ಶೃಂಗೇರಿ ವ್ಯಕ್ತಿಗೆ ಕೋಟ್ಯಂತರ ರೂ ವಂಚನೆ: ಷೇರು ಮಾರ್ಕೆಟ್ ಬಗ್ಗೆ ಇರಲಿ ಎಚ್ಚರಿಕೆ
ಚಿಕ್ಕಮಗಳೂರಿನಲ್ಲಿ ಆನ್‌ಲೈನ್ ಷೇರು ಮಾರ್ಕೆಟ್ ವಂಚನೆ ಬೆಳಕಿಗೆ ಬಂದಿದೆ. ರಿಲಯನ್ಸ್ ಸೆಕ್ಯುರಿಟೀಸ್ ಹೆಸರಿನಲ್ಲಿ ವಾಟ್ಸಾಪ್ ಲೋಗೋ ಬಳಸಿ 72 ವರ್ಷದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 3.27 ಕೋಟಿ ರೂ. ವಂಚಿಸಿರುವಂತಹ ಘಟನೆ ನಡೆದಿದೆ. ಸದ್ಯ ಚಿಕ್ಕಮಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಿಕ್ಕಮಗಳೂರು, ನವೆಂಬರ್ 28: ಷೇರು ಮಾರ್ಕೆಟ್ (Stock Market) ಹೆಸರಲ್ಲಿ ಆನ್‌ಲೈನ್ ದಂಧೆಕೋರರು ಕೋಟ್ಯಂತರ ರೂ ವಂಚಿಸಿರುವಂತಹ (Fraud) ಘಟನೆ ನಡೆದಿದೆ. ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಹೆಸರಲ್ಲಿ ನಕಲಿ ಖಾತೆ ತೆರೆದು 72 ವರ್ಷದ ಶೃಂಗೇರಿ ಮೂಲದ ಶಂಕರ್ ನಟರಾಜನ್ ಎಂಬುವವರಿಂದ ಬರೋಬ್ಬರಿ 3 ಕೋಟಿ 27 ಲಕ್ಷ ರೂ ವಂಚಿಸಲಾಗಿದೆ. ಸದ್ಯ ಚಿಕ್ಕಮಗಳೂರು ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ನಡೆದದ್ದೇನು?
ಖದೀಮರು ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಹೆಸರಲ್ಲಿ ನಕಲಿ ಖಾತೆಯೊಂದು ತೆರೆದಿದ್ದಾರೆ. ಬಳಿಕ ವಾಟ್ಸಾಪ್ನಲ್ಲಿ ಬಂದ ಲೋಗೋ ನಂಬಿ ಶಂಕರ್ ನಟರಾಜನ್ ಮೋಸ ಹೋಗಿದ್ದಾರೆ. ನೀವು ಹೂಡಿಕೆ ಮಾಡಿದ ಹಣ ಲಾಭ ಬಂದಿದೆ. ನಿಮ್ಮ ಖಾತೆಯಲ್ಲಿ 9 ಕೋಟಿ ರೂ ಹಣವಿದ್ದು ಅದನ್ನ ಪಡೆಯಲು 1 ಕೋಟಿ 9 ಲಕ್ಷ ರೂ ಕಮಿಷನ್ ಹಾಕುವಂತೆ ವಂಚಕರು ಬೇಡಿಕೆ ಇಟ್ಟಿದ್ದಾರೆ. ನಂತರ ಹಂತ ಹಂತವಾಗಿ 3 ಕೋಟಿ 27 ಲಕ್ಷ ರೂ. ಹಣ ಹಾಕಿಸಿಕೊಂಡು ವಂಚಿಸಿದ್ದಾರೆ. ಮಹಾರಾಷ್ಟ್ರದ ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ವೇಳೆ ವಂಚನೆ ಬಯಲಾಗಿದೆ.
ವ್ಯಾಪಾರಿ ಬಳಿಯಿಂದ ಲಕ್ಷಾಂತರ ರೂ ಚಿನ್ನಾಭರಣ ಲಪಟಾಯಿಸಿದ ಇಬ್ಬರು ಪಿಎಸ್ಐಗಳು
ಜನರನ್ನು ದರೋಡೆಕೋರರಿಂದ ರಕ್ಷಣೆ ಮಾಡಬೇಕಿದ್ದ ಪೊಲೀಸರೇ ಇಲ್ಲಿ ದರೋಡೆಕೋರರಾಗಿದ್ದು, ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ಲಪಟಾಯಿಸಿ, ಇದೀಗ ಜೈಲು ಪಾಲಾಗಿರುವಂತಹ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮಾಳಪ್ಪ ಚಿಪ್ಪಲಕಟ್ಟಿ ಹಾಗೂ ಪ್ರವೀಣ್ ಕುಮಾರ್ ಎಂಬುವವರು ಹಾವೇರಿಯಿಂದ ದಾವಣಗೆರೆಯ ಪೂರ್ವ ವಲಯ ಐಜಿಪಿ ಕಚೇರಿಗೆ ವರ್ಗಾವಣೆಯಾಗಿದ್ದ ಪೊಲೀಸ್ ಅಧಿಕಾರಿಗಳು. ಇಬ್ಬರಿಗೂ ಇನ್ನು ಕೆಲವೇ ದಿನಗಳಲ್ಲಿ ಸ್ಥಳ ನಿಗದಿ ಆಗಬೇಕಿತ್ತು. ಅಷ್ಟರೊಳಗೆ ಮಾಡಬಾರದನ್ನು ಮಾಡಿ ಯಾವ ಠಾಣೆನಲ್ಲಿ ಸೇವೆ ಸಲ್ಲಿಸಬೇಕಿತ್ತೋ ಅದೇ ಠಾಣೆಯಲ್ಲಿ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು, ಮೈಸೂರು ಸೇರಿ ರಾಜ್ಯದ 10 ಕಡೆ ಲೋಕಾಯುಕ್ತ ರೇಡ್: ದಾಳಿ ವೇಳೆ ಸಿಕ್ಕಿದ್ದೇನು?
ಕಳೆದ ನವೆಂಬರ್ 24ರ ಮಧ್ಯರಾತ್ರಿ 12.30ಕ್ಕೆ ಕಾರವಾರ ಮೂಲದ ಚಿನ್ನದ ವ್ಯಾಪಾರಿ ವಿಶ್ವನಾಥ್ ಅರ್ಕಸಾಲಿ ದಾವಣಗೆರೆಯ ಚಿನ್ನದ ವ್ಯಾಪಾರಿಗಳಿಂದ ಗಟ್ಟಿ ಚಿನ್ನ ಪಡೆದು ಆಭರಣ ತಯಾರಿಸಿ ನೀಡುತ್ತಿದ್ದರು. ಅದರಂತೆ ಚಿನ್ನದ ವ್ಯಾಪಾರಿಗಳ ಬಳಿ ಗಟ್ಟಿ ಚಿನ್ನ, ಉಂಗುರ ಪಡೆದು ಕಾರವಾರಕ್ಕೆ ತೆರಳಲು ಕೆಎಸ್ಆರ್ಟಿಸಿ ಬಸ್ನಲ್ಲಿ ಕೂತಿದ್ದರು. ಇದರ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಇಬ್ಬರು ಪಿಎಸ್ಐಗಳು ಸಿವಿಲ್ ಡ್ರೆಸ್ನಲ್ಲಿ ಹೋಗಿ ಚಿನ್ನದ ವ್ಯಾಪಾರಿಯ ಕೊರಳಪಟ್ಟಿ ಹಿಡಿದು ಕೆಳಗಿಳಿಸಿ ತಾವು ಪೊಲೀಸ್ ಅಧಿಕಾರಿಗಳೆಂದು ಬೆದರಿಕೆ ಹಾಕಿದ್ದಾರೆ. ಬಳಿಕ ನೀವು ಪೊಲೀಸ್ ಅಧಿಕಾರಿ ಅಂತಾ ನಾನು ಹೇಗೆ ನಂಬಲಿ ಎಂದು ವಿಶ್ವನಾಥ್ ಪ್ರಶ್ನಿಸಿದ್ದರಿಂದ ಆಗ ಪಿಎಸ್ಐಗಳಾದ ಮಾಳಪ್ಪ ಹಾಗೂ ಪ್ರವೀಣ್ ಐಡಿ ತೋರಿಸಿ ಬಸ್ ನಿಲ್ದಾಣದ ಹೊರಗೆ ನಿಂತ ಪೊಲೀಸ್ ಜೀಪ್ ಹಾಗೂ ನಕಲಿ ಗನ್ ತೋರಿಸಿ ಚಿನ್ನದ ವ್ಯಾಪಾರಿಯ ಬಳಿ ಇದ್ದ ಸುಮಾರು 80 ಗ್ರಾಂ ಚಿನ್ನವನ್ನು ಕಸಿದುಕೊಂಡಿದ್ದರು.
ಇದನ್ನೂ ಓದಿ: ಬೆಂಗಳೂರು: 7 ಕೋಟಿ ರೂ ಹೊತ್ತೊಯ್ದರೂ CMS ಸಿಬ್ಬಂದಿಗೆ ಊಟದ ಚಿಂತೆ; ದರೋಡೆಯ ಮತ್ತಷ್ಟು ಸಂಗತಿ ಬೆಳಕಿಗೆ
ಅನುಮಾನಗೊಂಡ ಚಿನ್ನದ ವ್ಯಾಪಾರಿ ಕೆಟಿಜೆ ನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಚಿನ್ನದ ವ್ಯಾಪಾರಿಯಿಂದ ದರೋಡೆ ಮಾಡಿ ಇಬ್ಬರು ಪಿಎಸ್ಐ ಗಳನ್ನು ಹಾಗೂ ಇವರಿಗೆ ಸಹಾಯ ಮಾಡಿದ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಿನಾಯಕ ನಗರದ ಸತೀಶ್ ರೇವಣ್ಕರ್, ಶಿರಸಿ ಮೂಲದ ನಾಗರಾಜ್ ರೇವಣ್ಕರ್ ನನ್ನು ಬಂಧಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:28 pm, Fri, 28 November 25




