Chandrayaan 3 Budget: ಚಂದ್ರಯಾನ-3 ಮಿಷನ್ ಬಜೆಟ್ ಎಷ್ಟು? ಚಂದ್ರಯಾನ-2ಕ್ಕೆ ಎಷ್ಟು ಖರ್ಚಾಗಿತ್ತು?

ಜುಲೈ 22, 2019 ರಂದು ಉಡಾವಣೆಯಾದ ಚಂದ್ರಯಾನ-2 ನಂತರ ಚಂದರನೂರಿನ ಪ್ರಯಣವಾಗಿದೆ ಚಂದ್ರಯಾನ-3. ಚಂದ್ರಯಾನ-2 ಚಂದ್ರನ ಮೇಲ್ಮೈಯನ್ನು ತಲುಪಲು 48 ದಿನಗಳನ್ನು ತೆಗೆದುಕೊಂಡಿತು. ಆದಾಗ್ಯೂ, ವಿಕ್ರಮ್ ಲೂನ ಲ್ಯಾಂಡರ್ ಸೆಪ್ಟೆಂಬರ್ 6, 2019 ರಂದು ಚಂದ್ರನ ಮೇಲ್ಮೈಯಲ್ಲಿ ಅಪ್ಪಳಿಸಿದ ಕಾರಣ ಮಿಷನ್ ವಿಫಲವಾಯಿತು.

Chandrayaan 3 Budget: ಚಂದ್ರಯಾನ-3 ಮಿಷನ್ ಬಜೆಟ್ ಎಷ್ಟು? ಚಂದ್ರಯಾನ-2ಕ್ಕೆ ಎಷ್ಟು ಖರ್ಚಾಗಿತ್ತು?
ಚಂದ್ರಯಾನ-3
Follow us
ರಶ್ಮಿ ಕಲ್ಲಕಟ್ಟ
|

Updated on: Jul 07, 2023 | 4:39 PM

ತನ್ನ ಐತಿಹಾಸಿಕ ಮಿಷನ್​​​ನಲ್ಲಿ ಚಂದ್ರನ ಲ್ಯಾಂಡಿಂಗ್ ಅನ್ನು ಕಳೆದುಕೊಂಡ ಸುಮಾರು ನಾಲ್ಕು ವರ್ಷಗಳ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೆ ಚಂದ್ರನತ್ತ ಹಾರಲು ಸಿದ್ಧವಾಗಿದೆ. ಅದರ ಅತ್ಯಂತ ಭಾರವಾದ ರಾಕೆಟ್ LVM3 ಮುಂದಿನ ಶುಕ್ರವಾರ ಅಂದರೆ ಜುಲೈ 14ರಂದು ಶ್ರೀಹರಿಕೋಟಾದಿಂದ ಚಂದ್ರಯಾನ -3 ನೊಂದಿಗೆ (Chandrayaan 3) ಉಡಾವಣೆ ಮಾಡಲು ಸಿದ್ಧವಾಗಿದೆ. ಜುಲೈ 14 ರಂದು ಮಧ್ಯಾಹ್ನ 2:35 ಕ್ಕೆ ಮಿಷನ್ ನಿಖರವಾಗಿ ಉಡಾವಣೆಯಾಗಲಿದೆ. ಕೆಲವೇ ಗಂಟೆಗಳಲ್ಲಿ, ಶಕ್ತಿಯುತ ರಾಕೆಟ್ ಚಂದ್ರನ ಬಾಹ್ಯಾಕಾಶ ನೌಕೆಯನ್ನು ಭೂಮಿಯ ಸುತ್ತ ದೀರ್ಘವೃತ್ತದ ಕಕ್ಷೆಗೆ ತಂದು ನಿಲ್ಲಿಸುತ್ತದೆ. ಬಾಹ್ಯಾಕಾಶ ಸಂಸ್ಥೆಯು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮತ್ತು ರೋವಿಂಗ್ ನ್ನು ಮಾಡಲು ಪೂರ್ಣ ಪ್ರಮಾಣದ ಸಿದ್ದತೆಯನ್ನು ಮಾಡಿದೆ.

ಚಂದ್ರಯಾನ-3 ಮಿಷನ್​​​ನ ಖರ್ಚು ಎಷ್ಟು?

ಚಂದ್ರಯಾನ-3 ಮಿಷನ್​​​ನ ವೆಚ್ಚ  ಸುಮಾರು ₹ 615 ಕೋಟಿ ಎಂದು ಲೈವ್ ಮಿಂಟ್ ವರದಿ ಮಾಡಿದೆ. ಭಾರತದ ಮೂರನೇ ಚಂದ್ರಯಾನವು ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್‌ನ ಯಶಸ್ವಿ ಲ್ಯಾಂಡಿಂಗ್ ಅನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಇದಾದ ನಂತರ ಹಲವಾರು ಪ್ರಯೋಗಗಳನ್ನು ಕೈಗೊಳ್ಳಲು ರೋವರ್ ಅನ್ನು ನಿಯೋಜಿಸಲಾಗಿದೆ.

ಚಂದ್ರಯಾನ-3 ಮಿಷನ್, ಚಂದ್ರನ ಥರ್ಮೋಫಿಸಿಕಲ್ ಗುಣಲಕ್ಷಣಗಳು, ಚಂದ್ರನಲ್ಲಿನ ಕಂಪನ, ಚಂದ್ರನ ಮೇಲ್ಮೈ ಪ್ಲಾಸ್ಮಾ ಪರಿಸರ ಮತ್ತು ಧಾತುರೂಪದ ಸಂಯೋಜನೆಯನ್ನು ಅಧ್ಯಯನ ಮಾಡಲು ವೈಜ್ಞಾನಿಕ ಉಪಕರಣಗಳನ್ನು ಚಂದ್ರನಿಗೆ ಕೊಂಡೊಯ್ಯುತ್ತದೆ. ಮಾರ್ಚ್‌ ತಿಂಗಳಲ್ಲಿ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಉಡಾವಣೆಯ ಸಮಯದಲ್ಲಿ ಎದುರಿಸುವ ಕಠಿಣ ಕಂಪನ ಮತ್ತು ಅಕೌಸ್ಟಿಕ್ ಕಂಪನವನ್ನು ತಡೆದುಕೊಳ್ಳಲು ತನ್ನ ಸಾಮರ್ಥ್ಯಗಳನ್ನು ಮೌಲ್ಯೀಕರಿಸಲು ಅಗತ್ಯವಾದ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.

ಜುಲೈ 22, 2019 ರಂದು ಉಡಾವಣೆಯಾದ ಚಂದ್ರಯಾನ-2 ನಂತರ ಚಂದರನೂರಿನ ಪ್ರಯಣವಾಗಿದೆ ಚಂದ್ರಯಾನ-3. ಚಂದ್ರಯಾನ-2 ಚಂದ್ರನ ಮೇಲ್ಮೈಯನ್ನು ತಲುಪಲು 48 ದಿನಗಳನ್ನು ತೆಗೆದುಕೊಂಡಿತು. ಆದಾಗ್ಯೂ, ವಿಕ್ರಮ್ ಲೂನ ಲ್ಯಾಂಡರ್ ಸೆಪ್ಟೆಂಬರ್ 6, 2019 ರಂದು ಚಂದ್ರನ ಮೇಲ್ಮೈಯಲ್ಲಿ ಅಪ್ಪಳಿಸಿದ ಕಾರಣ ಮಿಷನ್ ವಿಫಲವಾಯಿತು.

ಚಂದ್ರಯಾನ-3 ಮಿಷನ್‌ಗಾಗಿ ಪ್ರಸ್ತುತ ಲ್ಯಾಂಡರ್ ಚಂದ್ರಯಾನ-2 ಮಿಷನ್‌ನಲ್ಲಿ ಬಳಸಲಾದ ಹಿಂದಿನ ಲ್ಯಾಂಡರ್‌ಗೆ ಹೋಲಿಸಿದರೆ ಹಲವಾರು ಮಾರ್ಪಾಡುಗಳಿಗೆ ಒಳಗಾಗಿದೆ. ಐದು ಮೋಟಾರ್‌ಗಳ ಬದಲಿಗೆ, ಹೊಸ ಲ್ಯಾಂಡರ್ ಈಗ ನಾಲ್ಕು ಮೋಟಾರ್‌ಗಳನ್ನು ಹೊಂದಿರುತ್ತದೆ. ಕೆಲವು ಸಾಫ್ಟ್‌ವೇರ್ ಹೊಂದಾಣಿಕೆಗಳನ್ನು ಕೂಡಾಮಾಡಲಾಗಿದೆ. ಆದಾಗ್ಯೂ, ಇಸ್ರೋ ಹಿಂದಿನ ಲ್ಯಾಂಡರ್ ಮತ್ತು ರೋವರ್, ಅಂದರೆ ಕ್ರಮವಾಗಿ ವಿಕ್ರಮ್ ಮತ್ತು ಪ್ರಗ್ಯಾನ್ ಹೆಸರನ್ನು ಉಳಿಸಿಕೊಳ್ಳುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಚಂದ್ರಯಾನ-3 ಗೆ ಒಂದು ಪ್ರಮುಖ ಸೇರ್ಪಡೆಯೆಂದರೆ ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್ (SHAPE) ಪೇಲೋಡ್ ಅನ್ನು ಸೇರಿಸುವುದು. ಈ ಉಪಕರಣವ ಚಂದ್ರನ ಕಕ್ಷೆಯಿಂದ ಭೂಮಿಯ ಸ್ಪೆಕ್ಟ್ರಲ್ ಮತ್ತು ಧ್ರುವೀಯ ಅಳತೆಗಳನ್ನು ಅಧ್ಯಯನ ಮಾಡಲು ಉದ್ದೇಶಿಸಲಾಗಿದೆ.

ಇದನ್ನೂ ಓದಿ: Chandrayaan 3: ಚಂದ್ರಯಾನ-2 ವೈಫಲ್ಯದಿಂದ ಪಾಠ ಕಲಿತು, ಜುಲೈ 14 ರಂದು ಚಂದ್ರಯಾನ-3 ಉಡಾವಣೆಗೆ ಇಸ್ರೋ ಸಜ್ಜು

ಚಂದ್ರಯಾನ-2ಗೆ ಎಷ್ಟು ಖರ್ಚಾಗಿತ್ತು?

ಭಾರತದ ಚಂದ್ರಯಾನ-2 ಮಿಷನ್‌ಗೆ 603 ಕೋಟಿ ರೂಪಾಯಿ ವೆಚ್ಚವಾಗಿತ್ತು. ಅದರ ಉಡಾವಣೆಗೆ 367 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದೆ ಎಂದು 2022 ಏಪ್ರಿಲ್ 6 ರಂದು ಇಂಡಿಯಾ ಟುಡೇ ವರದಿ ಮಾಡಿದೆ. ಚಂದ್ರಯಾನ-2ರ ವೆಚ್ಚ ಮತ್ತು ಉದ್ದೇಶಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಚಂದ್ರಯಾನ-2 ಅನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಒಳಗೊಂಡಿದ್ದುಇದು ಜುಲೈ 22 ರಂದು ಸ್ಥಳೀಯ ಜಿಎಸ್ಎಲ್ವಿ ಎಂಕೆ III-ಎಂ1 ಮಿಷನ್ ನಲ್ಲಿ ಯಶಸ್ವಿಯಾಗಿ ಉಡಾವಣೆಯಾಯಿತು ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್