AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮುಂದಿನ ವಾರ ಮಹಿಳೆಯರಿಗೆ ವಿಶೇಷ ಕ್ಲಿನಿಕ್‌ ಲೋಕಾರ್ಪಣೆ; ಸಚಿವ ಡಾ. ಕೆ. ಸುಧಾಕರ್‌

ನಗರದ ಗೋವಿಂದರಾಜನಗರ ಕ್ಷೇತ್ರದಲ್ಲಿ ಮಹಿಳೆಯರಿಗಾಗಿ ನಿರ್ಮಿಸಲಾದ ವಿಶೇಷವಾದ ಕ್ಲಿನಿಕ್​ನ್ನು ಮುಂದಿನ ವಾರ ಸಿಎಂ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಆರೋಗ್ಯ ಇಲಾಖೆ ಸಚಿವ ಡಾ.ಸುಧಾಕರ್‌ ಹೇಳಿದ್ದಾರೆ.

ಬೆಂಗಳೂರು: ಮುಂದಿನ ವಾರ ಮಹಿಳೆಯರಿಗೆ ವಿಶೇಷ ಕ್ಲಿನಿಕ್‌ ಲೋಕಾರ್ಪಣೆ; ಸಚಿವ ಡಾ. ಕೆ. ಸುಧಾಕರ್‌
ಮುಂದಿನ ವಾರ ಮಹಿಳೆಯರಿಗಾಗಿ ವಿಶೇಷ ಕ್ಲಿನಿಕ್​ ಲೋಕಾರ್ಪಣೆ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on:Feb 17, 2023 | 8:14 AM

Share

ಬೆಂಗಳೂರು: ನಗರದ ಗೋವಿಂದರಾಜನಗರ ಕ್ಷೇತ್ರದಲ್ಲಿ ಮಹಿಳೆಯರಿಗೆ ವಿಶೇಷವಾದ ಕ್ಲಿನಿಕ್‌ ನಿರ್ಮಿಸಲಾಗಿದ್ದು, ಮುಂದಿನ ವಾರ ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಒಂದು ಕಾರ್ಪೊರೇಟ್ ಆಸ್ಪತ್ರೆ ಹೇಗಿರುತ್ತದೆಯೋ ಹಾಗೆಯೇ ಈ ಆಸ್ಪತ್ರೆಯನ್ನ ನಿರ್ಮಿಸಲಾಗಿದ್ದು, 224 ಕೋಟಿ ರೂ. ಮೌಲ್ಯದ ಉಪಕರಣಗಳು ಆಸ್ಪತ್ರೆಯಲ್ಲಿದೆ. ನಮ್ಮ ಸರ್ಕಾರ ನಗರ ಪ್ರದೇಶಗಳಲ್ಲಿನ ಜನರ ದೃಷ್ಟಿಯಿಂದ 438 ಕ್ಲಿನಿಕ್​ಗಳನ್ನು ರಾಜ್ಯದಲ್ಲಿ ಆರಂಭಿಸಿದ್ದೇವೆ. ಆ ಫೈಕಿ ಬೆಂಗಳೂರಿನಲ್ಲೇ 243 ಕ್ಲಿನಿಕ್​ಗಳ​ನ್ನ ಬೆಂಗಳೂರಿಗೆ ತರುವ ಕೆಲಸ ಮಾಡಿದ್ದೇವೆ ಎಂದು ಬಾಲಗಂಗಾಧರನಾಥ ಸ್ವಾಮೀಜಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಡಾ.ಸುಧಾಕರ್‌ ಹೇಳಿದ್ದಾರೆ.

ಸಾಮಾನ್ಯ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಎಂತಹ ಪರಿಸ್ಥಿತಿಯಲ್ಲೂ ಜನರ ಆರೋಗ್ಯದ ಬಗ್ಗೆ ಚಿಂತಿಸಿದ್ದೇವೆ. ಕೊವಿಡ್ ಸಂದರ್ಭದಲ್ಲಿ ನಮ್ಮ ಸರ್ಕಾರ ಮೂಲಭೂತ ಸೌಕರ್ಯ ಒದಗಿಸಿದೆ. ಈ ಆಸ್ಪತ್ರೆಯನ್ನು ಒಂದು ಕಾರ್ಫೋರೇಟ್ ಆಸ್ಪತ್ರೆ ಹೇಗಿರುತ್ತೊ ಹಾಗೇ ನಿರ್ಮಿಸಲಾಗಿದೆ. ಬಡವರು, ನಿರ್ಗತಿಕರು, ಮಧ್ಯಮ ವರ್ಗರದವರಿಗೆ ಉಚಿತವಾಗಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಇದರ ನಗರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಕೂಡ ಉತ್ತಮವಾಗಿದೆ. ಬ್ರ್ಯಾಂಡ್ ಬೆಂಗಳೂರು ಉಳಿಸಲು ಸಿಎಂ ಬೊಮ್ಮಾಯಿಯವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:10 am, Fri, 17 February 23