ಆ.21 ರಿಂದ ನಮ್ಮ ಮೆಟ್ರೋ ನಿಲ್ದಾಣಗಳಲ್ಲೂ ಒನ್ ನೇಷನ್ ಒನ್ ಕಾರ್ಡ್ ಲಭ್ಯ; ಎನ್ಸಿಎಮ್ಸಿ ಅರ್ಜಿ ಸಲ್ಲಿಕೆ ಮಾಹಿತಿ ಇಲ್ಲಿದೆ
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಮ್ಮ ಮೆಟ್ರೋದಲ್ಲಿ ಒನ್ ನೇಷನ್ ಒನ್ ಕಾರ್ಡ್ ಅನುಗುಣವಾಗಿ ನ್ಯಾಷನಲ್ ಕಾಮನ್ ಮೊಬಲಿಟಿ ಕಾರ್ಡ್ಗೆ ಸೋಮವಾರ (ಆ.21) ಚಾಲನೆ ನೀಡಲಿದೆ. NCMC ಕಾರ್ಡ್ ಅನ್ನು ದೇಶದ ಎಲ್ಲ ಸಾರಿಗೆ, ಪೆಟ್ರೋಲ್ ಬಂಕ್, ಎಲ್ಲ ಮೆಟ್ರೋ ಸಾರಿಗೆ ಮತ್ತು ಮಾಲ್‌ಗಳಲ್ಲಿ ಬಳಸಬಹುದಾಗಿದೆ.
ಬೆಂಗಳೂರು (ಆ.20): ನಮ್ಮ ಮೆಟ್ರೋ ಪ್ರಯಾಣಿಕರ ಹಲವು ವರ್ಷಗಳ ಕನಸು ನನಸಾಗಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಮ್ಮ ಮೆಟ್ರೋದಲ್ಲಿ ಒನ್ ನೇಷನ್ ಒನ್ ಕಾರ್ಡ್ ಅನುಗುಣವಾಗಿ ನ್ಯಾಷನಲ್ ಕಾಮನ್ ಮೊಬಲಿಟಿ ಕಾರ್ಡ್ (NCMC) ಗೆ ಸೋಮವಾರ (ಆ.21) ಚಾಲನೆ ನೀಡಲಿದೆ. NCMC ಕಾರ್ಡ್ ಅನ್ನು ದೇಶದ ಎಲ್ಲ ಸಾರಿಗೆ, ಪೆಟ್ರೋಲ್ ಬಂಕ್, ಎಲ್ಲ ಮೆಟ್ರೋ ಸಾರಿಗೆ ಮತ್ತು ಮಾಲ್‌ಗಳಲ್ಲಿ ಬಳಸಬಹುದಾಗಿದೆ.
ಆಗಸ್ಟ 21 ರಿಂದ ಬೆಳಗ್ಗೆ 8 ರಿಂದ 11ರವರೆಗೆ ಸಂಜೆ 5ರಿಂದ ರಾತ್ರಿ 8ರವರೆಗೆ ಕಾರ್ಡ್ ಪಡೆಯಬಹುದು. ಈಗಾಗಲೆ ನಮ್ಮ ಮೆಟ್ರೋ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಕಾರ್ಡ್ ಬಳಕೆಗೆ ತಾಂತ್ರಿಕ ವ್ಯವಸ್ಥೆ ಮಾಡಿದೆ.
ಎನ್ಸಿಎಮ್ಸಿ ಕಾರ್ಡ್ ಪಡೆಯುವುದು ಹೇಗೆ ?
- ಪ್ರಯಾಣಿಕರು ಗ್ರಾಹಕರ ವಿವರಗಳನ್ನು (KYC) NAMMAMETRO.AGSINDIA.COM ವೆಬ್‌ಸೈಟ್ ಅಥವಾ BMRCL RBL Bank NCMC ಌಪ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
- ನೋಂದಣಿ ಸಂಖ್ಯೆ/ ನೋಂದಾಯಿತ ಸಂಖ್ಯೆಯನ್ನು ಟಿಕೆಟ್ ಕೌಂಟರ್ ನಿರ್ವಾಹಕರಿಗೆ ತಿಳಿಸಬೇಕು
- ಕಾರ್ಡ್ಗೆ 50 ರೂ. ಚಾರ್ಜ್ ಮಾಡಲಾಗುತ್ತದೆ
- NCMC ಕಾರ್ಡ್ 50 ರೂ.ಗೆ ಲಭ್ಯವಿದ್ದು ಪ್ರಯಾಣದರಕ್ಕೆ ಶೇ 5 ರಷ್ಟು ರಿಯಾಯಿತಿ ನೀಡಲಾಗಿದೆ.
- ರೂಪೇ ಕಾಮನ್ ಮೊಬಿಲಿಟಿ ಕಾರ್ಡ್ ಗಳು ಎಲ್ಲ RBL ಬ್ಯಾಂಕ್ ಶಾಖೆಗಳಲ್ಲೂ ತೆಗೆದುಕೊಳ್ಳಬಹುದು
- ಮೆಟ್ರೋ ನಿಲ್ದಾಣಗಳಲ್ಲೇ NCMC ಕಾರ್ಡ್ ರೀಚಾರ್ಜ್ ಮಾಡಬಹುದು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ