Road Accidents: ಬೆಂಗಳೂರಲ್ಲಿ ಅಪಘಾತಗಳ ಸಂಖ್ಯೆ 2022ರಲ್ಲಿ ಇಳಿಮಮುಖಗೊಂಡರೂ ಸಾವು-ನೋವುಗಳ ಸಂಖ್ಯೆ ಹೆಚ್ಚಿದೆ
ಪೊಲೀಸ್ ಇಲಾಖೆ ನೀಡಿರುವ ದತ್ತಾಂಶದ ಪ್ರಕಾರ 2022 ರಲ್ಲಿ ಬೆಂಗಳೂರಲ್ಲಿ 3,827 ರಸ್ತೆ ಅಪಘಾತಗಳು ಸಂಭವಿಸಿದ್ದು 777 ಜನ ಮೃತಪಟ್ಟಿದ್ದಾರೆ ಮತ್ತು 3,235 ಜನ ಗಾಯಗೊಂಡಿದ್ದಾರೆ. ಕಳೆದ ದಶಕದ 2016 ರಲ್ಲಿ ಬೆಂಗಳೂರಲ್ಲಿ ಅತಿಹೆಚ್ಚು ಅಂದರೆ 793 ಜನ ಅಪಘಾತಗಳಿಗೆ ಬಲಿಯಾಗಿದ್ದರು.

ಬೆಂಗಳೂರು ನಗರ ಸಂಚಾರ ಪೊಲೀಸ್ (Bengaluru Traffic Police) ಒದಗಿಸಿರುವ ಮಾಹಿತಿ ಪ್ರಕಾರ ಕಳೆದ ದಶಕದ (decade) ಸಮಗ್ರ ಚಿತ್ರಣವನ್ನು ಗಮನಿಸಿದರೆ 2022ರಲ್ಲಿ ಅತಿಹೆಚ್ಚು ಅಪಘಾತ (accidents) ಸಂಭವಿಸಿದ ನಗರಗಳ ಪೈಕಿ ರಾಜ್ಯದ ರಾಜಧಾನಿ ಎರಡನೇ ಸ್ಥಾನದಲ್ಲಿದೆ. ಕೋವಿಡ್-19 ಪಿಡುಗಿನ ಮುಂಚಿನ ವರ್ಷಗಳಿಗೆ ಹೋಲಿಸಿದರೆ, ಅಪಘಾತಗಳ ಸಂಖ್ಯೆ ಇಳಿಮುಖಗೊಂಡಿದೆಯಾದರೂ, ಅವುಗಳಿಂದ ಸಂಭವಿಸಿದ ಸಾವುಗಳು ಸಂಖ್ಯೆ ಹೆಚ್ಚಿದೆ.
ಕಳೆದ 5 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ನಡೆದ ರಸ್ತೆ ಅಪಘಾತಗಳ ವಿವರ ಕೆಳಗಿನಂತಿದೆ
2018: ಒಟ್ಟು ಅಪಘಾತಗಳು: 4,611-ಸಾವು 684, ಗಾಯಗೊಂಡವರು: 686
2019: ಒಟ್ಟು ಅಪಘಾತಗಳು: 4,684-ಸತ್ತವರು:766, ಗಾಯಗೊಂಡವರು: 4,250
2020: ಒಟ್ಟು ಅಪಘಾತಗಳು: 3,236-ಸತ್ತವರು: 647, ಗಾಯಗೊಂಡವರು: 2,760
2021: ಒಟ್ಟು ಅಪಘಾತಗಳು: 3,213-ಸತ್ತವರು: 651, ಗಾಯಗೊಂಡವರು: 2,820
2022: ಒಟ್ಟು ಅಪಘಾತಗಳು: 3,827-ಸತ್ತವರು: 777, ಗಾಯಗೊಂಡವರು: 3,235
ಪೊಲೀಸ್ ಇಲಾಖೆ ನೀಡಿರುವ ದತ್ತಾಂಶದ ಪ್ರಕಾರ 2022 ರಲ್ಲಿ ಬೆಂಗಳೂರಲ್ಲಿ 3,827 ರಸ್ತೆ ಅಪಘಾತಗಳು ಸಂಭವಿಸಿದ್ದು 777 ಜನ ಮೃತಪಟ್ಟಿದ್ದಾರೆ ಮತ್ತು 3,235 ಜನ ಗಾಯಗೊಂಡಿದ್ದಾರೆ. ಕಳೆದ ದಶಕದ 2016 ರಲ್ಲಿ ಬೆಂಗಳೂರಲ್ಲಿ ಅತಿಹೆಚ್ಚು ಅಂದರೆ 793 ಜನ ಅಪಘಾತಗಳಿಗೆ ಬಲಿಯಾಗಿದ್ದರು.
ಅಪಘಾತಗಳ ಸಂಖ್ಯೆ ಹೆಚ್ಚಿದೆ
2020 ಮತ್ತು 2021 ವರ್ಷಗಳಿಗೆ ಹೋಲಿಸಿದರೆ 2022 ರಲ್ಲಿ ನಡೆದ ಅಪಘಾತಗಳ ಸಂಖ್ಯೆ ಹೆಚ್ಚಿದೆ, ಆ ಎರಡು ವರ್ಷಗಳಲ್ಲಿ ಕೋವಿಡ್-19 ಪಿಡುಗು ಮತ್ತು ಅದಕ್ಕೆ ಸಂಬಂಧಿಸಿದ ಲಾಕ್ ಡೌನ್ ಗಳಿಂದಾಗಿ ರಸ್ತೆಗಳ ಮೇಲೆ ವಾಹನಗಳ ಸಂಚಾರ ಸೀಮಿತಗೊಂಡಿದ್ದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಿತ್ತು ಎಂದು ಪೊಲೀಸ ಇಲಾಖೆ ತಿಳಿಸಿದೆ. ಕುತೂಹಲಕಾರಿ ಸಂಗತಿಯೆಂದರೆ, ಕೋವಿಡ್ ಮುನ್ನಾ ವರ್ಷಗಳಿಗೆ ಹೋಲಿಸಿದರೆ 2022ರಲ್ಲಿ ಕಡಿಮೆ ಅಪಘಾತಗಳು ಸಂಭವಿಸಿವೆ.
ಇದನ್ನೂ ಓದಿ: ನೀವೇ ಕೇಕ್ ಕಟ್ ಮಾಡಿ; ಝೊಮ್ಯಾಟೋ ಡೆಲಿವರಿ ಏಜೆಂಟ್ರನ್ನು ಹೊಸ ವರ್ಷದ ಸಂಭ್ರಮಾಚರಣೆಗೆ ಆಹ್ವಾನಿಸಿದ ವಿಡಿಯೋ ವೈರಲ್
‘ಕಳೆದ ಕೆಲ ವರ್ಷಗಳಲ್ಲಿ ಅಪಘಾತಗಳ ಸಂಖ್ಯೆ ಇಳಿಮುಖಗೊಂಡು ಸಾವು-ನೋವುಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಾರಣವೆಂದರೆ, ಹೆಚ್ಚಿನ ಅಪಘಾತಗಳು ನಗರದ ಹೊರವಲಯಗಳಲ್ಲಿ ಅಂದರೆ ಕೆ ಆರ್ ಪುರಂ, ಕಾಮಾಕ್ಷಿಪಾಳ್ಯ ಮುಂತಾದ ಪ್ರದೇಶಗಳಲ್ಲಿ ನಡೆಯುತ್ತಿವೆ. ಡ್ರೈವಿಂಗ್ ನಲ್ಲಿ ನೈಪುಣ್ಯತೆ ಇಲ್ಲದಿರುವುದು, ಮತ್ತು ನಗರದ ಹೊರವಲಯಗಳಲ್ಲಿನ ಕೆಟ್ಟ ರಸ್ತೆಗಳು ಅಪಘಾತಗಳ ಸಂಖ್ಯೆ ಹೆಚ್ಚುವುದಕ್ಕೆ ಕಾರಣವಾಗಿವೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಡಿಮೆ ಪ್ರಮಾಣದ ಅಪಘಾತಗಳು ಜರುಗುತ್ತಿವೆ. ನಗರದ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 8 ತಿಂಗಳ ಅವಧಿಯನ್ನು ಗಮನಿಸಿದರೆ ರಸ್ತೆ ದುರ್ಘಟನೆಯಲ್ಲಿ ಒಂದೇ ಒಂದು ಸಂಭವಿಸಿಲ್ಲ,’ ಎಂದು ವಿಶೇಷ ಕಮೀಶನರ್ (ಸಂಚಾರ) ಎಮ್ ಎ ಸಲೀಂ ಹೇಳಿದ್ದಾರೆ.
ಹೆಚ್ಚಿರುವ ವಾಹನಗಳ ಸಂಖ್ಯೆ
ಸಂಚಾರಿ ಪೊಲೀಸ್ ಮಾಹಿತಿ ಪ್ರಕಾರ ಕೋವಿಡ್-19 ಪಿಡುಗು ಮುಂಚಿನ ವರ್ಷಗಳಲ್ಲಿ ಪ್ರತಿ 10,000 ವಾಹನಗಳಲ್ಲಿ ಸರಾಸರಿ 6 ಅಪಘಾತಕ್ಕೀಡಾಗುತ್ತಿದ್ದವು. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿರುವುದರಿಂದ 2022 ರಲ್ಲಿ ಅಪಘಾತ ಪ್ರಮಾಣ ಶೇಕಡ 3.53ಕ್ಕೆ ಹೆಚ್ಚಿದೆ.
ಇದನ್ನೂ ಓದಿ: ಬನ್ನೇರುಘಟ್ಟ ಪ್ರದೇಶದಲ್ಲಿ ಹೆದ್ದಾರಿ ಬೇಡ ಎಂಬ ಮನವಿಗೆ ಒಪ್ಪಿದ ಕೇಂದ್ರ ಸಚಿವ ನಿತಿನ್ ಗಡ್ಕರಿ: ಸಿಎಂ ಬೊಮ್ಮಾಯಿ
ಸಂಚಾರಿ ಪೊಲೀಸ್ ಮೂಲಗಳ ಪ್ರಕಾರ ಯಲಹಂಕ, ಚಿಕ್ಕಜಾಲ, ಕಾಮಾಕ್ಷಿಪಾಳ್ಯ, ಮತ್ತು ಕೆಂಗೇರಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಪಘಾತಗಳಿಂದ ಹೆಚ್ಚು ಸಾವು ಸಂಭವಿಸಿವೆ. ಸಲೀಮ್ ಅವರು ಹೇಳುವ ಹಾಗೆ ಹೆಚ್ಚಿನ ಅಪಘಾತಗಳು ಸಾಯಂಕಾಲ 6ರಿಂದ 9 ರ ನಡುವೆ ಸಂಭವಿಸುತ್ತವೆ.
ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




