5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಗೆ ವಿರೋಧ; ಪರೀಕ್ಷೆ ಕೈಬಿಡದೆ ಇದ್ರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ

| Updated By: ಆಯೇಷಾ ಬಾನು

Updated on: Dec 14, 2022 | 12:22 PM

ಪರೀಕ್ಷೆಗಳ ಮೂಲಕ ಕೋಟ್ಯಾಂತರ ರೂಪಾಯಿ ಲೂಟಿಯ ಹಾದಿ ಅಂತಾ ಪೋಷಕರ ಸಂಘಟನೆಗಳಿಂದ ವಾರ್ಷಿಕ ಪರೀಕ್ಷೆಗಳಿಗೆ ವಿರೋಧ ಕೇಳಿ ಬಂದಿದೆ.

5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಗೆ ವಿರೋಧ; ಪರೀಕ್ಷೆ ಕೈಬಿಡದೆ ಇದ್ರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗೆ( Annual Examinations) ವಿರೋಧ ವ್ಯಕ್ತವಾಗಿದೆ. ಸಿಬಿಎಸ್​ಸಿ ಕೇಂದ್ರದ ಪಠ್ಯಕ್ರಮದ ಶಾಲೆಗಳಲ್ಲಿಯೂ ಇಲ್ಲದ ವಾರ್ಷಿಕ ಪರೀಕ್ಷೆ ರಾಜ್ಯದಲ್ಲಿ ಜಾರಿಗೆ ಮುಂದಾಗಿರೋದಕ್ಕೆ ವಿರೋಧ ವ್ಯಕ್ತವಾಗಿದೆ. ಶಿಕ್ಷಣ ಇಲಾಖೆಯು(Karnataka Education Department) ವಾರ್ಷಿಕ ಪರೀಕ್ಷೆಗಳ ಹೆಸರಲ್ಲಿ ದುಡ್ಡು ಮಾಡುವ ಹುನ್ನಾರ ನಡೆಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಪರೀಕ್ಷೆಗಳ ಮೂಲಕ ಕೋಟ್ಯಾಂತರ ರೂಪಾಯಿ ಲೂಟಿಯ ಹಾದಿ ಅಂತಾ ಪೋಷಕರ ಸಂಘಟನೆಗಳಿಂದ ವಾರ್ಷಿಕ ಪರೀಕ್ಷೆಗಳಿಗೆ ವಿರೋಧ ಕೇಳಿ ಬಂದಿದೆ. ಬೋರ್ಡ್ ಪರೀಕ್ಷೆ ಮಾಡಿದ್ರೆ ಖಾಸಗಿ ಶಾಲೆಗಳು ಇದನ್ನೆ ಮುಂದಿಟ್ಟುಕೊಂಡು ಪರೀಕ್ಷೆ ಹೆಸರಲ್ಲಿ ಫೀಸ್ ಸುಲಿಗೆ ಮಾಡ್ತಾರೆ. ಖಾಸಗಿ ಶಾಲೆಗಳ ಸೂಲಿಗೆಗೆ ಅನುಕೂಲ ಮಾಡಿಕೊಡುತ್ತವೇ ಈ ಪರೀಕ್ಷೆಗಳು. ಈ ಹಿಂದೆ ಸುರೇಶ್ ಕುಮಾರ್ ಸಚಿವರಿದ್ದಾಗ ಬೋರ್ಡ್ ಪರೀಕ್ಷೆಗೆ ಮುಂದಾಗಿದ್ದಾಗ ಶಿಕ್ಷಣ ತಜ್ಞರು ಹಾಗೂ ಪೋಷಕರಿಂದ ತೀವ್ರ ವಿರೋಧ ಹಾಗೂ ಪ್ರತಿಭಟನೆ ಕೇಳಿ ಬಂದಿತ್ತು. ವಿರೋಧದ ಬಳಿಕ ಬೋರ್ಡ್ ಪರೀಕ್ಷೆಯನ್ನ ಕೈಬಿಡಲಾಗಿತ್ತು. ಈಗ ಮತ್ತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು ವಿರೋಧ ಕೇಳಿ ಬಂದಿದೆ. ಅವೈಜ್ಞಾನಿಕ ಹಾಗೂ ಶಿಕ್ಷಣದ ಮೂಲ ಉದ್ದೇಶಕ್ಕೆ ಈ ಪರೀಕ್ಷೆಗಳು ತದ್ವಿರುದ್ಧ. ಶಿಕ್ಷಣ ಎಂಬುದು ಕಲಿಕೆಗಾಗಿ ಕಲಿಸುವುದೇ ವಿನಃ ಪರೀಕ್ಷೆಗಾಗಿ ಕಲಿಕೆ ಅಲ್ಲ.

ಇದನ್ನೂ ಓದಿ: ಕರ್ನಾಟಕ ರಾಜ್ಯದಲ್ಲಿ 5, 8ನೇ ತರಗತಿಗೂ ವಾರ್ಷಿಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಆದೇಶ

ಕೇಂದ್ರ ಹಾಗೂ ಇತರೆ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ಇಲ್ಲದ ಪರೀಕ್ಷಾ ಪದ್ಧತಿಯನ್ನು ಕೇವಲ ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೆ ವಿಧಿಸಿದರೆ ಅಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಕೀಳರಿಮೆ, ಅಘಾತ ಹಾಗೂ ಒತ್ತಡ, ಉಂಟಾಗಿ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಮಕ್ಕಳು ಆತ್ಮಹತ್ಯೆಗೆ ಯತ್ನಿಸಲೂಬಹುದು. ಇದರಿಂದ ಮಕ್ಕಳು ಶಾಲೆಗಳನ್ನು ಬಿಡುವಂತಹ ಸಾಧ್ಯತೆಗಳು ಹೆಚ್ಚಾಗುತ್ತವೆ. ಒಂದು ರಾಜ್ಯದಲ್ಲಿ ಎರಡು ರೀತಿಯ ಶಿಕ್ಷಣ ಪದ್ಧತಿ ಕಾನೂನು ಬಾಹಿರವಾಗುತ್ತದೆ. ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣ ಮಕ್ಕಳಿಗೆ ಸರಿಯಾದ ಶಿಕ್ಷಣ ದೊರತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಮೂಲಭೂತ ಸೌಕರ್ಯಗಳ ಕೊರತೆ ಇದೆ ಸರಿಯಾದ ಸಮಯದಲ್ಲಿ ಪುಸ್ತಕವನ್ನು ಸಹ ನೀಡಲಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಲಿಕೆ ಹೇಗೆ ಸಾಧ್ಯ. ಇನ್ನು ವಾರ್ಷಿಕ ಪರೀಕ್ಷೆ ಹಾಗೂ ಬೋರ್ಡ್ ಎಕ್ಸಾಂ ಎಂದು ಕಠಿಣ ನಿಯಮಗಳನ್ನು ಮಕ್ಕಳಿಗೆ ಹೇರಿದರೆ ಮಕ್ಕಳ ಸ್ಥಿತಿ ಏನಾಗಬಹುದು? ಅಂತಾ ಪೋಷಕರು ಈ ವಾರ್ಷಿಕ ಪರೀಕ್ಷೆ ಕೈಬಿಡುವಂತೆ ಒತ್ತಾಯಿಸಿದ್ದಾರೆ. ಶಿಕ್ಷಣ ಸಚಿವರು ಪರೀಕ್ಷೆ ಕೈಬಿಡದೆ ಇದ್ರೆ ಪ್ರತಿಭಟನೆ ನಡೆಸುವುದಾಗಿ ಪೋಷಕರು ಎಚ್ಚರಿಕೆಯನ್ನ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ