AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭ್ರಷ್ಟಾಚಾರ: ಶಿಕ್ಷಣ ಇಲಾಖೆಗಳಲ್ಲಿ ಜಾಗೃತ ದಳ ರಚನೆ ಮಾಡುವಂತೆ ಸರ್ಕಾರಕ್ಕೆ ಪೋಷಕರ ಒತ್ತಾಯ

ರಾಜ್ಯದಲ್ಲಿ ಹೊಸ ಸರ್ಕಾರ ಆಡಳಿತಕ್ಕೆ ಬಂದರೂ ಶಿಕ್ಷಣ ಇಲಾಖೆಯಲ್ಲಿ ಅವ್ಯಾಹತವಾಗಿ ಭ್ರಷ್ಟಾಚಾರ ಮುಂದುವರಿದಿದೆಯಾ? ಶಿಕ್ಷಣ ಇಲಾಖೆಯಲ್ಲಿ ಯಾವುದೇ ಕೆಲಸ ಕಾರ್ಯಕ್ಕೂ ಕಾಸು ಬಿಚ್ಚಲೇಬೇಕಾ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಲಂಚಾವತರ ಹಿಂಸೆಯಿಂದ ಬೇಸತ್ತಿರುವ ಪೋಷಕರು ಸರ್ಕಾರದ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ

ಭ್ರಷ್ಟಾಚಾರ: ಶಿಕ್ಷಣ ಇಲಾಖೆಗಳಲ್ಲಿ ಜಾಗೃತ ದಳ ರಚನೆ ಮಾಡುವಂತೆ ಸರ್ಕಾರಕ್ಕೆ ಪೋಷಕರ ಒತ್ತಾಯ
ಸಾಂದರ್ಭಿಕ ಚಿತ್ರ
Vinay Kashappanavar
| Edited By: |

Updated on: Oct 30, 2023 | 8:43 AM

Share

ಬೆಂಗಳೂರು, ಅ.30: ಶಿಕ್ಷಣ ಇಲಾಖೆಯಲ್ಲಿ (Education Departments) ಈ ಹಿಂದಿನ ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ (Corruption) ನಡೆಯುತ್ತಿದೆ ಎಂದು ಆರೋಪಿಲಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ (Congress) ಪಕ್ಷ ಈ ಹಿಂದೆ ಆಗೀನ ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಟೀಕಾಪ್ರಹಾರಗಳನ್ನೇ ನಡೆಸಿತ್ತು. ಆದರೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರ ಮಾತ್ರ ನಿಂತಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಏನೇ ಕೆಲಸ ಮಾಡಬೇಕೆಂದರೂ ಹಣ ಕೇಳ್ತಾರೆ ಅಂತಾ ಕಳೆದ ಒಂದು ವಾರದ ಹಿಂದೆ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ ರೂಪ್ಸಾ ಆರೋಪಿಸಿತ್ತು. ಈ ಬಳಿಕ ಈಗ ಪೋಷಕರು ಹೊಸ ಒತ್ತಾಯ ಶುರು ಮಾಡಿದ್ದಾರೆ. ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಜಾಗೃತ ಪೊಲೀಸಿಂಗ್ ವ್ಯವಸ್ಥೆಗೆ ಒತ್ತಾಯ ಶುರು ಮಾಡಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ನಿರಂತರವಾಗಿ ಹೆಚ್ಚುತ್ತಿದೆ ಭ್ರಷ್ಟಾಚಾರ

ಬಿಇಎ, ಡಿಡಿಪಿಐ ಹಾಗೂ ಶಿಕ್ಷಣ ಅಧಿಕಾರಿಗಳು ಪ್ರತಿಯೊಂದಕ್ಕೂ ಹಣ ಬೇಡಿಕೆ ಇಡುತ್ತಿದ್ದಾರೆ. ಪೋಷಕರು ಶಾಲಾ ಶಿಕ್ಷಣ ಇಲಾಖೆಗೆ ದೂರು ನೀಡಿದ್ರೂ ಡೋಂಟ್ ಕೇರ್ ಅಂತಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆ, ಶಿಕ್ಷಣ ಇಲಾಖೆಯಲ್ಲಿ ಜಾಗೃತ ದಳ ರಚನೆ ಮಾಡುವಂತೆ ಪೋಷಕರ ಸಮನ್ವಯ ಸಮಿತಿ ಒತ್ತಾಯ ಮಾಡಿದ್ದಾರೆ. ಬೇರೆ ಬೇರೆ ಇಲಾಖೆಗಳಲ್ಲಿ ಇರುವಂತೆ ಅಂದ್ರೆ ಅರಣ್ಯ ಇಲಾಖೆ, ಇಂಧನ ಇಲಾಖೆ, ಬಿಬಿಎಂಪಿ ಹಾಗೂ ಬಿಡಿಎನಲ್ಲಿ ಇರುವಂತೆ ಶಿಕ್ಷಣ ಇಲಾಖೆಯಲ್ಲಿಯೂ ಜಾಗೃತದಳ ತರುವಂತೆ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್ ರೈಲು ಡಿಕ್ಕಿ ಹೊಡೆದು ತಾಯಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಸಾವು

ಸರ್ಕಾರಿ ಶಾಲೆಗಳಲ್ಲಿ ಶಾಲಾ ಮುಖ್ಯಸ್ಥರು ಶಿಕ್ಷಕರು, ಬಿಇಎ, ಡಿಡಿಪಿಸಿ ಸೇರಿದಂತೆ ಶಿಕ್ಷಣ ಅಧಿಕಾರಿಗಳ ಲಂಚಾವತಾರ ಹೆಚ್ಚಾಗುತ್ತಿದೆ ನಾವು ಯಾವುದೇ ದೂರು ನೀಡಿದ್ರೆ ಡಸ್ಟ್ ಬೀನ್ ಸೇರುತ್ತಿದೆ. ಈ ಭ್ರಷ್ಟಚಾರಕ್ಕೆ ಕಡಿವಾಣ ಹಾಕಬೇಕು ಅಂದ್ರೆ ಪೊಲೀಸ್ ಜಾಗೃತ ದಳವನ್ನ ಶಿಕ್ಷಣ ಇಲಾಖೆಯಲ್ಲಿ ಓಪನ್ ಮಾಡಬೇಕು. ನಾವು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ದೂರು ನೀಡಿದ್ರೆ ಕ್ರಮವಹಿಸುತ್ತಿಲ್ಲ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಶಾಲಾ ಶಿಕ್ಷಣ ಇಲಾಖೆಯಲ್ಲಿ ಜಾಗೃತ ಪೊಲೀಸ್ ಇಲಾಖೆಯ ಮೂಲಕ ಕಂಪ್ಲೇಟ್ ನೀಡಲು ವಿಚಾರಣೆ ನಡೆಸುವ ವ್ಯವಸ್ಥೆ ಜಾರಿಗೆ ತರಬೇಕು. ಈ ಜಾಗೃತ ದಳ ಇಲಾಖೆಯಲ್ಲಿ ಬಂದ್ರೆ ಪೋಷಕರು ಶಾಲೆಗಳ ವಿರುದ್ಧ ಅಧಿಕಾರಿಗಳ ವಿರುದ್ಧ ನಾವು ಸುಲಭವಾಗಿ ದೂರು ನೀಡಬಹುದು ಕ್ರಮಕ್ಕೆ ಒತ್ತಾಯಿಸಬಹುದು. ಶಾಲಾ ಶಿಕ್ಷಣ ಇಲಾಖೆಯ ಈ ಲಂಚುಗುಳಿತನಕ್ಕೆ ಕಡಿವಾಣ ಹಾಕಬಹುದು ಅಂತಾ ಸರ್ಕಾರಕ್ಕೆ ಪೋಷಕರ ಸಮನ್ವಯ ಸಂಘಟನೆಗಳಿಂದ ಒತ್ತಾಯ ಕೇಳಿ ಬಂದಿದೆ.

ಒಟ್ನಲ್ಲಿ ಶಿಕ್ಷಣ ಇಲಾಖೆಯ ಮೇಲೆ ಪದೇ ಪದೇ ಮತ್ತೆ ಭ್ರಷ್ಟಾಚಾರದ ಆರೋಪ ಕೇಳಿ ಬರ್ತಿದ್ದು ಶಿಕ್ಷಣ ಸಚಿವರು ಮಾತ್ರ ಇದನ್ಯಾವುದು ಕಿವಿಗೊಡದೆ ಕಣ್ಣುಮುಚ್ಚಿ ಕುಳಿತ್ತಿದ್ದು ಇನ್ನಾದ್ರೂ ಈ ಕಡೆ ಸರ್ಕಾರ ಸೂಕ್ತ ಕ್ರಮವಹಿಸುತ್ತ ಕಾದು ನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ