ಮೊನ್ನೇ ಅಷ್ಟೇ ಉದ್ಘಾಟನೆಗೊಂಡಿರುವ ಹಳದಿ ಮಾರ್ಗದ ಮೆಟ್ರೋನಲ್ಲಿ ತಾಂತ್ರಿಕ ದೋಷ, ಪ್ರಯಾಣಿಕರು ಪರದಾಟ

ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಆಗಸ್ಟ್‌ 10ರಂದು ಚಾಲನೆ ನೀಡಿದ್ದರು. ಆರ್‌ವಿ ರಸ್ತೆ - ಬೊಮ್ಮಸಂದ್ರ ನಡುವಿನ 19.15 ಕಿ.ಮೀ ಉದ್ದದ ಹಳದಿ ಮಾರ್ಗ ಇದಾಗಿದ್ದು, ಇದೀಗ ಈ ಮಾರ್ಗದ ನಮ್ಮ ಮೆಟ್ರೋನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಇದರಿಂದ ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದ್ದು, ಮೆಟ್ರೋ ನಿಲ್ದಾಣದಲ್ಲಿ ಜನ ದಟ್ಟಣೆ ಉಂಟಾಗಿದೆ.

ಮೊನ್ನೇ ಅಷ್ಟೇ ಉದ್ಘಾಟನೆಗೊಂಡಿರುವ ಹಳದಿ ಮಾರ್ಗದ ಮೆಟ್ರೋನಲ್ಲಿ ತಾಂತ್ರಿಕ ದೋಷ, ಪ್ರಯಾಣಿಕರು ಪರದಾಟ
Yellow Line Namma Metro
Updated By: ರಮೇಶ್ ಬಿ. ಜವಳಗೇರಾ

Updated on: Sep 22, 2025 | 9:59 PM

ಬೆಂಗಳೂರು, (ಸೆಪ್ಟೆಂಬರ್ 22): ಕಳೆದ ಆಗಸ್ಟ್​ ನಲ್ಲಿ ಅಷ್ಟೇ ಉದ್ಘಾಟನೆಗೊಂಡಿದ್ದ R.V.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗ ನಮ್ಮ ಮೆಟ್ರೋನಲ್ಲಿ (Yellow Line Namma Metro) ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಆರ್​​.ವಿ.ರಸ್ತೆ ನಿಲ್ದಾಣದಲ್ಲಿ ನಮ್ಮ ಮೆಟ್ರೋ ರೈಲಿನಲ್ಲಿ ಸಮಸ್ಯೆಯಾಗಿದ್ದು, ರೈಲು ನಿಲ್ದಾಣದಲ್ಲಿ ನಿಂತಲ್ಲೇ ನಿಂತುಕೊಂಡಿದೆ.  ಹೀಗಾಗಿ ಇಂದು (ಸೆಪ್ಟೆಂಬರ್ 22)ಸಂಜೆ 7 ಗಂಟೆಯಿಂದ ನಿಗದಿತ ವೇಳಾಪಟ್ಟಿಯಂತೆ ರೈಲುಗಳು ಸಂಚರಿಸುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದ್ದು, R.V.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಈ ಬಗ್ಗೆ BMRCL ವಿಷಾದ ವ್ಯಕ್ತಪಡಿಸಿದೆ.

ಪ್ರಯಾಣಿಕರಿಗೆ ಸಮಸ್ಯೆಯಾಗಿರುವುದರ ಈ ಬಗ್ಗೆ BMRCL ಪ್ರತಿಕ್ರಿಯಿಸಿದ್ದು, ಸಂಜೆ 7 ಗಂಟೆಯಿಂದ ನಿಗದಿತ ವೇಳಾಪಟ್ಟಿಯಂತೆ ರೈಲುಗಳು ಸಂಚರಿಸುತ್ತಿಲ್ಲ. ಆದಷ್ಟು ಬೇಗ ಎಲ್ಲಾ ಸಮಸ್ಯೆ ಬಗೆಹರಿಯಬಹುದು ಎಂಬ ನಿರೀಕ್ಷೆ ಇದೆ. ಉಂಟಾದ ಅನಾನುಕೂಲತೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಎಂದಿದೆ.

ಬಗೆಹರಿದ ಸಮಸ್ಯೆ

ಹಳದಿ ಮಾರ್ಗ ನಮ್ಮ ಮೆಟ್ರೋನಲ್ಲಿ ತಾಂತ್ರಿಕ ಸಮಸ್ಯೆ ಇದೀಗ ಬಗೆಹರಿದಿದ್ದು, ಮೆಟ್ರೋ ಸಂಚಾರ ಶುರುವಾಗಿದೆ.  ಇದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ RV ರಸ್ತೆ ಹಳದಿ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಓಡಾಡುತ್ತಿದ್ದಾರೆ.

Published On - 9:38 pm, Mon, 22 September 25