ಐಪಿಎಸ್ ಅಧಿಕಾರಿ ಹೆಸರಲ್ಲಿ ವಂಚನೆಗೆ ಯತ್ನ: ಫೇಕ್​​ ಅಕೌಂಟ್​​ನಿಂದ ಹಣಕ್ಕೆ ಡಿಮ್ಯಾಂಡ್​

ಐಪಿಎಸ್ ಅಧಿಕಾರಿ ಅಕ್ಷಯ್ ಎಂ. ಹಾಕೆ ಹೆಸರಿನಲ್ಲಿ ವಾಟ್ಸ್ಯಾಪ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡಲಾಗಿದೆ.  ಡಿಸಿಪಿ ಅಕ್ಷಯ್ ಅವರ ಫೋಟೋ ಬಳಸಿ ರಚಿಸಿದ ನಕಲಿ ಅಕೌಂಟ್​​ನಿಂದ ಹಣಕ್ಕಾಗಿ ವಂಚಕರು ಸಂದೇಶ ಕಳುಹಿಸಿದ್ದಾರೆ. ಸ್ನೇಹಿತರು ಈ ವಿಷಯವನ್ನು ಗಮನಕ್ಕೆ ತಂದಿದ್ದು, ಸಾರ್ವಜನಿಕರು ಇಂತಹ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಅಧಿಕಾರಿ ಮನವಿ ಮಾಡಿದ್ದಾರೆ.

ಐಪಿಎಸ್ ಅಧಿಕಾರಿ ಹೆಸರಲ್ಲಿ ವಂಚನೆಗೆ ಯತ್ನ: ಫೇಕ್​​ ಅಕೌಂಟ್​​ನಿಂದ ಹಣಕ್ಕೆ ಡಿಮ್ಯಾಂಡ್​
ಐಪಿಎಸ್ ಅಧಿಕಾರಿ ಹೆಸರಲ್ಲಿ ವಂಚನೆಗೆ ಯತ್ನ
Edited By:

Updated on: Jan 09, 2026 | 5:32 PM

ಬೆಂಗಳೂರು, ಜನವರಿ 09: ಇತ್ತೀಚೆಗೆ ಆನ್​​ಲೈನ್​​ ವಂಚನೆ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಜನ ಸಾಮಾನ್ಯರು ಮಾತ್ರವಲ್ಲದೆ ಗಣ್ಯರು, ಅಧಿಕಾರಿಗಳ ಸಾಮಾಜಿಕ ಜಾಲತಾಣಗಳ ಅಕೌಂಟ್​​ ಮತ್ತು ವಾಟ್ಯಾಪ್​​ಗಳನ್ನೂ ಹ್ಯಾಕ್​​ ಮಾಡಿ ಹಣ ಪೀಕುವವರ ಸಂಖ್ಯೆ ಹೆಚ್ಚುತ್ತಿದೆ. ಇವುಗಳ ನಡುವೆ ಐಪಿಎಸ್ ಅಧಿಕಾರಿ ಅಕ್ಷಯ್ ಎಂ. ಹಾಕೆ ಹೆಸರಿನಲ್ಲಿಯೇ ವಂಚನೆಗೆ ಯತ್ನ ನಡೆಸಿರೋದು ಬೆಳಕಿಗೆ ಬಂದಿದೆ.

ವಾಟ್ಸಾಪ್​ನಲ್ಲಿ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿರುವ ಅಕ್ಷಯ್ ಅವರ ಫೋಟೋ, ಹೆಸರು ಬಳಸಿಕೊಂಡು ವಂಚಕರು ಹಣ ಕೇಳುತ್ತಿದ್ದು, ಬೇರೆ ನಂಬರ್​ನಿಂದ ಅಕೌಂಟ್ ರಚಿಸಿರೋದು ಗೊತ್ತಾಗಿದೆ. ಹಣ ನೀಡುವಂತೆ IPS ಅಧಿಕಾರಿ ಸ್ನೇಹಿತರಿಗೆ ಮೆಸೇಜ್ ಮಾಡಿದ್ದು, ವಿಷಯವನ್ನು ಸ್ನೇಹಿತರು ಡಿಸಿಪಿ ಅಕ್ಷಯ್ ಗಮನಕ್ಕೆ ತಂದಿದ್ದಾರೆ. ಈಗಾಗಲೇ 3-4 ಸ್ನೇಹಿತರಿಗೆ ವಂಚಕರು ಮೆಸೇಜ್ ಕಳುಹಿಸಿದ್ದು, ವಂಚಕರ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಅಕ್ಷಯ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಆನ್​ಲೈನ್ ವ್ಯವಹಾರದ ವೇಳೆ ವಂಚನೆಯಿಂದ ತಪ್ಪಿಸಿಕೊಳ್ಳುವ ಕ್ರಮಗಳಿವು

ವಂಚಕರ ಮೆಸೇಜ್​​ನಲ್ಲಿ ಏನಿದೆ?

ತುರ್ತಾಗಿ ಒಂದು ಪ್ರಾಸ್ಪೆಕ್ಟ್‌ ಖಾತೆಗೆ ಹಣ ಜಮಾ ಮಾಡಬೇಕಿದ್ದು, ನನ್ನ ಆನ್‌ಲೈನ್ ಬ್ಯಾಂಕ್ ವರ್ಗಾವಣೆಯಲ್ಲಿ ಸಮಸ್ಯೆ ಎದುರಾಗಿದೆ. ಅಲ್ಲದೆ ಪ್ರಸ್ತುತ ನಾನು ಒಂದು ಸಭೆಯಲ್ಲಿ ಭಾಗವಹಿಸಬೇಕಿರುವ ಕಾರಣ ನೀವು ಹಣ ವರ್ಗಾಯಿಸಲು ಸಾಧ್ಯವೇ? ಹಾಗಿದ್ದರೆ ನಾನು ಮುಂದಿನ ವಿವರಗಳನ್ನು ನೀಡುತ್ತೇನೆ. ನೀವು ನೀಡಿದ ಹಣವನ್ನು ದಿನದ ಅಂತ್ಯದೊಳಗೆ ನಾನು ನಿಮಗೆ ಮರುಪಾವತಿಸುತ್ತೇನೆ ಎಂಬ ಸಂದೇಶವನ್ನು ವಂಚಕರು ಕಳುಹಿಸಿದ್ದಾರೆ. ವಂಚನೆ ಯತ್ನ ವಿಷಯವನ್ನು ಸ್ವತಃ ಅಧಿಕಾರಿಯೇ ಹಂಚಿಕೊಂಡಿದ್ದು, ವಾಟ್ಸ್ಯಾಪ್​​ನ ನಕಲಿ ಖಾತೆಯಿಂದ ಕೆಲ ನನ್ನ ಪರಿಚಿತರಿಗೆ ಹಣ ಕೇಳಿ ಸಂದೇಶ ಬಂದಿದೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.