ಬೆಂಗಳೂರು: ಲಾಕ್‌ಡೌನ್ ಎಂದು ಆರ್ಡರ್ ಮಾಡಿದ ಬಿರಿಯಾನಿಯನ್ನು ಮನೆಗೆ ತಂದುಕೊಡದೇ ವಾಟ್ಸ್ಆ್ಯಪ್ನಲ್ಲಿ ಫೋಟೋ ಕಳಿಸಿದರೆ ಹೇಗೆ? ಈಗಿನ ಆನ್ಲೈನ್ ತರಗತಿಗಳು ಆರ್ಡರ್ ಮಾಡಿದ ಬಿರಿಯಾನಿಯ ಫೊಟೋವನ್ನು ವಾಟ್ಸ್ಆ್ಯಪ್ನಲ್ಲಿ ಕಳಿಸಿದಂತೆಯೇ ಶಿಕ್ಷಣವೂ ಆಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಹೊರಮಾವು ಸಮೀಪದ ವಿಬ್ಗಯಾರ್ ಶಾಲೆ ಸೇರಿದಂತೆ ಹಲವು ಖಾಸಗಿ ಶಾಲೆಗಳ ಬಳಿ ಪೋಷಕರು ಖಾಸಗಿ ಶಾಲೆಗಳ ಆನ್ಲೈನ್ ತರಗತಿಗಳು ಮತ್ತು ಶುಲ್ಕ ನೀತಿಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಆನ್ಲೈನ್ ಪಾಠ ಎಷ್ಟು ಮಕ್ಕಳಿಗೆ ಅರ್ಥ ಆಗಿದೆ ಅಂತ ಸರ್ವೇ ಮಾಡಲಿ. ಶಿಕ್ಷಕರ ಮಾಡುವ ಪಾಠ ಅರ್ಥ ಆಗಿಲ್ಲ. ಶಿಕ್ಷಕರಿಗಿಂತ ನಾವೇ ಹೆಚ್ಚು ಪಾಠ ಮಕ್ಕಳಿಗೆ ಮಾಡುತ್ತಿದ್ದೇವೆ. ಮಕ್ಕಳ ಜೊತೆ ಕೂತು ಅವರಿಗೆ ನಾವೇ ಪಾಠ ಮಾಡುತ್ತಿದ್ದೇವೆ. ಹೊಟೇಲ್ನಿಂದ ಬಿರಿಯಾನಿ ಆರ್ಡರ್ ಮಾಡಿ, ಲಾಕ್ ಡೌನ್ ಇದೆ ಬರೋಕೆ ಆಗಲ್ಲ, ಅಂತ ಬಿರಿಯಾನಿ ಫೋಟೊವನ್ನು ವಾಟ್ಸ್ಆ್ಯಪ್ ಕಳಿಸಿದರೆ ಹೇಗೆ? ಎಂದು ಪ್ರತಿಭಟನಾ ನಿರತ ಪಾಲಕರು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಸರ್ಕಾರದ ಆದೇಶದಂತೆ 70 ರಷ್ಟು ಶುಲ್ಕ ಕಟ್ಟಿದ್ದೇವೆ. ಈಗ ಪೂರ್ಣ ಹಣ ಪಾವತಿಸುವಂತೆ ಕಿರುಕುಳ ನೀಡಲಾಗುತ್ತಿದೆ. ಈ ವರ್ಷ ಶುಲ್ಕ ಕಟ್ಟದ ಮಕ್ಕಳನ್ನ ಆನ್ ಲೈನ್ ಕ್ಲಾಸ್ ನಿಂದ ತೆಗೆದುಹಾಕಿದ್ದಾರೆ. ಅರ್ಧ ಶುಲ್ಕ ಕಟ್ಟಿದ ಮಕ್ಕಳನ್ನು ಆನ್ಲೈನ್ ಕ್ಲಾಸಿನಿಂದ ಮ್ಯೂಟ್ ಮಾಡಿದ್ದಾರೆ. ಶಾಲೆಯ ಬೇರೆ ಶಾಖೆಯ ಮಕ್ಕಳನ್ನೆಲ್ಲಾ ಸೇರಿಸಿ ಒಟ್ಟಿಗೆ ಆನ್ಲೈನ್ ಕ್ಲಾಸ್ ಮಾಡುತ್ತಿದ್ದಾರೆ. ಇದರಲ್ಲಿ ಅನ್ಯ ರಾಜ್ಯದ ಮಕ್ಕಳನ್ನೂ ಸೇರಿಸಿ ಪಾಠ ಮಾಡುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ಅರ್ಥ ಆಗದಿದ್ದರೆ ಪ್ರಶ್ನೆ ಕೇಳೋಕೆ ಆಗುತ್ತಿಲ್ಲ ಎಂದು ಪೋಷಕರು ತಮ್ಮ ಸಮಸ್ಯೆಯನ್ನು ಪ್ರತಿಭಟನೆಯ ವೇಳೆ ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕೊವಿಡ್ ಮಾರ್ಗಸೂಚಿ ಪುನರ್ಪರಿಶೀಲಿಸಿದ ಡಿಜಿಎಚ್ಎಸ್: 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್ ಅಗತ್ಯವಿಲ್ಲ
ಕೊವಿಡ್ 19 ಲಸಿಕೆ ಪಡೆದವರಿಗೆ ‘ನಾನು ದೇಶಭಕ್ತ’ ಎಂಬ ಬ್ಯಾಡ್ಜ್ ನೀಡಿ ಗೌರವಿಸುತ್ತಿರುವ ಮಧ್ಯಪ್ರದೇಶ ಪೊಲೀಸರು
(Parents protest against online classes and fee structure against Private schools in Horamavu Bengaluru)