ಬೆಂಗಳೂರು, ಅ.20: ಏಕದಿನ ವಿಶ್ವಕಪ್ನಲ್ಲಿ ಇಂದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಹೈವೋಲ್ಟೇಜ್ ಪಂದ್ಯ ಬೆಂಗಳೂರು (Bengaluru) ನಗರದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ವೇಳೆ ಯುವಕನೊಬ್ಬ ಪಾಕ್ ಪರ ಘೋಷಣೆ ಕೂಗಿದ್ದಾನೆ. ಇದನ್ನು ಪೊಲೀಸರು ಆಕ್ಷೇಪಿಸಿದಾಗ ಪಾಕಿಸ್ತಾನದಿಂದ ಬಂದಿದ್ದೇನೆ, ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದೇನೆ, ಭಾರತ್ ಮಾತಾಕಿ ಜೈ ಅಂತಾ ಕೂಗೋಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾನೆ.
ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾ ಪರವಾಗಿ ಘೋಷಣೆ ಕೂಗಬಹುದು, ಪಾಕಿಸ್ತಾನ್ ಪರ ಘೋಷಣೆ ಕೂಗಬಾರದಾ ಅಂತಾ ಪೊಲೀಸ್ ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದಾನೆ. ಪಾಕಿಸ್ತಾನ ಪರ ಘೋಷಣೆ ಕೂಗಬಾರದು ಅಂತ ಹೇಳುತ್ತಿದ್ದೀರಾ ವೀಡಿಯೊ ಮಾಡಿಕೊಳ್ಳುತ್ತೇನೆ, ಈಗ ಹೇಳಿ, ಪಾಕ್ ಪರ ಘೋಷಣೆ ಕೂಗಬಾರದಾ ಎಂದು ಕೇಳಿದ್ದಾನೆ.
ಯುವಕನ ಪ್ರಶ್ನೆಗೆ ತಬ್ಬಿಬ್ಬಾದ ಪೊಲೀಸ್ ಅಧಿಕಾರಿ, ತಾನು ಮೇಲಧಿಕಾರಿಯನ್ನು ಕೇಳುತ್ತೇನೆ ಎಂದು ಸ್ಥಳದಿಂದ ತೆರಳಿದ್ದಾರೆ. ಇದಕ್ಕೂ ಮುನ್ನ ಅಂದರೆ, ಮಧ್ಯಾಹ್ನ ಕ್ರೀಡಾಂಗಣದ ಒಳಗೆ ಪ್ರವೇಶಿಸುವ ವೇಳೆ ಇದೇ ಯುವಕನಿಗೆ ಪಾಕ್ ಬಾವುಟ ಕೊಂಡೊಯ್ಯಲು ಪೊಲೀಸರು ನಿರಾಕರಿಸಿದ್ದರು. ಈ ವೇಳೆಯೂ ಪೊಲೀಸರೊಂದಿಗೆ ಯುವಕ ವಾಗ್ವಾದ ನಡೆಸಿದ್ದ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ