ಗಂಡನಿಗೆ ಬಿರಿಯಾನಿಯಲ್ಲಿ ನಿದ್ರೆ ಮಾತ್ರೆ ಹಾಕಿ ನಿದ್ದೆ ಮಾಡಿಸಿದಳು, ಬಳಿಕ ಪ್ರಿಯನಿಗೆ ಕರೆ ಮಾಡಿ ಕರೆಯಿಸಿಕೊಂಡಳು.. ಆಮೇಲೆ !?
ಅಷ್ಟೇ ಸಾಲದು ಅಂತಾ ಇಬ್ಬರೂ ಸೇರಿಕೊಂಡು ಕೋಟರಾಜುವಿನ ಕುತ್ತಿಗೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾರೆ.
ವಿವಾಹೇತರ ಸಂಬಂಧಗಳ ಭ್ರಮೆಯಲ್ಲಿ ಸಿಲುಕುವ ಕೆಲವರು ಎಂಥಹುದ್ದೇ ಅಪರಾಧವೆಸಗಲು ಹಿಂಜರಿಯುವುದಿಲ್ಲ. ಸ್ವಂತ ಮಕ್ಕಳ ಭವಿಷ್ಯದ ಬಗ್ಗೆಯೂ ಅವರು ಕಾಳಜಿ ವಹಿಸುವುದಿಲ್ಲ. ವೇದಮಂತ್ರಗಳ ಸಾಕ್ಷಿಯಾಗಿ ಸಪ್ತಪದಿ ತುಳಿದ ಮೇಲೂ… ಪರದೇಶಿಗಳ ಮೋಹದಲ್ಲಿ ಸಂಗಾತಿಗಳನ್ನೇ ಕೊಲ್ಲಲೂ ಹಿಂಜರಿಯುವುದಿಲ್ಲ. ಇತ್ತೀಚೆಗಷ್ಟೇ ವಿಜಯನಗರದಲ್ಲಿ ಇಂತಹದ್ದೇ ಘಟನೆ ಬೆಳಕಿಗೆ ಬಂದಿದೆ.
ಸ್ಥಳೀಯ ಕುಮ್ಮರಿಬೀದಿಯಲ್ಲಿ ವಾಸವಾಗಿರುವ ಕೋಟರಾಜು ಅವರಿಗೆ ಪತ್ನಿ (Wife) ಶ್ರೀದೇವಿ ಮತ್ತು ಮಕ್ಕಳಿದ್ದಾರೆ. ಅವರೆಲ್ಲರೂ ಎಂದಿನಂತೆ ಬುಧವಾರ ರಾತ್ರಿ ಮಲಗಲು ಸಿದ್ಧತೆ ನಡೆಸಿದ್ದಾರೆ. ಮಲಗುವ ಮುನ್ನ ಹೆಂಡತಿ ಪ್ರೀತಿಯಿಂದ ಗಂಡನಿಗೆ (Husband) ಮಟನ್ ಬಿರಿಯಾನಿ (Mutton Biryani) ಮಾಡಿಕೊಟ್ಟಿದ್ದಾಳೆ. ಇಲ್ಲಿ ಕಹಾನಿ ಮೆ ಟ್ವಿಸ್ಟ್ ಏನೆಂದರೆ ಆ ಬಿರಿಯಾನಿಯಲ್ಲಿ ನಿದ್ದೆ ಮಾತ್ರೆಗಳನ್ನು ಹಾಕಲಾಗಿತ್ತು. ಪತಿ ನಿದ್ರೆಗೆ ಜಾರಿದ ಬಳಿಕ ಹಲವು ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದ ಗೆಳೆಯ ಗಂಧವರವು ರಘು ಎಂಬಾತನಿಗೆ ಪತ್ನಿ ಶ್ರೀದೇವಿ ಕರೆ ಮಾಡಿದ್ದಾಳೆ. ಅಲ್ಲಿಗೆ ಪ್ರಿಯತಮನೊಂದಿಗೆ ಸೇರಿಕೊಂಡು ಪತಿಯನ್ನು ಕೊಲ್ಲಲು ಪತ್ನಿ ಶ್ರೀದೇವಿ ಸ್ಪಷ್ಟ ಸ್ಕೆಚ್ ಹಾಕಿದ್ದಳು ಎಂದು ಪ್ರಕರಣದ ಸ್ಥೂಲ ಚಿತ್ರಣವನ್ನು ಪೊಲೀಸರು ಬಿಡಿಸಿದ್ದಾರೆ.
ಅಷ್ಟೇ ಸಾಲದು ಅಂತಾ ಇಬ್ಬರೂ ಸೇರಿಕೊಂಡು ಕೋಟರಾಜುವಿನ ಕುತ್ತಿಗೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾರೆ. ಎಚ್ಚರಗೊಂಡ ಗಂಡ ಜೋರಾಗಿ ಕಿರುಚಿದ್ದಾರೆ. ಆಗ ಅವರಿಬ್ಬರೂ ಓಡಿಹೋಗಿದ್ದಾರೆ. ಕೂಡಲೇ ಕೋಟರಾಜು ಟೂ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಬೊಗ್ಗುಲದಿಬ್ಬದ ಕೇತ ಶ್ರೀನು ಎಂಬಾತ ಕೂಡ ಅವರಿಗೆ ಸಹಾಯ ಮಾಡಿರುವುದಾಗಿ ತಿಳಿದುಬಂದಿದೆ. ಆತನನ್ನೂ ಪೊಲೀಸರು ರಿಮಾಂಡ್ ಗೆ ತೆಗೆದುಕೊಂಡಿದ್ದಾರೆ.
Published On - 2:14 pm, Fri, 7 July 23