ಬೆಂಗಳೂರಿನ ಫುಟ್​ಪಾತ್​ಗಳು ಹಾಳಾಗಲು ಇಲಿ, ಹೆಗ್ಗಣಗಳೇ ಕಾರಣವಂತೆ!

ಕೋಟ್ಯಂತರ ಹಣ ಖರ್ಚು ಮಾಡಿ ನಿರ್ಮಿಸಿದ ಫುಟ್​ ಪಾತ್ ಕೆಲವೇ ದಿನಗಳಲ್ಲಿ ಹಾಳಾಗಿದ್ದು, ಬಿಬಿಎಂಪಿಯು ಎಲ್ಲಾ ಆರೋಪವನ್ನು ಇಲಿ, ಹೆಗ್ಗಣಗಳ ಹೆಗಲೇರಿಸಿದೆ.

ಬೆಂಗಳೂರಿನ ಫುಟ್​ಪಾತ್​ಗಳು ಹಾಳಾಗಲು ಇಲಿ, ಹೆಗ್ಗಣಗಳೇ ಕಾರಣವಂತೆ!
Rats
TV9kannada Web Team

| Edited By: Nayana Rajeev

Jul 14, 2022 | 3:14 PM

ಕೋಟ್ಯಂತರ ಹಣ ಖರ್ಚು ಮಾಡಿ ನಿರ್ಮಿಸಿದ ಫುಟ್​ ಪಾತ್ ಕೆಲವೇ ದಿನಗಳಲ್ಲಿ ಹಾಳಾಗಿದ್ದು, ಬಿಬಿಎಂಪಿಯು ಎಲ್ಲಾ ಆರೋಪವನ್ನು ಇಲಿ, ಹೆಗ್ಗಣಗಳ ಹೆಗಲೇರಿಸಿದೆ. ಹೌದು, ಕೋಟಿ ಗಟ್ಟಲೆ ಹಣ ಖರ್ಚು ಮಾಡಿ, ಸ್ವಲ್ಪವೇ ಸ್ವಲ್ಪ ದಿನಗಳಲ್ಲೇ ಫುಟ್​ ಪಾತ್ ಕಿತ್ತು ಬರುತ್ತಿದೆ. ಆದರೆ ಬಿಬಿಎಂಪಿ ಎಂಜಿನಿಯರ್ ಮಾತ್ರ ಇದು ನಮ್ಮ ತಪ್ಪಲ್ಲ ಇಲಿ ಹಾಗೂ ಹೆಗ್ಗಣಗಳ ತಪ್ಪು ಎಂದು ಜಾರಿಕೊಂಡಿದ್ದಾರೆ.

ಸ್ಮಾರ್ಟ್ ಸಿಟಿ ಟೆಂಡರ್ ಶ್ಯೂರ್ ಯೋಜನೆಯಲ್ಲಿ ಬಿಬಿಬಿಎಂಪಿಯು ಸಾವಿರಾರು ಕೋಡಿ ವ್ಯಯಿಸಿ ರಸ್ತೆ ಹಾಗೂ ಫುಟ್​ಪಾತ್​ಗಳ ನಿರ್ಮಾಣ ಮಾಡಿತ್ತು. ಇದೀಗ ಈ ಫುಟ್​ಪಾತ್​ಗಳು ಹಾಳಾಗಿದ್ದು ಇಲಿ ಮತ್ತು ಹೆಗ್ಗಣಗಳಿಂದ ಎಂದು ಬಿಬಿಎಂಪಿ ಹೇಳುತ್ತಿದೆ.

ಸ್ಮಾರ್ಟ್ ಸಿಟಿ, ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ಯೋಜನೆಯಡಿ ಫುಟ್ ಪಾತ್ ನಿರ್ಮಾಣ ಮಾಡಲಾಗಿತ್ತು. ದೇಶದ ಪ್ರಧಾನಿ ಬರುವ ಸಂದರ್ಭದಲ್ಲೂ ನಕಲಿ ಕಾಮಗಾರಿ ನಡೆಸಿ ದುಡ್ಡು ದೋಚಿದ್ದಾರೆ ಎನ್ನುವ ಆರೋಪವನ್ನು ಬಿಬಿಎಂಪಿ ಎದುರಿಸಿತ್ತು.

ಈ ನಡುವೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಿರುವ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲೂ ಕಳಪೆ ಆರೋಪ ಕೇಳಿ ಬಂದಿದ್ದು, ಸಾಕ್ಷಿ ಅನ್ನುವಂತೆ ಕಾಮಗಾರಿ ಮುಗಿದ ಕೆಲವೇ ದಿನಗಳಲ್ಲಿ ಫುಟ್ ಪಾತ್ ಸ್ಲಾಬ್ ಗಳು ಕಿತ್ತು ಬರಲಾರಂಭಿಸಿದ್ದಾರೆ. ಮುಖ್ಯವಾಗಿ ನೃಪತುಂಗ ರಸ್ತೆಯಲ್ಲಿರುವ ಫುಟ್ ಪಾತ್ ಸ್ಥಿತಿ ಇಡೀ ನಗರದ ಕಾಮಗಾರಿಗೆ ಹಿಡಿದ ಕೈಗನ್ನಡಿಯಂತಿದೆ.

ಬಿಬಿಎಂಪಿ ಚೀಫ್ ಇಂಜಿನಿಯರ್ ಲೋಕೇಶ್ ಅವರೇ ಫುಟ್ ಪಾತ್ ಹಾಳಾಗಲು ಹೆಗ್ಗಣ ಕಾರಣ ಎಂದು ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada