Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೆ.25ರಂದು ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ: ಪ್ರಧಾನಿ ಮೋದಿಯಿಂದ ಚಾಲನೆ

ಬೆರಳೆಣಿಕೆಯ ಕನ್ನಡಿಗರು ಒಂದೆಡೆ ಸೇರಿ 1948ರಲ್ಲಿ ದೆಹಲಿಯಲ್ಲಿ ಆರಂಭಿಸಿದ ದೆಹಲಿ ಕರ್ನಾಟಕ ಸಂಘ ಇದೀಗ ನಾಡು, ಹೊರನಾಡು ಹಾಗೂ ವಿದೇಶಗಳಲ್ಲಿ ಸಾವಿರಾರು ಮಂದಿ ಆಜೀವ ಸದಸ್ಯರನ್ನು ಮತ್ತು ನಾಡಿನ ಪ್ರಮುಖ ಗಣ್ಯರನ್ನು ಗೌರವ ಸದಸ್ಯರನ್ನಾಗಿ ಹೊಂದಿ ಬೃಹದಾಕಾರವಾಗಿ ಬೆಳೆದಿದೆ.

ಫೆ.25ರಂದು ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ: ಪ್ರಧಾನಿ ಮೋದಿಯಿಂದ ಚಾಲನೆ
ದೆಹಲಿ ಕರ್ನಾಟಕ ಸಂಘ
Follow us
TV9 Web
| Updated By: Rakesh Nayak Manchi

Updated on: Feb 16, 2023 | 6:56 PM

ದೆಹಲಿ: ಸ್ವಾತಂತ್ರ್ಯ ಸಿಕ್ಕಿದ ನಂತರದ ವರ್ಷದಲ್ಲಿ ದೆಹಲಿಯಲ್ಲಿ ಸಣ್ಣದಾಗಿ ಆರಂಭವಾದ ದೆಹಲಿ ಕರ್ನಾಟಕ ಸಂಘ (Delhi Karnataka Association) ಇದೀಗ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ದೆಹಲಿಯ ತಾಲ್ಕಟೋರ ಸ್ಟೇಡಿಯಂನಲ್ಲಿ ಫೆ.25ರಂದು ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಲಿದ್ದಾರೆ. 2 ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಸುಮಾರು 5,000 ಜನ ಸೇರುವ ನಿರೀಕ್ಷೆ ಹೊಂದಲಾಗಿದೆ.

ಬೆರಳೆಣಿಕೆಯ ಕನ್ನಡಿಗರು ಒಂದೆಡೆ ಸೇರಿ 1948ರಲ್ಲಿ ದೆಹಲಿಯಲ್ಲಿ ಆರಂಭಿಸಿದ ಈ ಸಂಘ ಇದೀಗ ನಾಡು, ಹೊರನಾಡು ಹಾಗೂ ವಿದೇಶಗಳಲ್ಲಿ ಸಾವಿರಾರು ಮಂದಿ ಆಜೀವ ಸದಸ್ಯರನ್ನು ಮತ್ತು ನಾಡಿನ ಪ್ರಮುಖ ಗಣ್ಯರನ್ನು ಗೌರವ ಸದಸ್ಯರನ್ನಾಗಿ ಹೊಂದಿ ಬೃಹದಾಕಾರವಾಗಿ ಬೆಳೆದಿದೆ. ದೆಹಲಿ ಕರ್ನಾಟಕ ಸಂಘವು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟನೆ ಎಂದು ಅಧಿಕೃತವಾಗಿ ನೋಂದಣೆ ಆಗುವ ಮೊದಲು ಅದರ ಎಲ್ಲ ಚಟುವಟಿಕೆಗಳು ಇಲ್ಲಿನ ಕನ್ನಡಿಗರ ಮನೆಗಳಲ್ಲೇ ಜರಗುತ್ತಿದ್ದವು.

ರಾಜಧಾನಿಯ ವಿವಿದೆಡೆ ಚದುರಿ ಹೋಗಿರುವ ಕನ್ನಡಿಗರನ್ನು ಒಂದೆಡೆ ಕಲೆ ಹಾಕಿ ಆ ಮೂಲಕ ರಾಜ್ಯದ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮತ್ತು ರಾಜ್ಯದಿಂದ ಬರುವ ಪ್ರತಿಭೆಗಳಿಗೆ ರಾಷ್ಟ್ರ ಮಟ್ಟದಲ್ಲಿ ಮಿಂಚಲು ಸೂಕ್ತ ವೇದಿಕೆ ಅಗತ್ಯ. ದೆಹಲಿ ಕರ್ನಾಟಕ ಸಂಘ ಈ ಉದ್ದೇಶವನ್ನು ಮನಗಂಡು ದೆಹಲಿಯಲ್ಲಿ ಸೂಕ್ತ ನಿವೇಶನ ಮತ್ತು ತನ್ನದೇ ಆದ ಕಟ್ಟಡವನ್ನು ಹೊಂದಲು ಬಯಸಿತು. ಅದರಂತೆ ಕೇಂದ್ರ ಸಚಿವರಾಗಿದ್ದ ಕೆ.ಸಿ. ರೆಡ್ಡಿಯವರ ಮುತುವರ್ಜಿಯಿಂದ 1953ರಲ್ಲಿ ಸಂಘಕ್ಕೆ ಲೋಧಿ ಎಸ್ಟೇಟ್‌ನಲ್ಲಿ ಜಾಗವೊಂದು ಮಂಜೂರಾಯಿತು. ಅದೇ ವರ್ಷ ಸಂಘ ಅಧಿಕೃತವಾಗಿ ನೋಂದಾವಣೆಗೊಂಡಿತು.

ಇದನ್ನೂ ಓದಿ: Mahashivratri 2023: ಚಿಕ್ಕಬಳ್ಳಾಪುರ ಈಶಾ ಫೌಂಡೇಷನ್ – ಮೊದಲ ಬಾರಿ ಅದ್ದೂರಿ ಶಿವರಾತ್ರಿ ಆಚರಣೆ! ಪೂಜೆ, ಪ್ರವಚನ ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ

ದೆಹಲಿ ಕರ್ನಾಟಕ ಸಂಘವು ಬರಿಯ ಮನರಂಜನೆ, ಸಾಹಿತ್ಯ ಗೋಷ್ಠಿ, ಅಥವಾ ಹೊರಗಿನಿಂದ ಬಂದ ಕನ್ನಡಿಗರಿಗೆ ವಸತಿ ಸೌಲಭ್ಯವನ್ನು ಒದಗಿಸುವ ಕೆಲಸವನ್ನಷ್ಟೇ ಮಾಡುತ್ತಿಲ್ಲ. ಇಲ್ಲಿ ಸಾಮಾಜಿಕ ಕಳಕಳಿಯ ಹತ್ತು ಹಲವು ಕಾರ್ಯಕ್ರಮಗಳು ಜರಗುತ್ತಿವೆ. ಉಚಿತ ವೈದ್ಯಕೀಯ ತಪಾಸಣೆ, ಸಂಗೀತ ತರಬೇತಿ, ಯೋಗ ತರಬೇತಿ, ಐಎಎಸ್ ಅಭ್ಯರ್ಥಿಗಳ ತರಬೇತಿಗೆ ಸ್ಥಳಾವಕಾಶ, ಅರ್ಹ ಮತ್ತು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಕನ್ನಡ ಕಲಿಕೆ, ಉಚಿತ ಕಾನೂನು ಸಲಹೆ ಇತ್ಯಾದಿ ಜನಪರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಕಲಾವಿದರಿಗೆ, ಸ್ಥಳೀಯ ಪ್ರತಿಭೆಗಳಿಗೆ ಹಾಗೂ ಬರಹಗಾರರಿಗೆ ಪ್ರೋತ್ಸಾಹ ನೀಡಲು ನಾಟಕ ಸ್ಪರ್ಧೆ, ವಿಶಿಷ್ಟ ಕನ್ನಡಿಗ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ ಮೊದಲಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸದನದಲ್ಲಿ ಹೊಸ ರೇಷನ್​ ಕಾರ್ಡ್ ಬಗ್ಗೆ ಪ್ರಸ್ತಾಪ: ಸಚಿವ ಹೇಳಿದ್ದಿಷ್ಟು
ಸದನದಲ್ಲಿ ಹೊಸ ರೇಷನ್​ ಕಾರ್ಡ್ ಬಗ್ಗೆ ಪ್ರಸ್ತಾಪ: ಸಚಿವ ಹೇಳಿದ್ದಿಷ್ಟು
ನನಗೆ ಮೋಸ ಆಗಿದೆ: ಹಾಸ್ಟೆಲ್ ಹುಡುಗರ ಕಿರಿಕ್ ಬಗ್ಗೆ ವಿವರಣೆ ನೀಡಿದ ರಮ್ಯಾ
ನನಗೆ ಮೋಸ ಆಗಿದೆ: ಹಾಸ್ಟೆಲ್ ಹುಡುಗರ ಕಿರಿಕ್ ಬಗ್ಗೆ ವಿವರಣೆ ನೀಡಿದ ರಮ್ಯಾ
ವಿರೋಧದ ಮಧ್ಯೆಯೂ ಬೆಂಗಳೂರು ಅರಮನೆ ಭೂ ಬಳಕೆ, ನಿಯಂತ್ರಣ ವಿಧೇಯಕ ಅಂಗೀಕಾರ
ವಿರೋಧದ ಮಧ್ಯೆಯೂ ಬೆಂಗಳೂರು ಅರಮನೆ ಭೂ ಬಳಕೆ, ನಿಯಂತ್ರಣ ವಿಧೇಯಕ ಅಂಗೀಕಾರ
ಕೆಲಸದ ವಿಷಯದಲ್ಲಿ ಶಿವಕುಮಾರ್​ಗೆ ಸದನದಲ್ಲಿ ಸವಾಲೆಸೆದ ಅಶ್ವಥ್ ನಾರಾಯಣ
ಕೆಲಸದ ವಿಷಯದಲ್ಲಿ ಶಿವಕುಮಾರ್​ಗೆ ಸದನದಲ್ಲಿ ಸವಾಲೆಸೆದ ಅಶ್ವಥ್ ನಾರಾಯಣ
ಟ್ರೋಲಿಂಗ್: ರಶ್ಮಿಕಾ ಮಂದಣ್ಣ ಪರ ನಿಂತ ನಟಿ ರಮ್ಯಾ
ಟ್ರೋಲಿಂಗ್: ರಶ್ಮಿಕಾ ಮಂದಣ್ಣ ಪರ ನಿಂತ ನಟಿ ರಮ್ಯಾ
ಮಾನಸ ಗಂಗೋತ್ರಿ ಒಂದೇ ಸಾಕಿತ್ತಲ್ಲ, ಬೇರೆ ಯಾಕೆ ಬೇಕಿತ್ತು? ಅಶ್ವಥ್ ನಾರಾಯಣ
ಮಾನಸ ಗಂಗೋತ್ರಿ ಒಂದೇ ಸಾಕಿತ್ತಲ್ಲ, ಬೇರೆ ಯಾಕೆ ಬೇಕಿತ್ತು? ಅಶ್ವಥ್ ನಾರಾಯಣ
ಬಜೆಟ್​ನಲ್ಲಿ ಬೇಡಿಕೆ ಈಡೇರಿಸುವಂತೆ 4 ಸಾರಿಗೆ ನಿಗಮಗಳ ಒತ್ತಾಯ
ಬಜೆಟ್​ನಲ್ಲಿ ಬೇಡಿಕೆ ಈಡೇರಿಸುವಂತೆ 4 ಸಾರಿಗೆ ನಿಗಮಗಳ ಒತ್ತಾಯ
ಇಂಟರ್​ವಲ್ ತನಕ ಕಥೆ ಕೇಳಿ ಎಕ್ಸ್​ಕ್ಯೂಸ್​ ಮಿ’ ಒಪ್ಪಿಕೊಂಡಿದ್ದ ರಮ್ಯಾ
ಇಂಟರ್​ವಲ್ ತನಕ ಕಥೆ ಕೇಳಿ ಎಕ್ಸ್​ಕ್ಯೂಸ್​ ಮಿ’ ಒಪ್ಪಿಕೊಂಡಿದ್ದ ರಮ್ಯಾ
ಪರಿಶಿಷ್ಟ ಜಾತಿ/ ಪಂಗಡಗಳ ಏಳ್ಗೆಗೆ ಸಿದ್ದರಾಮಯ್ಯ ಬಹಳ ಮಾಡಿದ್ದಾರೆ: ಸಚಿವ
ಪರಿಶಿಷ್ಟ ಜಾತಿ/ ಪಂಗಡಗಳ ಏಳ್ಗೆಗೆ ಸಿದ್ದರಾಮಯ್ಯ ಬಹಳ ಮಾಡಿದ್ದಾರೆ: ಸಚಿವ
ಸರಳವಾಗಿ ನೆರವೇರಿತು ಸಂಸದ ತೇಜಸ್ವಿ ಸೂರ್ಯ ಮದ್ವೆ: ವಿಡಿಯೋ ನೋಡಿ
ಸರಳವಾಗಿ ನೆರವೇರಿತು ಸಂಸದ ತೇಜಸ್ವಿ ಸೂರ್ಯ ಮದ್ವೆ: ವಿಡಿಯೋ ನೋಡಿ