ಪರ್ಸೋನಾ ಮಿಸೆಸ್ ಇಂಡಿಯಾ ಯೂನಿವರ್ಸ್ 2022 ಕಿರೀಟ ಹೇಮಾ ನಿರಂಜನ್ ಮುಡಿಗೇರಿದೆ. ಪರ್ಸೋನಾ ಮಿಸೆಸ್ ಇಂಡಿಯಾ ಸೀಸನ್ 5 ವಿಜೇತ ಬೆಂಗಳೂರಿನ ಹೇಮಾ ನಿರಂಜನ್ ಅವರು ಉದ್ಯಮಿ ಮತ್ತು ಇಂಟೀರಿಯರ್ ಡಿಸೈನರ್ ಆಗಿದ್ದಾರೆ. ಇದೀಗ ಪರ್ಸನಾ ಮಿಸೆಸ್ ಇಂಡಿಯಾ ಯೂನಿವರ್ಸ್ 2022 ಎಂದು ಕಿರೀಟವನ್ನು ಧರಿಸುವ ಮೂಲಕ ತಮ್ಮ ಮುಕುಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದ್ದಾರೆ. ಮುಂದೆ ಮಿಸೆಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಲಿದ್ದಾರೆ. ಹೇಮಾ ನಿರಂಜನ್ ಅವರು ಕೊಲ್ಕತ್ತಾದಲ್ಲಿ ನಡೆದ ಮಾಧ್ಯಮಸಂವಾದಲ್ಲಿ ಭಾಗಿಯಾಗಿದ್ರು.
ಮಿಸೆಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಹೇಮಾ ನಿರಂಜನ್ ಅವರು ನಮ್ಮ ದೇಶವನ್ನು ಪ್ರತಿನಿಧಿಸಿದ್ದಾರೆ. ಹೇಮಾ ನಿರಂಜನ್ ಅವರು ವೇದಿಕೆಯಲ್ಲಿ 33 ಫೈನಲಿಸ್ಟ್‌ಗಳೊಂದಿಗೆ ಸ್ಪರ್ಧಿಸಿ ಕೊನೆಗೆ ಪರ್ಸೋನಾ ಮಿಸೆಸ್ ಇಂಡಿಯಾ ಸೀಸನ್ 5 ವಿಜೇತರಾಗಿದ್ದಾರೆ. ಇನ್ನು ಈ ಕಾರ್ಯಕ್ರಮವನ್ನು ಬಿಗ್ ಬಾಸ್ ಖ್ಯಾತಿಯ ಶಾರ್ದೂಲ್ ಪಂಡಿತ್ ಮತ್ತು ಆರ್‌ಜೆ ಶ್ರವಣ್ ನಡೆಸಿಕೊಟ್ಟರು. ಈ ಕಾರ್ಯಕ್ರಮದ ತೀರ್ಪುಗಾರರಾಗಿ, ಅರ್ಚನಾ ಕೊಚ್ಚರ್, ಆಕಾಶ್ ಚೌಧರಿ, ಅಮೀರ್ ದಾಲ್ವಿ, ಕರಣ್ ಖಂಡೇಲ್ವಾಲ್, ಕರಿಷ್ಮಾ ಮೋದಿ, ಅವಿ ಮಿತ್ತಲ್, ಅಂಜಲಿ ರೈನಾ, ಮತ್ತು ಮೇಘಾ ಅಗರ್ವಾಲ್ ಇದ್ದರು.
Published On - 6:03 pm, Thu, 14 July 22