ಪ್ರಧಾನಿ ಸೂಚನೆಯಂತೆ ಆರ್​.ಆರ್​. ನಗರ ಕ್ಷೇತ್ರಕ್ಕೆ ಆಕ್ಸಿಜನ್​ ಟ್ಯಾಂಕ್​ ತರಿಸಿದ್ದೇವೆ: ಸ್ಥಳೀಯ ಶಾಸಕ ಮುನಿರತ್ನ

|

Updated on: May 22, 2021 | 5:30 PM

ಪ್ರಧಾನಿ ಸೂಚನೆಯಂತೆ ಎಲ್ಲಾ ಕ್ಷೇತ್ರಗಳಲ್ಲೂ ಆಕ್ಸಿಜನ್ ಟ್ಯಾಂಕ್​​ ಇರಬೇಕು. ಕ್ಷೇತ್ರದಲ್ಲಿ ಪ್ರತಿಯೊಬ್ಬರ ಜೀವರಕ್ಷಣೆ ನಮ್ಮ ಹೊಣೆಯಾಗುತ್ತೆ. ಇನ್ನೆರಡು ವಾರದಲ್ಲಿ ಕ್ಷೇತ್ರದಲ್ಲಿ ಆರೋಗ್ಯ ಸೌಕರ್ಯ ಹೆಚ್ಚಳ ಮಾಡಲಾಗುವುದು -ಆರ್​.ಆರ್. ನಗರ ಶಾಸಕ ಮುನಿರತ್ನ ನಾಯ್ಡು

ಪ್ರಧಾನಿ ಸೂಚನೆಯಂತೆ ಆರ್​.ಆರ್​. ನಗರ ಕ್ಷೇತ್ರಕ್ಕೆ ಆಕ್ಸಿಜನ್​ ಟ್ಯಾಂಕ್​ ತರಿಸಿದ್ದೇವೆ: ಸ್ಥಳೀಯ ಶಾಸಕ ಮುನಿರತ್ನ
ಪ್ರಧಾನಿ ಸೂಚನೆಯಂತೆ ಆರ್​.ಆರ್​. ನಗರ ಕ್ಷೇತ್ರಕ್ಕೆ ಆಕ್ಸಿಜನ್​ ಟ್ಯಾಂಕ್​ ತರಿಸಿದ್ದೇವೆ: ಸ್ಥಳೀಯ ಶಾಸಕ ಮುನಿರತ್ನ
Follow us on

ಬೆಂಗಳೂರು: ಕೊರೊನಾ ಸೋಂಕಿತರ ಆರೈಕೆಗಾಗಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿಯೂ ಆಕ್ಸಿಜನ್ ಟ್ಯಾಂಕ್​​ ಇರಬೇಕು. ಆಯಾ ಕ್ಷೇತ್ರದಲ್ಲಿ ಜೀವರಕ್ಷಣೆ ಸ್ಥಳೀಯ ಶಾಸಕರ ಹೊಣೆಯಾಗುತ್ತೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಥಳೀಯರ ಜನಪ್ರತಿನಿಧಿಗಳಿಗೆ ಇತ್ತೀಚೆಗೆ ಕರೆ ಕೊಟ್ಟಿದ್ದರು. ಅದರಂತೆ ಬೆಂಗಳೂರಿನಲ್ಲಿ ಆರ್​.ಆರ್. ನಗರ ಶಾಸಕ ಮುನಿರತ್ನ ನಾಯ್ಡು ಅವರು ತಮ್ಮ ಆರ್​.ಆರ್​.ನಗರ ಕ್ಷೇತ್ರಕ್ಕೆ ಆಕ್ಸಿಜನ್​ ಟ್ಯಾಂಕ್​ ತರಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಹೇಳಿಕೆ ನೀಡಿದ್ದು, ಪ್ರಧಾನಿ ಸೂಚನೆಯಂತೆ ಎಲ್ಲಾ ಕ್ಷೇತ್ರಗಳಲ್ಲೂ ಆಕ್ಸಿಜನ್ ಟ್ಯಾಂಕ್​​ ಇರಬೇಕು. ಕ್ಷೇತ್ರದಲ್ಲಿ ಪ್ರತಿಯೊಬ್ಬರ ಜೀವರಕ್ಷಣೆ ನಮ್ಮ ಹೊಣೆಯಾಗುತ್ತೆ. ಇನ್ನೆರಡು ವಾರದಲ್ಲಿ ಕ್ಷೇತ್ರದಲ್ಲಿ ಆರೋಗ್ಯ ಸೌಕರ್ಯ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದ್ದಾರೆ.
(oxygen tank available in rajarajeshwari nagar constituency says local mla munirathna)

ಜನಪ್ರತಿನಿಧಿಗಳ ಬೇಜವಬ್ದಾರಿತನದಿಂದ ಚಿತ್ರದುರ್ಗ ಜಿಲ್ಲೆಗೆ ಕೈತಪ್ಪಿದ ಆಕ್ಸಿಜನ್ ಪ್ಲಾಂಟ್; ಸರ್ಕಾರದ ವಿರುದ್ಧ ಜನರ ಆಕ್ರೋಶ