ಜುಲೈ 14 ರಂದು ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಡಾವಣೆ: ಇಸ್ರೋ ಘೋಷಣೆ
ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಮಿಷನ್ ಶ್ರೀಹರಿಕೋಟದಿಂದ ಉಡಾವಣೆಯಾಗಲಿದೆ. ಹೆಚ್ಚಿನ ಅಪ್ಡೇಟ್ ನಿರೀಕ್ಷಿಸಿ ಎಂದು ಟ್ವೀಟ್ ಮಾಡಿದ ಇಸ್ರೋ
ಭಾರತದ ಚಂದ್ರಯಾನ ಮಿಷನ್ ಚಂದ್ರಯಾನ-3 (Chandrayaan-3), ಜುಲೈ 14 ರಂದು ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದೆ ಎಂದು ಇಸ್ರೊ ಟ್ವೀಟ್ ಮಾಡಿದೆ. ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಮಿಷನ್ ಶ್ರೀಹರಿಕೋಟದಿಂದ ಉಡಾವಣೆಯಾಗಲಿದೆ. ಹೆಚ್ಚಿನ ಅಪ್ಡೇಟ್ ನಿರೀಕ್ಷಿಸಿ ಎಂದು ಇಸ್ರೋ ಟ್ವೀಟ್ನಲ್ಲಿ ಹೇಳಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ತನ್ನ ಬಹು ನಿರೀಕ್ಷಿತ ಚಂದ್ರಯಾನ-3 ಜುಲೈ 13 ರಂದು ಉಡಾವಣೆಗೊಳ್ಳಲಿದೆ ಎಂದು ಕಳೆದ ವಾರ ಘೋಷಿಸಿತ್ತು. ಇದೀಗ ಉಡಾವಣೆ ಜುಲೈ 14 ರಂದು ನಡೆಯಲಿದೆ. ಉಡಾವಣೆಯ ಜುಲೈ 14 ರಂದು ಮಧ್ಯಾಹ್ನ 2.35 ಕ್ಕೆ ನಿಗದಿಯಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆ ನಡೆಯಲಿದೆ ಎಂದು ಇಸ್ರೋ ಹೇಳಿದೆ.
Announcing the launch of Chandrayaan-3:
?LVM3-M4/Chandrayaan-3 ?️Mission: The launch is now scheduled for ?July 14, 2023, at 2:35 pm IST from SDSC, Sriharikota
Stay tuned for the updates!
— ISRO (@isro) July 6, 2023
ಈ ಮಿಷನ್ ಚಂದ್ರನತ್ತ ಭಾರತದ ಮೂರನೇ ಸಾಹಸವಾಗಿದೆ. 2019 ರಲ್ಲಿ ಚಂದ್ರಯಾನ-2 ಮಿಷನ್ ನಂತರದ ಮಿಷನ್ ಇದಾಗಿದೆ. ಚಂದ್ರಯಾನ-2 ಮಿಷನ್ ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾದಾಗ, ವಿಕ್ರಂ ಲ್ಯಾಂಡರ್ ಲ್ಯಾಂಡಿಂಗ್ ಸರಿಯಾಗದೆ ರೋವರ್ ಅನ್ನು ಯೋಜಿಸಿದಂತೆ ನಿಯೋಜಿಸುವುದನ್ನು ತಡೆಯಿತು.
ಇದನ್ನೂ ಓದಿ: ಪತ್ನಿ ಇಲ್ಲದೆ ಪ್ರಧಾನಿ ಮನೆಯಲ್ಲಿ ಇರುವುದು ತಪ್ಪು: ‘ಬೇಗ ಮದುವೆಯಾಗಿ’ ಎಂದು ರಾಹುಲ್ ಗಾಂಧಿಗೆ ಸಲಹೆ ನೀಡಿದ ಲಾಲು
ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಒಳಗೊಂಡಿರುವ ತನ್ನ ಹೊಸ ಹೆವಿ-ಲಿಫ್ಟ್ ಉಡಾವಣಾ ವಾಹನವಾದ ಲಾಂಚ್ ವೆಹಿಕಲ್ ಮಾರ್ಕ್ 3 (LVM3) ನೊಂದಿಗೆ ಯಶಸ್ವಿಯಾಗಿ ಸಂಯೋಜಿಸಿದೆ ಎಂದು ಇಸ್ರೋ ಬುಧವಾರ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:57 pm, Thu, 6 July 23