ಇಡೀ ರಾತ್ರಿ ಮೊಬೈಲ್​ ಚಾರ್ಜ್ ಇಟ್ಟು ಮಲಗುವವರೇ ಎಚ್ಚರ, ಬೆಂಗಳೂರಿನಲ್ಲಿ ಇಡೀ ಮೊಬೈಲ್ ಅಂಗಡಿ ಭಸ್ಮ

ಇಡೀ ರಾತ್ರಿ ಮೊಬೈಲ್​ ಚಾರ್ಜ್​ ಇಟ್ಟಿದ್ದಕ್ಕೆ ಶಾರ್ಟ್​ಸರ್ಕ್ಯೂಟ್​ನಿಂದ ಬೆಂಕಿಯ ಕೆನ್ನಾಲಿಗೆಗೆ ಮೊಬೈಲ್ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಇಡೀ ರಾತ್ರಿ ಮೊಬೈಲ್​ ಚಾರ್ಜ್ ಇಟ್ಟು ಮಲಗುವವರೇ ಎಚ್ಚರ, ಬೆಂಗಳೂರಿನಲ್ಲಿ ಇಡೀ ಮೊಬೈಲ್ ಅಂಗಡಿ ಭಸ್ಮ
ಮೊಬೈಲ್ ಚಾರ್ಜ್ ಇಟ್ಟಿದ್ದರಿಂದ ಅಂಗಡಿ ಬೆಂಕಿಗಾಹುತಿ
Updated By: Digi Tech Desk

Updated on: Mar 28, 2023 | 10:46 AM

ಬೆಂಗಳೂರು: ಇಡೀ ರಾತ್ರಿ ಮೊಬೈಲ್​ ಚಾರ್ಜ್ ಇಟ್ಟು ಮಲಗುವವರೇ ಎಚ್ಚರ. ಬೆಂಗಳೂರಿನಲ್ಲೊಂದು ಭಯಾನಕ ಘಟನೆ ಸಂಭವಿಸಿದೆ. ಇಡೀ ರಾತ್ರಿ ಮೊಬೈಲ್​ ಚಾರ್ಜ್​ ಇಟ್ಟಿದ್ದಕ್ಕೆ ಶಾರ್ಟ್​ಸರ್ಕ್ಯೂಟ್​ನಿಂದ ಬೆಂಕಿಯ ಕೆನ್ನಾಲಿಗೆಗೆ ಮೊಬೈಲ್ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಒಂದು ಮೊಬೈಲ್ ಫೋನ್, ನಿರ್ಲಕ್ಷ್ಯದಿಂದ ಇಡೀ ಮೊಬೈಲ್ ಅಂಗಡಿ ಸುಟ್ಟು ಹೋಗಿದೆ. ರಾತ್ರಿ ಮೊಬೈಲ್ ಚಾರ್ಜ್​ಗೆ ಇಟ್ಟು ಬೆಳಗ್ಗೆ ನೋಡುವಷ್ಟುರಲ್ಲಿ ಭಾರೀ ಅನಾಹುತ ಸಂಭವಿಸಿದೆ. ಬೆಂಗಳೂರಿನ ವಿಜಯನಗರದಲ್ಲಿ ಬೆಳಗ್ಗೆ 7 ಗಂಟೆಗೆ ಘಟನೆ ನಡೆದಿದೆ. ಅಂಗಡಿ ಮಾಲೀಕ ರಾತ್ರಿ ಮೊಬೈಲ್​ ಚಾರ್ಜ್​​ ಇಟ್ಟು ಮನೆಗೆ ಹೋಗಿದ್ದ. ಇಂದು ಬೆಳಗ್ಗೆ ಅಂಗಡಿ ಬಾಗಿಲು ತೆರೆಯಲು ಬಂದಾಗ ಮಾಲೀಕನಿಗೆ ಶಾಕ್ ಆಗಿದೆ. ಶಾರ್ಟ್​ಸರ್ಕ್ಯೂಟ್​ನಿಂದ ಅಂಗಡಿ ಬೆಂಕಿಗಾಹುತಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾಂಬ್​ನಂತೆ ಸ್ಪೋಟಗೊಂಡ ಶವೋಮಿ ಕಂಪನಿಯ ಸ್ಮಾರ್ಟ್​ಫೋನ್

ಇಂದು ಸ್ಮಾರ್ಟ್​ಫೋನ್​ಗಳನ್ನು ಬಳಸದಿರುವವರ ಸಂಖ್ಯೆ ತೀರಾ ಕಡಿಮೆ. ಬಜೆಟ್ ಬೆಲೆಗೆ ಆಕರ್ಷಕ ಮೊಬೈಲ್​ಗಳು ಸಿಗುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಮೊಬೈಲ್​ಗಳು ಎಗ್ಗಿಲ್ಲದೆ ಸೇಲ್ ಆಗುತ್ತದೆ. ಇದರ ಜೊತೆಗೆ ಕಳೆದ ಕೆಲವು ವರ್ಷಗಳಿಂದ ಸ್ಮಾರ್ಟ್​ಫೋನ್‌ಗಳು ಸ್ಫೋಟಗೊಳ್ಳುವ (Mobile Blast) ಸಂಗತಿಗಳು ಕೂಡ ಹೆಚ್ಚುತ್ತಿದೆ. ಮೊಬೈಲ್ ಸ್ಪೋಟಗೊಂಡ ಸುದ್ದಿ ಇತ್ತೀಚಿನ ದಿನಗಳಲ್ಲಿ ವರದಿ ಆಗುತ್ತಲೇ ಇದೆ. ಇದರಿಂದ ಜೀವ ಹಾನಿ ಸಂಭವಿಸಿದ್ದೂ ಇದೆ. ಇತ್ತೀಚೆಗಷ್ಟೆ ಸ್ಯಾಮ್​ಸಂಗ್ (Samsung), ಒನ್​ಪ್ಲಸ್ ನಾರ್ಡ್ ಸ್ಮಾರ್ಟ್​ಫೋನ್​ಗಳು ಸ್ಪೋಟಗೊಂಡಿದ್ದು ಬಳಕೆದಾರರಲ್ಲಿ ಭಯ ಹುಟ್ಟಿಸಿತ್ತು. ಇದೀಗ ಶವೋಮಿ ಸರದಿ. ಶವೋಮಿ ಕಂಪನಿ 2021 ರಲ್ಲಿ ಬಿಡುಗಡೆ ಮಾಡಿದ್ದ ಶವೋಮಿ 11 ಲೈಟ್ ಎನ್​ಇ 5ಜಿ (Xiaomi 11 Lite NE 5G) ಸ್ಮಾರ್ಟ್​ಫೋನ್ ಬ್ಲಾಸ್ಟ್ ಆದ ಬಗ್ಗೆ ವರದಿ ಆಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:40 am, Tue, 28 March 23