ಬೆಂಗಳೂರು ಹೊರ ವಲಯಗಳಲ್ಲೇ ಅಪಘಾತಗಳು ಜಾಸ್ತಿ: ವಿಶೇಷ ಸಂಚಾರ ಆಯುಕ್ತ ಡಾ. ಸಲೀಂ
ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಬಂದ ಮೇಲೆ ಪಾದಚಾರಿಗಳಿಗೆ ಯಾವುದೇ ತೊಂದರೆ ಇಲ್ಲ. ಆದರೆ ಹೊರ ವಲಯಗಳಲ್ಲೇ ಅಪಘಾತಗಳು ಜಾಸ್ತಿ ಆಗುತ್ತಿವೆ ಎಂದು ಬೆಂಗಳೂರು ವಿಶೇಷ ಸಂಚಾರ ಆಯುಕ್ತ ಡಾ. ಸಲೀಂ ಟಿವಿ 9ಗೆ ಹೇಳಿದ್ದಾರೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಮಹಾ ನಗರದಲ್ಲಿ ಜನರಿಗಿಂತಾ ವಾಹನಗಳ ಸಂಖ್ಯೆಯೇ ಹೆಚ್ಚು. ಜೊತೆಗೆ ಅಪಘಾತಗಳ (accident) ಪ್ರಮಾಣವೂ ಮಿತಿಮೀರಿದೆ. 2021ಕ್ಕೆ ಹೋಲಿಸಿದರೆ 2022ರಲ್ಲಿ ಬೆಂಗಳೂರು ನಗರದಲ್ಲಿ ಅಪಘಾತಗಳ ಪ್ರಮಾಣ ಶೇ. 7.9ರಷ್ಟು ಏರಿಕೆ ಆಗಿದೆ. ನಗರದ ಹೊರ ವಲಯಗಳಲ್ಲೇ ಅಪಘಾತಗಳು ಜಾಸ್ತಿ ಆಗುತ್ತಿವೆ ಎಂದು ಬೆಂಗಳೂರು ವಿಶೇಷ ಸಂಚಾರ ಆಯುಕ್ತ ಡಾ. ಸಲೀಂ ಟಿವಿ 9ಗೆ ಹೇಳಿದ್ದಾರೆ. ಹೃದಯ ಭಾಗಗಳಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಇದ್ದು, ಅಪಘಾತಗಳು ಆಗುತ್ತಿಲ್ಲ. ಸ್ಮಾರ್ಟ್ ಸಿಟಿ ಬಂದ ಮೇಲೆ ಪಾದಚಾರಿಗಳಿಗೆ ಯಾವುದೇ ತೊಂದರೆ ಇಲ್ಲ. ಫುಟ್ಪಾತ್ಗಳನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಹೊರ ಭಾಗಗಳಲ್ಲಿ ಅಪಘಾತಗಳು ಜಾಸ್ತಿ ಆಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಅದರಲ್ಲಿ ಕೆಂಗೇರಿ, ಕೆ ಆರ್ ಪುರಂ, ತುಮಕೂರು ರಸ್ತೆಗಳಲ್ಲಿ ಮತ್ತು ಜಂಕ್ಸನ್ಗಳಲ್ಲಿ ಅಪಘಾತಗಳ ಮಟ್ಟ ಹೆಚ್ಚಾಗಿದೆ ಎಂದು ಹೇಳಿದರು.
ಸ್ಕೈ ವಾಕರ್ ನಿರ್ಮಿಸಲು ಬೇಡಿಕೆ
ಜಾಲಹಳ್ಳಿ ಕ್ರಾಸ್ ಗೋರುಗುಂಟೆ ಪಾಳ್ಯಾ, ಜಂಕ್ಷನ್ಗಳಲ್ಲಿ ಜನರಿಗೆ ಸುರಕ್ಷಿತವಾಗಿ ರಸ್ತೆ ದಾಟಲು ವ್ಯವಸ್ಥೆ ಇಲ್ಲ. ಸಂಜೆ ಆಗ್ತಿದ್ದಂತೇ ಆ ಏರಿಯಾಗಳಲ್ಲಿ ಸಾವಿರಾರು ಜನರು ಓಡಾಡುತ್ತಾರೆ. ಇದರ ವಿಚಾರವಾಗಿ ಈಗಾಗಲೇ ಬಿಬಿಎಂಪಿ ಅವರಿಗೆ ಸ್ಕೈ ವಾಕರ್ ನಿರ್ಮಿಸಲು ನಾವು ಬೇಡಿಕೆ ಇಟ್ಟಿದ್ದೇವು. ಅದರಂತೆಯೇ ಕೆಲವು ಕಡೆ ಸ್ಕೈ ವಾಕರ್ಗಳನ್ನು ಬಿಬಿಎಂಪಿನವರು ಮಾಡಿದ್ದಾರೆ.
ಇದನ್ನೂ ಓದಿ: ರಸ್ತೆ ಗುಂಡಿಗಳಿಗೆ ಸಂಬಂಧಿಸಿದ ಅಪಘಾತ ದೂರುಗಳಿಗೆ ಎಫ್ಐಆರ್ ದಾಖಲಿಸುವಂತೆ ಹೈಕೋರ್ಟ್ ಆದೇಶ
ಪಾದಚಾರಿಗಳ ಸುರಕ್ಷತೆಗೆ ವ್ಯವಸ್ಥೆ
ಕೆಲವು ಏರಿಯಾಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ ಹೀಗಾಗಿ ಸ್ಕೈ ವಾಕರ್ಗಳು ನಿರ್ಮಿಸಲು ಆಗಲ್ಲ. ಮುಂದಿನ ದಿನಗಳಲ್ಲಿ ಪಾದಚಾರಿಗಳಿಗೆ ಸುರಕ್ಷಿತ ಬಗ್ಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ. ಕೆಲವು ಭಾಗಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಕೆಲವರು ಫುಟ್ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದು, ಇದರಿಂದಾಗಿ ಪಾದಚಾರಿಗಳಿಗೆ ಸುರಕ್ಷಿತ ಕಡಿಮೆ ಆಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: Road Accidents: ಬೆಂಗಳೂರಲ್ಲಿ ಅಪಘಾತಗಳ ಸಂಖ್ಯೆ 2022ರಲ್ಲಿ ಇಳಿಮಮುಖಗೊಂಡರೂ ಸಾವು-ನೋವುಗಳ ಸಂಖ್ಯೆ ಹೆಚ್ಚಿದೆ
ಪಾದಚಾರಿಗಳಿಗೆ ತೊಂದರೆ ಆಗಬಾರದೆಂದು ನಾವು ಸಿಗ್ನಲ್ ಬಳಿ ಜನರಿಗೆ ರಸ್ತೆ ದಾಟಲು ಟೈಮಿಂಗ್ ಕೊಡಲಾಯಿತು. ವಾಹನ ಸವಾರರು ಕೂಡ ಪಾದಚಾರಿಗಳ ಬಗ್ಗೆ ಗಮನ ಕೊಡಬೇಕು. ಈಗಾಗಲೇ ನಾವು ನಗರದಲ್ಲಿ ಹೆಚ್ಚು ಅಪಘಾತ ನಡೆಯುವ ಸ್ಥಳಗಳು ನೋಡಿ ಅಲ್ಲಿ ಸ್ಕೈ ವಾಕರ್ಸ್ ಅಥವಾ ಸಬ್ ವೇ ಮಾಡಲು ನಾನು ತಿಳಿಸಿದ್ದೇ ಎಂದು ಡಾ. ಸಲೀಂ ಮಾಹಿತಿ ನೀಡಿದರು.
ಕಳೆದ 5 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ನಡೆದ ರಸ್ತೆ ಅಪಘಾತಗಳ ವಿವರ ಹೀಗಿದೆ
2018: ಒಟ್ಟು ಅಪಘಾತಗಳು: 4,611-ಸಾವು 684, ಗಾಯಗೊಂಡವರು: 686
2019: ಒಟ್ಟು ಅಪಘಾತಗಳು: 4,684-ಸತ್ತವರು:766, ಗಾಯಗೊಂಡವರು: 4,250
2020: ಒಟ್ಟು ಅಪಘಾತಗಳು: 3,236-ಸತ್ತವರು: 647, ಗಾಯಗೊಂಡವರು: 2,760
2021: ಒಟ್ಟು ಅಪಘಾತಗಳು: 3,213-ಸತ್ತವರು: 651, ಗಾಯಗೊಂಡವರು: 2,820
2022: ಒಟ್ಟು ಅಪಘಾತಗಳು: 3,827-ಸತ್ತವರು: 777, ಗಾಯಗೊಂಡವರು: 3,235
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.