿವರಾತ್ರಿಯಂದು ಬೆಂಗಳೂರಲ್ಲಿ ಪ್ರಾಣಿ ಹತ್ಯೆ, ಮಾಂಸ ಮಾರಾಟ ನಿಷೇಧ

| Updated By: ವಿವೇಕ ಬಿರಾದಾರ

Updated on: Feb 17, 2023 | 9:06 AM

Mahashivaratri: ಫೆ.18 ಶನಿವಾರ ಮಹಾಶಿವರಾತ್ರಿ ನಿಮಿತ್ತ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ರಾಜಧಾನಿಯಲ್ಲಿ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿದೆ.

BBMP Order: ಫೆ.18ರ ಮಹಾಶಿವರಾತ್ರಿಯಂದು ಬೆಂಗಳೂರಲ್ಲಿ ಪ್ರಾಣಿ ಹತ್ಯೆ, ಮಾಂಸ ಮಾರಾಟ ನಿಷೇಧ
ಬಿಬಿಎಂಪಿ
Follow us on

ಬೆಂಗಳೂರು: ಫೆ.18 ಶನಿವಾರ ಮಹಾಶಿವರಾತ್ರಿ (Mahashivaratri). ಈ ದಿನ ನಾಡಿನಾದ್ಯಂತ ಶಿವ ದೇವಸ್ಥಾನಗಳಲ್ಲಿ ಬಹಳ ವಿಶೇಷವಾಗಿ ಪೂಜೆಗಳು ನೆರವೇರುತ್ತವೆ. ಅಂದು ಇಡೀ ದಿನ ಉಪವಾಸ ವ್ರತ ಮಾಡಿ, ರಾತ್ರಿ ಜಾಗರಣೆ ಮಾಡಿ ಹರನನ್ನು ಧ್ಯಾನಿಸುತ್ತಾರೆ. ಇದರಿಂದ ಎಲ್ಲಡೆ ಸಕಾರಾತ್ಮ ಚಿಂತನೆಗಳು ಹರದಾಡುತ್ತಿರುತ್ತವೆ. ಶಿವರಾತ್ರಿ ನಿಮಿತ್ತ (ಫೆ.18) ರಂದು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ರಾಜಧಾನಿಯಲ್ಲಿ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿದೆ. ಒಂದು ವೇಳೆ ಪ್ರಾಣಿ ಹತ್ಯೆ (Animal slaughtering) ಮತ್ತು (Meat Sale) ಮಾರಾಟ ಮಾಡಿದ್ದೇ ಆದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶ ಹೊರಡಿಸಿದೆ.

ಈ ಸಂಬಂಧ ಗುರುವಾರ (ಫೆ.17) ರಂದು ಸುತ್ತೋಲೆ ಹೊರಡಿಸಿದ ಮಹಾನಗರ ಪಾಲಿಕೆ, ಪಾಲಿಕೆ ವ್ಯಾಪ್ತಿಯಲ್ಲಿ ಒಳಪಡುವ ಮಾಂಸ ಮಾರಾಟ ಅಂಗಡಿಗಳಲ್ಲಿ, ಶನಿವಾರ ಮಹಾಶಿವರಾತ್ರಿ ದಿನದಂದು ಮಾಂಸ ಮಾರಾಟ ಮತ್ತು ಪ್ರಾಣಿ ಹಿಂಸೆ ಅಥವಾ ಬಲಿಯನ್ನು ನಿಷೇಧಿಸಲಾಗಿದೆ. ಯಲಹಂಕ ವಾಯುನಲೆಯಲ್ಲಿ ಏರೋ ಇಂಡಿಯಾ 2023 ಪ್ರಾರಂಭವಾದ ಹಿನ್ನೆಲೆ ಈಗಾಗಲೆ ಅಲ್ಲಿ ಮಾಂಸ ಮಾರಾಟ ಮತ್ತು ಹತ್ಯೆಯನ್ನು ನಿಷೇಧಿಸಲಾಗಿದೆ. ಹಾಗೇ ವಾಯುನೆಲೆ ಸುತ್ತುಮುತ್ತ ಮಾಂಸ ವಿಲೇವಾರಿಯನ್ನು ರದ್ದು ಮಾಡಲಾಗಿದೆ.

ಬಿಬಿಎಂಪಿ ಕಳೆದ ತಿಂಗಳು ಜನವರಿಯಂದು ಯಲಹಂಕ ವಾಯನೆಲೆ ಸುತ್ತಮುತ್ತ ಮಾಂಸ ಆಹಾರ ವಿಲೇವಾರಿಯನ್ನು ನಿಷೇಧಿಸಿದೆ. ಮಾಂಸಕ್ಕಾಗಿ ಹದ್ದುಗಳು ಬರುತ್ತವೆ. ಇದರಿಂದ ವಿಮಾನ ಹಾರಾಟಕ್ಕೆ ತೊಂದರೆಯಾಗುತ್ತದೆ ಎಂದು ಮಾಂಸ ವಿಲೇವಾರಿಯನ್ನು ನಿಷೇಧಿಸಲಾಗಿದೆ. ಇದಕ್ಕೆ ಸ್ಥಳಿಯರು ಮತ್ತು ಮಾರಾಟಗಾರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಬಿಬಿಎಂಪಿ ತನ್ನ ನಿಷೇಧ ಆಜ್ಞೆಯನ್ನು ಹಿಂಪಡೆದಿದೆ. ಆದರೆ ಜ್ಯ ವಿಲೇವಾರಿ ಬಗ್ಗೆ ಎಚ್ಚರವಹಿಸುವಂತೆ ಒತ್ತಾಯಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:43 am, Fri, 17 February 23