ಲೇಔಟ್​ ಪರವಾನಗಿ ನೀಡಲು ಲಂಚಕ್ಕೆ ಕೈಯೊಡ್ಡಿದ ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಲಂಚ ಸ್ವೀಕರಿಸುವಾಗ ನಗರ ಯೋಜನಾ ಪ್ರಾಧಿಕಾರಗಳು ಸಹಾಯಕ ನಿರ್ದೇಶಕ ಲೋಕಾಯುಕ್ತ ಬಲೆಗೆ ಬಿದ್ದಿರು ವಂತಹ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಲೇಔಟ್​ನಲ್ಲಿ ನಡೆದಿದೆ.

ಲೇಔಟ್​ ಪರವಾನಗಿ ನೀಡಲು ಲಂಚಕ್ಕೆ ಕೈಯೊಡ್ಡಿದ ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Feb 16, 2023 | 7:27 PM

ದಾವಣಗೆರೆ: ಲಂಚ (bribe) ಸ್ವೀಕರಿಸುವಾಗ ನಗರ ಯೋಜನಾ ಪ್ರಾಧಿಕಾರಗಳು ಸಹಾಯಕ ನಿರ್ದೇಶಕ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿರು ವಂತಹ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಲೇಔಟ್​ನಲ್ಲಿ ನಡೆದಿದೆ. ಕೆ.ಆರ್.ಮಂಜು ಹಾಗೂ ಭರತ್ ಬಲೆಗೆ ಬಿದ್ದ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕರು. ಕೊಂಡಜ್ಜಿ ಗ್ರಾಮದಲ್ಲಿ ಲೇಔಟ್​ ನಿರ್ಮಿಸುತ್ತಿದ್ದು, ಶ್ರೀನಿವಾಸ್​ ಎನ್ನುವವರಿಂದ ಲೇಔಟ್​ ನಿರ್ಮಾಣಕ್ಕೆ ಪರವಾನಗಿ ನೀಡಲು 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ 1 ಲಕ್ಷ ರೂ. ಲಂಚ ಸ್ವೀಕರಿಸಿದ್ದ ಕೆ.ಆರ್.ಮಂಜು ಮತ್ತು ಭರತ್, ಇಂದು 2 ಲಕ್ಷ ರೂ. ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದಾರೆ. ಸದ್ಯ ಇಬ್ವರು ಅಧಿಕಾರಿಗಳನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಟಿ.ಬೇಗೂರು ಗ್ರಾ.ಪಂ. ಪಿಡಿಒ ಎಂ.ಉಷಾ ಲೋಕಾಯುಕ್ತ ಬಲೆಗೆ

ಬೆಂಗಳೂರು ಗ್ರಾಮಾಂತರ: ಗುತ್ತಿಗೆದಾರನಿಂದ 25 ಸಾವಿರ ರೂ. ಲಂಚ ಸ್ವೀಕರಿಸುವಾಗ ಗ್ರಾಮ ಪಂಚಾಯಿತ ಪಿಡಿಒ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ಜಿಲ್ಲೆಯ ನೆಲಮಂಗಲ ತಾಲೂಕಿನ ಟಿ.ಬೇಗೂರುನಲ್ಲಿ ನಡೆದಿದೆ. ಎಂ. ಉಷಾ ಬಲೆಗೆ ಬಿದ್ದ ಪಿಡಿಒ. ಲೋಕಾಯುಕ್ತ ಡಿವೈಎಸ್​​ಪಿ ವೆಂಕಟೇಶ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ಕಾಮಗಾರಿ ಬಿಲ್ ಮಂಜೂರು ಮಾಡಲು 25,000 ರೂ. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದಾರೆ. ಉಷಾ ಜೊತೆಗೆ ಬಿಲ್ ಕಲೆಕ್ಟರ್ ಪುಟ್ಟಸ್ವಾಮಿಯನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಉಡುಪಿ: ಮಾದಕ ಲೋಕದ ನಂಟು ಹೊಂದಿರುವ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಮಾಹೆ ವಿವಿಗೆ ತಾಕೀತು ಮಾಡಿದ ಪೊಲೀಸ್ ಇಲಾಖೆ

ಆನೆ ದಂತದಿಂದ‌ ತಯಾರಿಸಿದ ಕಲಾಕೃತಿ ಮಾರಾಟ ಮಾಡಲು‌ ಯತ್ನ: ಐವರ ಬಂಧನ

ಹುಬ್ಬಳ್ಳಿ: ಆನೆ ದಂತದಿಂದ‌ ತಯಾರಿಸಿದ ಕಲಾಕೃತಿ ಮಾರಾಟ ಮಾಡಲು‌ ಯತ್ನಿಸಿದ್ದ ಐವರನ್ನು ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ. ವಿಜಯ್ ಕುಂಬಾರ್, ಸಾಗರ್ ಪುರಾಣಿಕ್, ವಿನಾಯಕ್ ನಾಮದೇವ, ದಾನಜೀ ಪಾಟೀಲ್ ಹಾಗೂ ಶಹಜಾನ್ ಜಮಾದಾರ ಬಂಧಿತ ಆರೋಪಿಗಳು. ಬಂಧಿತರು ಕೊಲ್ಹಾಪೂರ ಮೂಲದವರು ಎನ್ನಲಾಗುತ್ತಿದೆ. ಸದ್ಯ ಬಂಧಿತರಿಂದ 348, 350 ಗ್ರಾಂಗಳ ಎರಡು ಬೇರೆ ಬೇರೆ ತೂಕದ ಆನೆದಂತದಿಂದ ತಯಾರಿಸಿದ ಅಲಂಕಾರಿಕ‌ ಪೆಟ್ಟಿಗೆ, 112 ಗ್ರಾಮದ ಕೆಂಪು‌ಹರಳಿನ‌ ಖಡ್ಗ ಮತ್ತು 279 ಗ್ರಾಂ ತೂಕದ ಮೊಟ್ಟೆಯಾಕಾರದ ಪೆಟ್ಟಿಗೆ ವಶಕ್ಕೆ ಪಡೆಯಲಾಗಿದೆ. ಆನೆ ದಂತದಿಂದ ತಯಾರಿಸಿದ ಕಲಾಕೃತಿ ಮಾರಾಟ ಮಾಡಲು‌ ಗ್ಯಾಂಗ್ ಹುಬ್ಬಳ್ಳಿಗೆ ಬಂದಿದ್ದರು. ಈ ವೇಳೆ ಹುಬ್ಬಳ್ಳಿ ಸಿಐಡಿ ಅರಣ್ಯ ಘಟಕದ ಪೊಲೀಸ ಅಧಿಕಾರಿಗಳಿಂದ ವಶಕ್ಕೆ ಪಡೆದಿದ್ದು, ಐವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿಡಲಾಗಿದೆ.

ಇದನ್ನೂ ಓದಿ: ಹಾವೇರಿ ಬಿಜೆಪಿ ಶಾಸಕ ನೆಹರು ಓಲೆಕಾರ್​ಗೆ ಜೈಲುಶಿಕ್ಷೆ: ತಂದೆ, ಮಕ್ಕಳು 2 ವರ್ಷ ಜೈಲುಪಾಲು

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಶಿಕ್ಷೆ

ಬೆಂಗಳೂರು: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದ್ದು, ಚೆಕ್ ಬೌನ್ಸ್ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಿಂದ ಶಿಕ್ಷೆ ವಿಧಿಸಲಾಗಿದೆ. ಒಟ್ಟು 8 ಕೇಸ್​ಗಳಲ್ಲಿ 1.38 ಕೋಟಿ ಹಣ ಪಾವತಿಸಬೇಕು. ಇಲ್ಲವಾದರೆ ತಲಾ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು 42ನೇ ಎಸಿಎಂಎಂ ಕೋರ್ಟ್ ಜಡ್ಜ್ ಜೆ. ಪ್ರೀತ್​ ಆದೇಶ ಹೊರಡಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:14 pm, Thu, 16 February 23