ಬೆಂಗಳೂರು, ಸೆ.30: ರಾಜ್ಯ ಸರ್ಕಾರದ ವತಿಯಿಂದ ಈ ಬಾರಿ 68 ನೇ ಕನ್ನಡ ರಾಜ್ಯೋತ್ಸವ(Kannada Rajyotsava) ಆಚರಣೆಯನ್ನು ಆಚರಿಸುತ್ತಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಈ ಹಿನ್ನಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅ.01 ರಿಂದ ಅ. 15 ರವರೆಗೆ ನಾಮನಿರ್ದೇಶನ ಮಾಡಬಹುದಾಗಿದೆ.
ಹೌದು, ಈ ಬಾರಿ ಕೂಡ ಸಾಧಕರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲು ಸೇವಾ ಸಿಂಧು ಪೋರ್ಟಲ್‌ನ ವೆಬ್‌ಸೈಟ್ https://sevasindhu.Karnataka.gov.in ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.
2023 ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು ಸಲಹಾ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರದ ಸಚಿವಾಲಯವು ಆದೇಶ ಹೊರಡಿಸಿದೆ. ಸಮಿತಿಯ ಸದಸ್ಯರ ಹೆಸರು ಇಲ್ಲಿದೆ. ಅಧ್ಯಕ್ಷರಾಗಿ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವರು, ಸದಸ್ಯರಾಗಿ ಸರ್ಕಾರದ ಕಾರ್ಯದರ್ಶಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರೊ. ಜಾಣಗೆರೆ ವೆಂಕಟರಾಮಯ್ಯ, ಡಾ. ಹೆಚ್.ಎಲ್. ಪುಷ್ಪ , ಡಾ. ವೀರಣ, ದಂಡೆ, ಡಾ. ಮೂಡಾಕೂಡು ಚಿನ್ನಸ್ವಾಮಿ, ಶ್ರೀ ಅಲ್ಲಮಪುಭು ಬೆಟ್ಟದೂರ, ಶ್ರೀ ಕಾ.ತ. ಚಿಕ್ಕಣ, ಡಾ. ಸಿ.ಆರ್. ಚಂದ್ರಶೇಖ, ಶ್ರೀ ಪಿಂಡಿಪಾವನಹಳ್ಳಿ ಮುನಿವೆಂಕಟಪ್ಪ, ಡಾ. ಕೃಷ್ಣಮೂರ್ತಿ, ಹನೂರು, ಶ್ರೀ ಟಾಕಪ್ಪ ಕಣ್ಣೂರು, ಶ್ರೀ ಪಿಚ್ಚಳ್ಳಿ ಶ್ರೀನಿವಾಸ್, ಡಾ. ವಿಠಲ್ ಐ. ಬೆಣಗಿ, ನಿವೃತ್ತ ಉಪ ಕುಲಪತಿಗಳು, ಡಾ. ಸಣ್ಣರಾಮು, ಶ್ರೀ ವೆಂಕಟರಮಣಯ್ಯ, ಡಾ. ಎಮ್.ಎಸ್. ಮೂರ್ತಿ, ಡಾ. ಗೀತಾ, ಶಿವಮೊಗ್ಗ, ಡಾ. ವಿಠಲ್ ಐ. ಬೆಣಗಿ, ನಿವೃತ್ತ ಉಪ ಕುಲಪತಿಗಳು, ಡಾ. ಸಣ್ಣರಾಮು, ಶ್ರೀ ವೆಂಕಟರಮಣಯ್ಯ,ಡಾ. ಜಯದೇವಿ ಜಂಗಮ ಶೆಟ್ಟಿ, ಶ್ರೀ ಐಕೋಡಿ ಗೋವಿಂದಪ್ಪ, ಶ್ರೀ ಸಾಧುಕೋಕಿಲ, ಶ್ರೀಮತಿ ರೀತು ಅಬ್ರಹಾಂ ಶ್ರೀಮತಿ ಸುಕನ್ಯಾ ಪುಭಾಕ, ಶ್ರೀ ಫಯಾಜ್ ಖಾನ್, ಶ್ರೀ ಹೃಷಿಕೇಶ್ ಬಹದ್ದೂರ್ ದೇಸಾಯಿ, ಶ್ರೀ ನರಸಿಂಹಲು ವಡವಾಟಿ, ಶ್ರೀ ಡಿ.ಎನ್.ನರಸಿಂಹರಾಜು, ನಿವೃತ್ತ ಐ.ಎ.ಎಸ್. ಅಧಿಕಾರಿ, ಶ್ರೀ ಪುರುಷೋತ್ತಮ ಬಿಳಿಮಲೆ, ಶ್ರೀ ಚನ್ನಬಸವಣ್ಯ ಪ್ರಕಾಶಕರು, ಶ್ರೀ ಶೈಲೇಶ್ ಚಂದ್ರಗುಪ್ತ, ಶ್ರೀ ಜೆ. ಲೋಕೇಶ್ ಸೇರಿ ಒಟ್ಟು 39 ಜನರನ್ನು ಆಯ್ಕೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:31 pm, Sat, 30 September 23