Idgah Maidan Row: ಚಾಮರಾಜಪೇಟೆ ಈದ್ಗಾ ಮೈದಾನ ಮರುನಾಮಕರಣ ಮಾಡುವಂತೆ ಬಿಜೆಪಿ ಸಂಸದರಿಂದ ಮನವಿ
ಚಾಮರಾಜಪೇಟೆ ಈದ್ಗಾ ಮೈದಾನವನ್ನು ಮರುನಾಮಕರಣ ಮಾಡುವಂತೆ ಚಾಮರಾಜಪೇಟೆ ನಾಗರಿಕ ಒಕ್ಕೂಟವು ಮನವಿ ಪತ್ರ ಸಲ್ಲಿಸಿದೆ. ಈದ್ಗಾ ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಡರಿಡುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ಗೆ ಮನವಿ ಸಲ್ಲಿಸಲಾಗಿದೆ.
ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನವನ್ನು ಮರುನಾಮಕರಣ ಮಾಡುವಂತೆ ಚಾಮರಾಜಪೇಟೆ ನಾಗರಿಕ ಒಕ್ಕೂಟವು ಮನವಿ ಪತ್ರ ಸಲ್ಲಿಸಿದೆ. ಈದ್ಗಾ ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಡರಿಡುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ಗೆ ಮನವಿ ಸಲ್ಲಿಸಲಾಗಿದೆ.
ಬಿಬಿಎಂಪಿ ವತಿಯಿಂದ ಮೈದಾನಕ್ಕೆ ಒಂದು ಅಧಿಕೃತ ಹೆಸರಿಡಬೇಕು, ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲು ಅವಕಾಶ ಮಾಡಿಕೊಡಬೇಕು, ಗಣೇಶ, ಶಿವರಾತ್ರಿ, ದಸರಾ ಹಬ್ಬ ಆಚರಣೆಗೆ ಅವಕಾಶ ನೀಡಬೇಕು, ಸಂಸದ ಪಿ.ಸಿ.ಮೋಹನ್ ಹಾಗೂ ನಾಗರಿಕ ಒಕ್ಕೂಟದಿಂದ ಮನವಿ ಸಲ್ಲಿಕೆಯಾಗಿದೆ.
ಚಾಮರಾಜಪೇಟೆ ಮೈದಾನಕ್ಕೆ ಕುರಿ ಮೈದಾನ, ಎಮ್ಮೆ ಮೈದಾನ ,ಈದ್ಗಾ ಮೈದಾನ ಅಂತ್ತೆಲ್ಲ ಹೆಸರಿದೆ, ಆದರೆ ಬಿಬಿಎಂಪಿ ವತಿಯಿಂದ ಒಂದು ಅಧಿಕೃತ ಹೆಸರಿಡಬೇಕು ಎಂದು ಕೇಳಿಕೊಳ್ಳಲಾಗಿದೆ.
ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಮಾಡಲು ಅವಕಾಶ ಮಾಡಿಕೊಡಬೇಕು, ಗಣೇಶ ಹಬ್ಬ , ಶಿವರಾತ್ರಿ ಹಬ್ಬ , ದಸರಾ ಆಚರಣೆ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಚಾಮರಾಜಪೇಟೆ ಮೈದಾನ ಬಿಬಿಎಂಪಿಗೆ ಸೇರಿದ ಆಸ್ತಿಯಾಗಿದೆ ಎಂದು ಹೇಳಿದ್ದ ಬಿಬಿಎಂಪಿ, ಆಟದ ಮೈದಾನ, ಪಿಐಡಿ ನಂ. 46-8-2 ಬಿಬಿಎಂಪಿ ಸ್ವತ್ತುಗಳಾಗಿವೆ, ಇದರ ಜೊತೆಗೆ ಈದ್ಗಾ ಗೋಡೆ ಬಿಬಿಎಂಪಿ ಸ್ವತ್ತು ಎಂದು ದಾಖಲೆಯಲ್ಲಿದೆ.
2 ಎಕರೆಯಲ್ಲಿ ಈ ಮೈದಾನದವಿದ್ದು, 941 ಚದರ ಅಡಿ ಈದ್ಗಾ ಗೋಡೆ ಇದೆ, 941 ಅಡಿ ಈದ್ಗಾ ಗೋಡೆ ಬಿಟ್ಟು, ಉಳಿದದ್ದು ಬಿಬಿಎಂಪಿ ಸ್ವತ್ತಾಗಿದೆ ಎಂದು ಆರಂಭದಲ್ಲಿ ಹೇಳಿತ್ತು. ನಂತರದಲ್ಲಿ ವಕ್ಫ್ ಬೋರ್ಡ್ ಆಸ್ತಿ ಹಕ್ಕು ಮತ್ತು 1965 ರ ಗೆಜೆಟ್ ಅಧಿಸೂಚನೆ ಸೇರಿದಂತೆ ದಾಖಲೆಗಳನ್ನು ಸಲ್ಲಿಸಿದೆ ಎಂದು ಬಿಬಿಎಂಪಿ ಹೇಳಿತ್ತು.
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಮುಗಿಯುವಂತೆ ಕಾಣಿಸುತ್ತಿಲ್ಲ. ಬಂದ್ ಬಳಿಕ ನಾಗರಿಕರ ಒಕ್ಕೂಟ ಹೋರಾಟವನ್ನು ತೀವ್ರಗೊಳಿಸಲು ಸಿದ್ಧತೆ ನಡೆಸುತ್ತಿದ್ದು, ಬೃಹತ್ ಬೈಕ್ ರ್ಯಾಲಿ ನಡೆಸಲು ನಿರ್ಧಾರ ಮಾಡಿದೆ. ಮೈದಾನ ಆಟದ ಮೈದಾನವಾಗಿ ಉಳಿಯಬೇಕೆಂದು ನಾಗರಿಕರ ಒಕ್ಕೂಟ ನಾಳೆ (ಜುಲೈ 15) ಚಾಮರಾಜಪೇಟೆಯ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಲು ಮುಂದಾಗಿದೆ.
Published On - 2:28 pm, Thu, 14 July 22