Nandini lay out: ಬೆಂಗಳೂರಿನಲ್ಲಿ ಹಾಡಹಗಲೇ, ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಆಟೋದಲ್ಲಿ ಹಿಂಬಾಲಿಸಿ ಕೊಲೆ

| Updated By: ಸಾಧು ಶ್ರೀನಾಥ್​

Updated on: Feb 09, 2022 | 10:56 AM

ರಸಿಂಹಸ್ವಾಮಿ ಲೇಔಟ್‌ನಲ್ಲಿ ಬೆಳಗ್ಗೆ 10.10ಕ್ಕೆ ಈ ಕೊಲೆ ನಡೆದಿದೆ. ಆಟೋದಲ್ಲಿ ಫಾಲೋ ಮಾಡಿಕೊಂಡು ಬಂದಿದ್ದ ಆರೋಪಿ, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

Nandini lay out: ಬೆಂಗಳೂರಿನಲ್ಲಿ ಹಾಡಹಗಲೇ, ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಆಟೋದಲ್ಲಿ ಹಿಂಬಾಲಿಸಿ ಕೊಲೆ
Nandini lay out: ಬೆಂಗಳೂರಿನಲ್ಲಿ ಹಾಡಹಗಲೇ, ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಆಟೋದಲ್ಲಿ ಹಿಂಬಾಲಿಸಿ ಕೊಲೆ
Follow us on

ಬೆಂಗಳೂರು: ಬೆಂಗಳೂರಿನಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ ನಡೆದಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ನರಸಿಂಹಸ್ವಾಮಿ ಲೇಔಟ್‌ನಲ್ಲಿ ಬೆಳಗ್ಗೆ 10.10ಕ್ಕೆ ಈ ಕೊಲೆ ನಡೆದಿದೆ. ಆಟೋದಲ್ಲಿ ಫಾಲೋ ಮಾಡಿಕೊಂಡು ಬಂದಿದ್ದ ಆರೋಪಿ, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ನಂದಿನಿ ಲೇಔಟ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಠಾಣೆ ಪೊಲೀಸರು ಗಾಂಜಾ ಮಾರುತ್ತಿದ್ದ ರಾಕೇಶ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 1 ಕೆಜಿ ಗಾಂಜಾ, ಬೈಕ್, ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ.

ಮೃತಪಟ್ಟ ಗಂಡನ ನಕಲಿ ದಾಖಲೆ ನೀಡಿ, ಮೂರು ಕೋಟಿ ವಿಮೆ ಕ್ಲೈಮ್!
ಬೆಂಗಳೂರು: ಮೃತಪಟ್ಟ ಗಂಡನ ವಿಮಾ ಪಾಲಿಸಿಯ (insurance) ನಕಲಿ ದಾಖಲೆ ಸೃಷ್ಟಿಸಿ, ಮೂರು ಕೋಟಿ ರೂಪಾಯಿ ವಿಮೆ ಕ್ಲೈಮ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಪತ್ನಿಯ ವಿರುದ್ದ ಇನ್ಶ್ಯೂರೆನ್ಸ್ ಕಂಪನಿಯು ಕೋರಮಂಗಲ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿದೆ. ಕೃಷ್ಣಪ್ರಸಾದ್ ಗಾರಲಪಟ್ಟಿ ಎಂಬುವರು ಟಾಟಾ ಎ ಐ ಎ ಲೈಫ್​ ಇನ್ಶ್ಯೂರೆನ್ಸ್ ಕಂಪನಿಯಲ್ಲಿ ವಿಮೆ ಪಡೆದಿದ್ದರು. ವಾರ್ಷಿಕ 51,777 ರೂಪಾಯಿ ಕಟ್ಟುವ ಪಾಲಿಸಿ ಪಡೆದಿದ್ದರು. ಆದರೆ ಮೂರು ವರ್ಷ ಪಾಲಿಸಿ ಕಟ್ಟುವ ಮುನ್ನ ಕೃಷ್ಣ ಪ್ರಸಾದ್ ಮೃತಪಟ್ಟಿದ್ದರು. ಕೃಷ್ಣ ಪ್ರಸಾದ್ ಹೆಂಡತಿ ಸುಪ್ರಿಯಾರನ್ನ (wife) ನಾಮಿನಿ‌ ಮಾಡಿದ್ದರು.

ಈ ಬಾಬತ್ತಿನಲ್ಲಿ ಕೃಷ್ಣ ಪ್ರಸಾದ್ ಪತ್ನಿ ಸುಪ್ರಿಯಾ ಅನ್​ಲೈನ್ ನಲ್ಲಿ ಡೆತ್ ಕ್ಲೈಮ್ ಮಾಡಿದ್ದರು. ಇನ್ಸ್ಯೂರೆನ್ಸ್ ಕಂಪನಿ‌ಯೂ ಮೂರು ಕೋಟಿ ರೂಪಾಯಿ ಹಣವನ್ನ ಸುಪ್ರಿಯಾ ಖಾತೆಗೆ ವರ್ಗಾವಣೆ ಮಾಡಿತ್ತು. ಈ ಮಧ್ಯೆ ಬೆಳಕಿಗೆ ಬಂದ ವಿಷಯವೆಂದರೆ ಕೃಷ್ಣಪ್ರಸಾದ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುಪ್ರಿಯಾ ದಾಖಲೆ ಸಿಲ್ಲಿಸಿದ್ದರು. ಆದರೆ ಕೃಷ್ಣಪ್ರಸಾದ್ ಮೃತಪಟ್ಟಿದ್ದು ಕ್ಯಾನ್ಸರ್ ನಿಂದ. ಕ್ಯಾನ್ಸರ್ ನಿಂದ ಮೃತಪಟ್ಟರೆ ವಿಮೆ ಆನ್ವಯ ಆಗಲ್ಲ. ಹೀಗಾಗಿ ನಕಲಿ ದಾಖಲೆ ನೀಡಿ ಸುಪ್ರಿಯಾ ವಿಮೆ ಕ್ಲೈಮ್ ಮಾಡಿರುವುದು ಪತ್ತೆಯಾಗಿದೆ. ಸದ್ಯ ಸುಪ್ರಿಯಾ ವಿರುದ್ದ ಕ್ರಮಕ್ಕೆ ವಿಮಾ ಕಂಪನಿಯಿಂದ ದೂರು ಬಂದಿದೆ. ಸುಪ್ರಿಯಾಗಾಗಿ ಕೋರಮಂಗಲ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ:
ಮೃತಪಟ್ಟ ಗಂಡನ ನಕಲಿ ದಾಖಲೆ ನೀಡಿ, ಮೂರು ಕೋಟಿ ವಿಮೆ ಕ್ಲೈಮ್! ಪತ್ನಿಗಾಗಿ ಕೋರಮಂಗಲ ಪೊಲೀಸರಿಂದ ಹುಡುಕಾಟ

ಇದನ್ನೂ ಓದಿ:
ಹಿಜಾಬ್​ ಮುಖ್ಯ ಅಲ್ಲ; ಶಿಕ್ಷಣ ಎಲ್ಲದನ್ನ ಮೀರಿದೆ -ಗಾಯಕಿ ಸುಹಾನಾ ಸೈಯದ್

Published On - 10:44 am, Wed, 9 February 22