Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್-19 ಸೋಂಕಿತರಿಗೆ ಬೆಡ್ ಕಾಯ್ದಿರಿಸುವ ನೂತನ ಕ್ಯೂ ಪದ್ಧತಿ ಲೋಕಾರ್ಪಣೆ ಮಾಡಿದ ಸಚಿವ ಅರವಿಂದ ಲಿಂಬಾವಳಿ

covid bed reservation que system: ಈ ಹೊಸ ಸರತಿ ಸಾಲಿನ ವ್ಯವಸ್ಥೆಯು ಹಾಸಿಗೆ ಕಾಯ್ದಿರಿಸುವಿಕೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ನೆರವಾಗುತ್ತದೆ, ಇದು ಸಂಯೋಜಿತ ವ್ಯವಸ್ಥೆಯನ್ನು ಹೊಂದಿದ್ದು ಆಸ್ಪತ್ರೆ ಪ್ರವೇಶ ಪಡೆಯುವ ಎಲ್ಲ ರೋಗಿಗಳಿಗೆ ಸುಲಭವಾಗಿ ಲಭ್ಯವಾಗಲಿದೆ- ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ

ಕೋವಿಡ್-19 ಸೋಂಕಿತರಿಗೆ ಬೆಡ್ ಕಾಯ್ದಿರಿಸುವ ನೂತನ ಕ್ಯೂ ಪದ್ಧತಿ ಲೋಕಾರ್ಪಣೆ ಮಾಡಿದ ಸಚಿವ ಅರವಿಂದ ಲಿಂಬಾವಳಿ
ಕೋವಿಡ್-19 ಸೋಂಕಿತರಿಗೆ ಬೆಡ್ ಕಾಯ್ದಿರಿಸುವ ನೂತನ "ಕ್ಯೂ ಪದ್ಧತಿ" ಲೋಕಾರ್ಪಣೆ ಮಾಡಿದ ಸಚಿವ ಅರವಿಂದ ಲಿಂಬಾವಳಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 10, 2021 | 5:05 PM

ಬೆಂಗಳೂರು: ಕೋವಿಡ್ ಸೋಂಕಿತರಿಗೆ ಸರತಿ ಸಾಲಿನಲ್ಲಿ ಬೆಡ್ (ಕ್ಯೂ ಸಿಸ್ಟಮ್ ) ಕಾಯ್ದಿರಿಸುವ ಹೊಸ ವ್ಯವಸ್ಥೆಯನ್ನು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಇಂದು ಲೋಕಾರ್ಪಣೆ ಮಾಡಿದರು. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಚಿವರೊಂದಿಗೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ಬಂದಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು. ಈ ಹೊಸ ತಂತ್ರಾಂಶ ಸಿದ್ಧಪಡಿಸುವಲ್ಲಿ ನೆರವಾದ ನಂದನ್ ನಿಲೇಕಣಿ, ಐ-ಸ್ಪಿರಿಟ್ ಮತ್ತು ಫ್ರಾಕ್ಟಲ್ ಸಂಸ್ಥೆಗಳಿಗೆ ಹಾಗೂ ಸ್ವಯಂ ಮುಂದೆ ಬಂದ ಅನೇಕ ಐಟಿ ಪರಿಣಿತರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಹೊಸ ಸರತಿ ಸಾಲಿನ ವ್ಯವಸ್ಥೆಯು ಹಾಸಿಗೆ ಕಾಯ್ದಿರಿಸುವಿಕೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ನೆರವಾಗುತ್ತದೆ, ಇದು ಸಂಯೋಜಿತ ವ್ಯವಸ್ಥೆಯನ್ನು ಹೊಂದಿದ್ದು ಆಸ್ಪತ್ರೆ ಪ್ರವೇಶ ಪಡೆಯುವ ಎಲ್ಲ ರೋಗಿಗಳಿಗೆ ಸುಲಭವಾಗಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.

ಆಸ್ಪತ್ರೆಯ ಹಾಸಿಗೆ ಹಂಚಿಕೆ ಫಿಸಿಕಲ್ ಟ್ರಯಾಜಿಂಗ್ ಆಧರಿಸಿ ಮಾಡಲಾಗುವುದು, ಕ್ಯೂಯಿಂಗ್ ವ್ಯವಸ್ಥೆಯಿಂದ ಆಸ್ಪತ್ರೆ ಪ್ರವೇಶ ಪಡೆಯಲು ಬಯಸುವ ಎಲ್ಲಾ ರೋಗಿಗಳ ಟ್ರಯಾಜ್ ವಿವರಗಳನ್ನು ಎಲೆಕ್ಟ್ರಾನಿಕ್ ಪದ್ಧತಿ ಮೂಲಕ ದಾಖಲಿಸಲಾಗುತ್ತದೆ ಎಂದರು. ಕ್ಲಿನಿಕಲ್ ಪರಿಸ್ಥಿತಿಗಳ ಆಧಾರದ ಮೇಲೆ ಸೊಂಕಿತರಿಗೆ ಆಸ್ಪತ್ರೆ / ಸಿಸಿಸಿ ಹಾಸಿಗೆ ಯನ್ನು ಶಿಫಾರಸು ಮಾಡಲಾಗುವುದು. ಈ ರೋಗಿಗಳಿಗೆ ನಿರ್ದಿಷ್ಟ ಹಾಸಿಗೆ ಮತ್ತು ವಲಯದ ಪ್ರಕಾರ ಕ್ಯೂ ಸಂಖ್ಯೆಯನ್ನು ನಿಗದಿ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

New bed reservation que system for covid 19 patients inaugurated by miniser arvind limbavali (2)

ರೋಗಿಗಳಿಗೆ ನಿರ್ದಿಷ್ಟ ಹಾಸಿಗೆ ಮತ್ತು ವಲಯದ ಪ್ರಕಾರ ಕ್ಯೂ ಸಂಖ್ಯೆಯನ್ನು ನಿಗದಿ ಮಾಡಲಾಗುತ್ತದೆ

ಚಿಕಿತ್ಸೆಯ ಸಮಯದ ಆಧಾರದ ಮೇಲೆ ಕ್ಯೂ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ನಿಯೋಜಿಸುವುದು. ನಿರ್ದಿಷ್ಟ ಹಾಸಿಗೆ ಪ್ರಕಾರ ಮತ್ತು ವಲಯಕ್ಕೆ ಕ್ಯೂ ಸಂಖ್ಯೆಯನ್ನು ನಿಗದಿ ಪಡಿಸಲಾಗಿದೆ ಇದರಿಂದ ಅನಗತ್ಯ ಗೊಂದಲ ನಿವಾರಣೆಯಾಗುತ್ತದೆ ಎಂದು ಅವರು ತಿಳಿಸಿದರು.

ಕ್ಯೂ ಕ್ರಮದಲ್ಲಿ ರೋಗಿಗಳ ಮೇಲೆ ಮಾತ್ರ ಕಾರ್ಯನಿರ್ವಹಿಸುವ ವಲಯ, ಅಗತ್ಯವಾದ ಹಾಸಿಗೆಯ ಪ್ರಕಾರದಲ್ಲಿ ಬದಲಾವಣೆಯ ಬೇಕಾದ ಸಂದರ್ಭದಲ್ಲಿ ರೋಗಿಯ ಮರು-ಕ್ಯೂ ಅಥವಾ ಅವರ ಮನೆಯ ಪ್ರತ್ಯೇಕತೆಯನ್ನು ಆರಿಸಿಕೊಳ್ಳುವಾಗ ಅಥವಾ ಖಾಸಗಿ ಪ್ರವೇಶ ಇತ್ಯಾದಿಗಳನ್ನು ಆಯ್ಕೆ ಮಾಡಲು ಆದ್ಯತೆ ನೀಡಿದಾಗ, ಅಂಥವರನ್ನು ಸರದಿ ಯಿಂದ ತೆಗೆದು ಹಾಕಬಹುದು ಎಂದು ಅವರು ಸ್ಪಷ್ಟಪಡಿಸಿದರು.

ಪರಿಸ್ಥಿತಿ ಗಂಭೀರವಾಗಿರುವ ಸೋಂಕಿತರು ಹಾಗೂ ಮಕ್ಕಳ ಚಿಕಿತ್ಸೆ, (ಪೀಡಿಯಾಟ್ರಿಕ್ಸ್,) ಗರ್ಭಿಣಿಯರು, ಶುಶ್ರೂಷಾ ತಾಯಂದಿರು, ಕ್ಯಾನ್ಸರ್, ವಿಶೇಷ ರೋಗಪೀಡಿತರು ಮತ್ತು ವಿಕಲಚೇತನರು ಚಿಕಿತ್ಸೆಗೆ ಬಂದಂತಹ ವಿಶೇಷ ಸಂದರ್ಭಗಳಲ್ಲಿ ಅವರಿಗೆ ತಕ್ಷಣದಲ್ಲಿ ಚಿಕಿತ್ಸೆ ನೀಡಲು ಸೂಪರ್ ಯೂಸರ್ ಗೆ ರೆಫರ್ ಮಾಡಲು ಈ ಕ್ಯೂ ಸಿಸ್ಟಮ್ ನಲ್ಲಿ ಅವಕಾಶ ಇದ್ದು, ಇದು ತುರ್ತು ಚಿಕಿತ್ಸೆ ಬೇಕಾಗಿರುವ ರೋಗಿಗಳಿಗೆ ಸಹಾಯಕಾರಿಯಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ವೈದ್ಯರ ಶಿಫಾರಸುಗಳ ಪ್ರಕಾರ ವಲಯ ಮಟ್ಟ ಮತ್ತು ಹಾಸಿಗೆಯ ಪ್ರಕಾರದ ಕ್ಯೂ ಸಂಖ್ಯೆ ರೋಗಿಗಳು ತಮ್ಮ ಬಿಯು ಸಂಖ್ಯೆಗಳು ಅಥವಾ ಎಸ್ ಆರ್ ಎಫ್ ಐಡಿಗಳನ್ನು ಬಳಸಿಕೊಂಡು ಸಾರ್ವಜನಿಕ ಡ್ಯಾಶ್‌ಬೋರ್ಡ್‌ನಲ್ಲಿ ನೈಜ ಸಮಯವನ್ನು ಟ್ರ್ಯಾಕ್ ಮಾಡಬಹುದು ಎಂದು ಅವರು ವಿವರಿಸಿದರು.

ಪ್ರಸ್ತುತ 8 ವಾರ್ ರೂಮ್, 1912 ಮತ್ತು 108 ನಿಯಂತ್ರಣ ಕೊಠಡಿಗಳಿವೆ, ಇವೆಲ್ಲವೂ ರೋಗಿಗಳ ಪ್ರಶ್ನೆಗಳನ್ನು ಸ್ವೀಕರಿಸುತ್ತಿವೆ ಮತ್ತು ಮನವಿಗಳನ್ನು ನಿರ್ವಹಿಸುತ್ತಿವೆ. ಇವುಗಳನ್ನು ಪ್ರತಿದಿನ 50 ಕ್ಕೂ ಹೆಚ್ಚು ವೈದ್ಯರು ನೋಡಿಕೊಳ್ಳುತ್ತಾರೆ, ರೋಗಿಯು ಯಾವುದೇ ಮಾಧ್ಯಮದ ಮೂಲಕ ಹಾಸಿಗೆಯನ್ನು ಕೋರಿದರೆ, ಮತ್ತು ಒಮ್ಮೆ ಸಿ ಎಚ್ ಬಿ ಎಂ ಎಸ್ ನಲ್ಲಿ ಪರೀಕ್ಷೆಗೆ ಒಳಪಡಿಸಿದರೆ – ಸಿಸ್ಟಂನಲ್ಲಿರುವ ಪ್ರತಿಯೊಬ್ಬರೂ ಮತ್ತು ರೋಗಿಯು ಅವರ ಕ್ಯೂ ಸ್ಥಾನವನ್ನು ನೋಡಲು ಸಾಧ್ಯವಾಗುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, BBMP ವಾರ್ ರೂಮ್ ನಿರ್ವಹಣೆಯ ಹೊಣೆಹೊತ್ತಿರುವ ತುಷಾರ್ ಗಿರಿನಾಥ್, ವಿ ಪೊನ್ನುರಾಜ್, ಕುಮಾರ್ ಪುಷ್ಕರ್, ಬಿಸ್ವಜಿತ್ ಸಿಂಗ್, ವಿಶೇಷ ಆಯುಕ್ತ ರಣದೀಪ್ ಹಾಗು ಡಾ. ಭಾಸ್ಕರ್ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

(New bed reservation queue system for covid 19 patients inaugurated by minister arvind limbavali)

ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ