Nadaprabhu Kempegowda: ನೆಲಮಂಗಲದಲ್ಲಿ ನಾಡ ಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಮಸಿ, ಭುಗಿಲೆದ್ದ ಆಕ್ರೋಶ

| Updated By: ಆಯೇಷಾ ಬಾನು

Updated on: Jul 07, 2023 | 2:37 PM

ಕುಣಿಗಲ್ ಬೈಪಾಸ್ ಸರ್ಕಲ್​ನ ರಾಜ್ಯ ಒಕ್ಕಲಿಗರ ವೇದಿಕೆಯ ಬೋರ್ಡ್​ನಲ್ಲಿದ್ದ ಕೆಂಪೇಗೌಡರ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ.

Nadaprabhu Kempegowda: ನೆಲಮಂಗಲದಲ್ಲಿ ನಾಡ ಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಮಸಿ, ಭುಗಿಲೆದ್ದ ಆಕ್ರೋಶ
ಕೆಂಪೇಗೌಡ ಹೋರಾಟ ಬಳಗದವರಿಂದ ಪ್ರತಿಭಟನೆ
Follow us on

ನೆಲಮಂಗಲ: ನಾಡ ಪ್ರಭು ಕೆಂಪೇಗೌಡರ(Nadaprabhu Kempegowda) ಭಾವಚಿತ್ರಕ್ಕೆ ಮಸಿ ಬಳಿಯಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಸರ್ಕಲ್​ನ ರಾಜ್ಯ ಒಕ್ಕಲಿಗರ ವೇದಿಕೆಯ ಬೋರ್ಡ್​ನಲ್ಲಿದ್ದ ಕೆಂಪೇಗೌಡರ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ. ಈ ಹಿನ್ನೆಲೆ ಕಿಡಿಗೇಡಿಗಳನ್ನು ಬಂಧಿಸುವಂತೆ ಪ್ರತಿಭಟನೆ(Protest) ನಡೆಸಲಾಗುತ್ತಿದೆ.

ಕುಣಿಗಲ್ ಬೈಪಾಸ್‌ನಲ್ಲಿ ಅಳವಡಿಸಲಾಗಿದ್ದ ರಾಜ್ಯ ಒಕ್ಕಲಿಗ ಜಾಗೃತಿ ಸಂಘದ ಬೋರ್ಡ್‌ನಲ್ಲಿ ಕೆಂಪೇಗೌಡರ ಭಾವಚಿತ್ರವನ್ನು ಚಿತ್ರಿಸಲಾಗಿತ್ತು. ಆದರೆ ಕಿಡಿಗೇಡಿಗಳು ಭಾವಚಿತ್ರಕ್ಕೆ ಮಸಿ ಬಳಿದಿದ್ದಾರೆ. ಹೀಗಾಗಿ ಭಾವಚಿತ್ರಕ್ಕೆ ಮಸಿ ಬಳಿದವರನ್ನು ಬಂಧಿಸುವಂತೆ ಕೆಂಪೇಗೌಡ ಹೋರಾಟ ಬಳಗದವರಿಂದ ಪ್ರತಿಭಟನೆ ನಡೆಯುತ್ತಿದೆ. ನೂರಾರು ಜನ ಕೆಂಪೇಗೌಡ ಬಳಗದ ಹೋರಾಟಗಾರರು ಕಪ್ಪುಪಟ್ಟಿ‌ ಧರಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಇನ್ನು ಕೆಲಕಾಲ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಮಾನವ ಸರಪಳಿ ರಚಿಸಿ ಮಸಿ ಬಳಿದವರ ಬಂಧನಕ್ಕೆ ಆಗ್ರಹಿಸಲಾಗಿದೆ. ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಸದ್ಯ ಸ್ಥಳಕ್ಕೆ ಆಗಮಿಸಿದ‌ ನೆಲಮಂಗಲ ನಗರ ಪೊಲೀಸರು ಪ್ರತಿಭಟನಾಕಾರರ ಮನಹೊಲಿಸಿ, ಆದಷ್ಟು ಬೇಗ ಈ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಗಂಡನಿಗೆ ಬಿರಿಯಾನಿಯಲ್ಲಿ ನಿದ್ರೆ ಮಾತ್ರೆ ಹಾಕಿ ನಿದ್ದೆ ಮಾಡಿಸಿದಳು, ಬಳಿಕ ಪ್ರಿಯನಿಗೆ ಕರೆ ಮಾಡಿ ಕರೆಯಿಸಿಕೊಂಡಳು.. ಆಮೇಲೆ !?

ಶಿಕ್ಷಕಿಗೆ ಸಹೋದ್ಯೋಗಿ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ: ಎಫ್‌ಐಆರ್​ ದಾಖಲು

ಚಿಕ್ಕಬಳ್ಳಾಪುರ: ಶಾಲಾ ಶಿಕ್ಷಕಿಗೆ ಸಹೋದ್ಯೋಗಿ ಶಿಕ್ಷಕ ಲೈಂಗಿಕ ಕಿರುಕುಳ (harassment) ನೀಡಿದ ಎಂಬ ಆರೋಪ ಕೇಳಿಬಂದಿದ್ದು ಶಿಕ್ಷಕನ ಮೇಲೆ ಎಫ್​ಐಆರ್​ ದಾಖಲಾಗಿದೆ. ಜಿಲ್ಲೆಯ ಮಂಚೇನಹಳ್ಳಿಯ ಆಚಾರ್ಯ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ರಂಗಧಾಮಯ್ಯ ವಿರುದ್ಧ ಮಂಚೇನಹಳ್ಳಿ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 354(A), 354(D), 504ರಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಮಹಿಳೆಯರ ವಿಶ್ರಾಂತಿ ಕೊಠಡಿಗೆ ಆಗಮಿಸಿ ಕಿರುಕುಳ ನೀಡಿರುವುದಾಗಿ ಆರೋಪ ಕೇಳಿ ಬಂದಿದೆ.

ಅಷ್ಟೇ ಅಲ್ಲದೇ ಮನೆಗೆ ಬಂದರೆ ಮಾತ್ರ ಶಾಲೆಯ ದಿನವಹಿ ದಾಖಲಾತಿ ನೀಡುವುದಾಗಿ ಆರೋಪಿಸಲಾಗಿದೆ. ಶಿಕ್ಷಕಿ ಹೋದ ಕಡೆಯೆಲ್ಲಾ ಬೆನ್ನಟ್ಟಿ ಪ್ರೀತಿಸುವಂತೆ ಪೀಡಿಸಿದ್ದಾರೆ ಎನ್ನಲಾಗಿದೆ. ಸಹೋದ್ಯೋಗಿಯಿಂದ ನೊಂದು ಸಹ ಶಿಕ್ಷಕಿ ಪೊಲೀಸರ ಮೊರೆ ಹೋಗಿದ್ದು, ಶಿಕ್ಷಕಿ ದೂರಿನ ಮೇರೆಗೆ ಶಿಕ್ಷಕ ಆರ್‌.ರಂಗಧಾಮಯ್ಯ ವಿರುದ್ಧ ಎಫ್‌ಐಆರ್​ ದಾಖಲು ಮಾಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:11 pm, Fri, 7 July 23