ಸಿಬಿಎಸ್​ಇ ಸುಳ್ಳು ನೆಪ ಹೇಳಿ ಲಕ್ಷಾಂತರ ಶುಲ್ಕ: ಆರ್ಕಿಡ್ ಇಂಟರ್​ನ್ಯಾಷನಲ್ ಸ್ಕೂಲ್ ವಿರುದ್ಧ ಪೋಷಕರ ಪ್ರತಿಭಟನೆ

| Updated By: ಆಯೇಷಾ ಬಾನು

Updated on: Jan 24, 2023 | 2:43 PM

ಸಿಬಿಎಸ್​ಇ ಬೋರ್ಡ್ ಸಿಲಬಸ್​ ಎಂದು ಹೇಳಿ ವಂಚನೆ ಮಾಡಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಕಚೇರಿ ಬಳಿ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ಸಿಬಿಎಸ್​ಇ ಸುಳ್ಳು ನೆಪ ಹೇಳಿ ಲಕ್ಷಾಂತರ ಶುಲ್ಕ: ಆರ್ಕಿಡ್ ಇಂಟರ್​ನ್ಯಾಷನಲ್ ಸ್ಕೂಲ್ ವಿರುದ್ಧ ಪೋಷಕರ ಪ್ರತಿಭಟನೆ
ಆರ್ಕಿಡ್ ಇಂಟರ್​ನ್ಯಾಷನಲ್ ಶಾಲೆ ವಿರುದ್ಧ ಪೋಷಕರ ಪ್ರತಿಭಟನೆ
Follow us on

ಬೆಂಗಳೂರು: ಕೆಲ ತಿಂಗಳ ಹಿಂದೆ ಬಿಟಿಎಂ ಲೇಔಟ್ ಆರ್ಕಿಡ್ ಶಾಲೆ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದ್ದರು. ಈಗ ನಾಗರಬಾವಿ ಬಳಿ ಇರುವ ಆರ್ಕಿಡ್​ ಇಂಟರ್​ನ್ಯಾಷನಲ್ ಶಾಲೆ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು ಇಂದು ಪೋಷಕರು ಶಾಲೆ ಮುಂದೆ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಸಿಬಿಎಸ್​ಇ ಬೋರ್ಡ್ ಸಿಲಬಸ್​ ಎಂದು ಹೇಳಿ ವಂಚನೆ ಮಾಡಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಕಚೇರಿ ಬಳಿ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸು ಕಂಡು ಶಾಲೆಗೆ ಸೇರಿಸಿದ ಪೋಷಕರು ರಸ್ತೆಯಲ್ಲಿ ಗಲಾಟೆ ಮಾಡ್ತಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಸಿಬಿಎಸ್​ಇ ಬೋರ್ಡ್ ಮಾನ್ಯತೆ ಪಡೆದ ಶಾಲೆ ಎಂದು ಹೇಳಿದ್ರು. ಈಗ ಸಿಬಿಎಸ್​ಇ ಬದಲು ಪಬ್ಲಿಕ್ ಪರೀಕ್ಷೆ ಬರೆಸಲು ಮುಂದಾಗಿದ್ದಾರೆ. ಸಿಬಿಎಸ್​ಇ ಬೋರ್ಡ್ ಮಾನ್ಯತೆ ಪಡೆದ ಶಾಲೆ ಎಂದು ಹೇಳಿ ಲಕ್ಷಾಂತರ ಹಣ ಪಡೆದು ವಂಚನೆ ಮಾಡಿದ್ದಾರೆಂದು ಶಾಲೆ ವಿರುದ್ಧ ಪೋಷಕರು ಆರೋಪ ಮಾಡಿದ್ದಾರೆ. ಜೊತೆಗೆ ಶಾಲಾ ಆಡಳಿತ ಮಂಡಳಿ ವಿರುದ್ಧ FIR​ ದಾಖಲಿಸುವಂತೆ ಆಗ್ರಹಿಸಿದ್ದಾರೆ.

ಸ್ಕೂಲ್ ನ ಮೆಟ್ಟಿಲ ಮೇಲೆ ಪೋಷಕರೊಬ್ಬರು ಧರಣಿ ನಡೆಸಿದ್ದು ಟಿಸಿ ಕೊಡಿ ಅಂತ ಪಟ್ಟು ಹಿಡಿದಿದ್ದಾರೆ. ಟಿಸಿ ಕೊಡಿ ಸರ್ಕಾರಿ ಶಾಲೆಗೆ ಹಾಕ್ತೀವಿ. ಎರಡೂವರೆ ಲಕ್ಷ ಎರಡು ಮಕ್ಕಳಿಗೆ ಫೀಸ್ ಕಟ್ಟಿದ್ದೇನೆ. ಈಗ ಕಲಿಕೆಯಲ್ಲಿ ಮೋಸ ಮಾಡಿದ್ದಾರೆ. ಇವ್ರೇ ಮೋಸ ಮಾಡಿ ಮಕ್ಕಳಿಗೆ ಏನು ಕಲಿಸ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಲಾಕ್ ಡೌನ್ ವೇಳೆ ಪ್ರೀತಿಯಲ್ಲಿ ಲಾಕ್​ ಆಗಿದ್ದ ಮುಗಳಖೋಡ ಪ್ರೇಮಿಗಳು, ಈಗ ಮದುವೆ ಮಾಡಿಕೊಂಡು ಠಾಣೆ ಮೆಟ್ಟಿಲೇರಿದ್ದಾರೆ, ವಿಷಯ ಏನು?

ಒಬ್ಬೊಬ್ಬ ವಿದ್ಯಾರ್ಥಿಗೆ 1.50 ಲಕ್ಷ ಫೀಸ್

ಇನ್ನು ಆರ್ಕಿಡ್​ ಇಂಟರ್​ನ್ಯಾಷನಲ್ ಶಾಲೆ ಆಡಳಿತ ಮಂಡಳಿ ತಮ್ಮದು ಸಿಬಿಎಸ್​ಇ ಬೋರ್ಡ್ ಸಿಲಬಸ್ ಎಂದು ಹೇಳಿ ಒಬ್ಬೊಬ್ಬ ವಿದ್ಯಾರ್ಥಿಗಳ ಬಳಿಯೂ 1.50 ಲಕ್ಷ ಫೀಸ್ ವಸೂಲಿ ಮಾಡಿದೆ. ನಾಗರಬಾವಿಯ ಆರ್ಕಿಡ್ ಶಾಲೆಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದ್ರೆ ಸಿಬಿಎಸ್​ಇ ಬೋರ್ಡ್ ಸಿಲಬಸ್ ಎಂದು ಹೇಳಿಕೊಂಡು ಈಗ ಶಿಕ್ಷಣ ಇಲಾಖೆ 5 ಮತ್ತು 8ನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆಗೆ ಮುಂದಾಗಿದೆ. ಶಾಲಾ ಆಡಳಿತ ಮಂಡಳಿ ಏಕಾಏಕಿ ಪುಸ್ತಕ ಬದಲಾವಣೆ ಮಾಡಿ ರಾಜ್ಯ ಪಠ್ಯಕ್ರಮ ಬೋಧನೆ ಮಾಡುತ್ತಿದೆ. ನಮ್ಮ ಮಕ್ಕಳ ಪಬ್ಲಿಕ್ ಪರೀಕ್ಷೆಗೆ ಒಂದೂವರೆ ತಿಂಗಳಷ್ಟೇ ಬಾಕಿ ಇದೆ. ಈಗ ರಾಜ್ಯ ಪಠ್ಯಕ್ರಮದ ಪರೀಕ್ಷೆ ಅಂದ್ರೆ ಹೇಗೆ? ಎಂದು ಪೋಷಕರು ಚಿಂತೆಗೀಡಾಗಿದ್ದಾರೆ. ಬರೋಬ್ಬರಿ 7 ವರ್ಷದಿಂದ ಆರ್ಕಿಡ್ ಶಾಲೆ ಇಂತಹ ಕಳ್ಳಾಟವಾಡುತ್ತಿದೆಯಂತೆ. ಕಳೆದ 2 ದಿನಗಳ ಹಿಂದಷ್ಟೇ ಇದು CBSE ಬೋರ್ಡ್ ಅನ್ನೋದು ಬಹಿರಂಗವಾಗಿದೆ.

ಇಷ್ಟು ವರ್ಷ ಮಕ್ಕಳ ಭವಿಷ್ಯದ ಜೊತೆ ಶಾಲಾ ಆಡಳಿತ ಮಂಡಳಿ ಚೆಲ್ಲಾಟವಾಡಿದೆಯಂತೆ. ಬ್ರ್ಯಾಂಡೇಡ್ ಸ್ಕೂಲ್ ಅಂತ ನಾವು ಯಾಮಾರಿದ್ವಿ. ಕೋವಿಡ್ ವೇಳೆ ವಕೀಲರನ್ನ ಛೂ ಬಿಟ್ಟು ಫೀಸ್ ವಸೂಲಿ ಮಾಡಿದ್ದಾರೆ. ಲಾಯರ್ ಮೂಲಕ ಕೋವಿಡ್ ಸಂದರ್ಭದಲ್ಲಿ ಆರ್ಕಿಡ್ ಶಾಲೆ ಬಾಕಿ ಶುಲ್ಕ ಪಡೆದಿದೆ. ಆರ್ಕಿಡ್ ಶಾಲೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಪೋಷಕರು ಆಗ್ರಹಿಸಿದ್ದಾರೆ.

ನಾಳೆ ಡಿಡಿಪಿಐ ಭೇಟಿ

ನಾಳೆ ಬೆಳಗ್ಗೆ 9 ಗಂಟೆಗೆ ಬೈಲಾಂಜನಪ್ಪ ಬೆಂಗಳೂರು ದಕ್ಷಿಣ ನಂ.1ರ ಡಿಡಿಪಿಐ ಶಾಲೆಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:32 pm, Tue, 24 January 23