ಮಾರತ್ ಹಳ್ಳಿ ಲಾಡ್ಜ್ ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣ; ಹೆಂಡತಿ ಬಿಟ್ಟ ಸಲಿಂಗ ಕಾಮಿಗಳ ಕಾಮದಾಟದಲ್ಲಿ ಕೊಲೆ, ಆರೋಪಿ ಬಿಚ್ಚಿಟ್ಟ 4 ವರ್ಷಗಳ ಕತೆ

ಜುಲೈ 7 ರಂದು 24 ವರ್ಷದ ರಾಜಗೋಪಾಲ್ ಎಂಬಾತನ ಮೃತದೇಹ ಲಾಡ್ಜ್ ನ ಕೋಣೆಯಲ್ಲಿ ಪತ್ತೆಯಾಗಿತ್ತು. ಜುಲೈ 4 ರಂದು ಮಾರತ್ ಹಳ್ಳಿ ರಿಲ್ಯಾಕ್ಸ್ ಲಾಡ್ಜ್ ನಲ್ಲಿ ರಾಜಗೋಪಾಲ್ ತನ್ನ ಜೊತೆ ಮತ್ತೋರ್ವ ವ್ಯಕ್ತಿ ತಮಿಳು ಮಣಿವಣ್ಣನ್ ನೊಂದಿಗೆ ಒಂದು ರೂಂ ಬುಕ್ ಮಾಡಿದ್ದ.

ಮಾರತ್ ಹಳ್ಳಿ ಲಾಡ್ಜ್ ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣ; ಹೆಂಡತಿ ಬಿಟ್ಟ ಸಲಿಂಗ ಕಾಮಿಗಳ ಕಾಮದಾಟದಲ್ಲಿ ಕೊಲೆ, ಆರೋಪಿ ಬಿಚ್ಚಿಟ್ಟ 4 ವರ್ಷಗಳ ಕತೆ
ತಮಿಳು ಮಣಿವಣ್ಣನ್
Follow us
TV9 Web
| Updated By: ಆಯೇಷಾ ಬಾನು

Updated on:Jul 14, 2022 | 4:54 PM

ಬೆಂಗಳೂರು: ನಗರದ ಮಾರತ್ ಹಳ್ಳಿ ಲಾಡ್ಜ್ ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಪೊಲೀಸರ ತ‌ನಿಖೆ ವೇಳೆ ಭಾರೀ ಟ್ವಿಸ್ಟ್ ಸಿಕ್ಕಿದೆ. ಮಾರತಹಳ್ಳಿ ಪೊಲೀಸರು(Marathahalli Police) ಕೊಲೆ ಆರೋಪಿ ತಮಿಳು ಮಣಿವಣ್ಣನ್ ಬಂಧಿಸಿದ್ದಾರೆ. ಕೇಸ್ ತನಿಖೆ ವೇಳೆ ಸಲಿಂಗ ಕಾಮಿಗಳ ಕಾಮದಾಟದ ನಡುವೆಯೇ ಕೊಲೆ ನಡೆದಿರುವ ರಹಸ್ಯ ರಿವೀಲ್ ಆಗಿದೆ.

ಸಲಿಂಗ ಕಾಮಿಗಳ ಕಾಮದಾಟದಲ್ಲಿ ಕೊಲೆ ಜುಲೈ 7 ರಂದು 24 ವರ್ಷದ ರಾಜಗೋಪಾಲ್ ಎಂಬಾತನ ಮೃತದೇಹ ಲಾಡ್ಜ್ ನ ಕೋಣೆಯಲ್ಲಿ ಪತ್ತೆಯಾಗಿತ್ತು. ಜುಲೈ 4 ರಂದು ಮಾರತ್ ಹಳ್ಳಿ ರಿಲ್ಯಾಕ್ಸ್ ಲಾಡ್ಜ್ ನಲ್ಲಿ ರಾಜಗೋಪಾಲ್ ತನ್ನ ಜೊತೆ ಮತ್ತೋರ್ವ ವ್ಯಕ್ತಿ ತಮಿಳು ಮಣಿವಣ್ಣನ್ ನೊಂದಿಗೆ ಒಂದು ರೂಂ ಬುಕ್ ಮಾಡಿದ್ದ. ಎರಡು ದಿನದ ಬಳಿಕ ಮತ್ತೆ ರೂಂ ರಿನೀವಲ್ ಮಾಡಿರಲಿಲ್ಲ. ಲಾಡ್ಜ್ ಸಿಬ್ಬಂದಿ ಪರಿಶೀಲಿಸಲು ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿತ್ತು. ಮೃತ ರಾಜಗೋಪಾಲ್ ಜೊತೆಗೆ ಲಾಡ್ಜ್ ಗೆ ಬಂದು ರೂಂ ಪಡೆದಿದ್ದ ತಮಿಳು ಮಣಿವಣ್ಣನ್ ಎಸ್ಕೇಪ್ ಆಗಿದ್ದ. ಘಟನೆ ಬಳಿಕ ಲಾಡ್ಜ್ ಸಿಬ್ಬಂದಿ ಮಾರತ್ ಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ರು. ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆ ಹಿಸುಕಿ ಉಸಿರು ಗಟ್ಟಿಸಿ ರಾಜಗೋಪಾಲ್ ಕೊಲೆ ಮಾಡಿರುವುದು ಪತ್ತೆಯಾಗಿತ್ತು. ಹೀಗಾಗಿ ಅನುಮಾನಾಸ್ಪದ ಸಾವಿನ ಹಿನ್ನಲೆ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಅಚ್ಚರಿಯ ಉತ್ತರ ಸಿಕ್ಕಿದೆ.

ಕಳೆದ 4 ವರ್ಷಗಳಿಂದ ರಾಜಗೋಪಾಲ್ ಮತ್ತು ತಮಿಳು ಮಣಿವಣ್ಣನ್ ಇಬ್ಬರು ಸಂಬಂಧ ಹೊಂದಿದ್ದರು. ಕೊಲೆ ಆರೋಪಿ ತಮಿಳು ಮಣಿವಣ್ಣನ್ ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ. ಈ ಹಿಂದೆ ಮೊದಲಿಗೆ ತಮಿಳುನಾಡಿನ ಚೈನ್ನೈ ನಲ್ಲಿ ಆಸ್ಪತ್ರೆಯೊಂದರಲ್ಲಿ ಇಬ್ಬರು ಕೆಲಸ ಮಾಡ್ತಿದ್ದರು. ಇಬ್ಬರೂ ಮದುವೆ ಬಳಿಕವೂ ಸಂಬಂಧ ಮುಂದುವರೆಸಿದ್ದರಿಂದ ದಾಂಪತ್ಯ ಮುರಿದುಬಿದ್ದಿತ್ತು. ಇದೇ ವಿಚಾರವಾಗಿ ಪತ್ನಿ ತ್ಯಜಿಸಿದ ಬಳಿಕ ಕೊಲೆ ಆರೋಪಿ ತಮಿಳು ಮಣಿವಣ್ಣನ್ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಲ್ಯಾಬ್ ನಲ್ಲಿ ಕೆಲಸ ಮಾಡ್ತಿದ್ದ. ಚೈನ್ನೈ ನಿಂದ ಆಗಾಗ ರಾಜಗೋಪಾಲ್ ನನ್ನ ಮಾರತ್ ಹಳ್ಳಿಯ ಲಾಡ್ಜ್ ಗೆ ಕರೆಸಿಕೊಳ್ತಿದ್ದ. ಆದ್ರೆ ಜುಲೈ 4ರಿಂದ ಜುಲೈ7 ರ ನಡುವೆ ಇವರಿಬ್ಬರ ನಡುವೆ ಅದೇನಾಯ್ತೂ ರಾಜಗೋಪಾಲ್ ಲಾಡ್ಜ್ ನಲ್ಲೇ ಸತ್ತು ಬಿದ್ದಿದ್ದಾನೆ. ಈ ಬಗ್ಗೆ ತನಿಖೆ ಮುಂದುವರೆದಿದೆ.

Published On - 3:56 pm, Thu, 14 July 22