ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ; ನಾಗರಿಕರ ಒಕ್ಕೂಟದಿಂದ ಬೃಹತ್ ಬೈಕ್ ರ್ಯಾಲಿಗೆ ನಿರ್ಧಾರ
ಇಂದು ನಾಗರಿಕರ ಒಕ್ಕೂಟ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ರನ್ನ ಭೇಟಿ ಮಾಡಲಿದೆ. ಚಾಮರಾಜಪೇಟೆಯಲ್ಲಿರುವ ಮೈದಾನ ಬಿಬಿಎಂಪಿಯ ಸ್ವತ್ತು.
ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ (Idgah Maidan) ವಿವಾದ ಮುಗಿಯುವಂತೆ ಕಾಣಿಸುತ್ತಿಲ್ಲ. ಬಂದ್ ಬಳಿಕ ನಾಗರಿಕರ ಒಕ್ಕೂಟ ಹೋರಾಟವನ್ನು ತೀವ್ರಗೊಳಿಸಲು ಸಿದ್ಧತೆ ನಡೆಸುತ್ತಿದ್ದು, ಬೃಹತ್ ಬೈಕ್ ರ್ಯಾಲಿ (Bike Rally) ನಡೆಸಲು ನಿರ್ಧಾರ ಮಾಡಿದೆ. ಮೈದಾನ ಆಟದ ಮೈದಾನವಾಗಿ ಉಳಿಯಬೇಕೆಂದು ನಾಗರಿಕರ ಒಕ್ಕೂಟ ನಾಳೆ (ಜುಲೈ 15) ಚಾಮರಾಜಪೇಟೆಯ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಲು ಮುಂದಾಗಿದೆ. ರ್ಯಾಲಿಯಲ್ಲಿ ಹಿಂದೂಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಭಾಗಿಯಾಗಲಿವೆ. ರ್ಯಾಲಿ ಬಳಿಕ ಬಿಬಿಎಂಪಿ ಆಯುಕ್ತರಿಗೆ ಘೇರಾವ್ ಹಾಕಲು ಚಿಂತನೆಯನ್ನೂ ನಡೆಸಿದ್ದಾರೆ.
ಇಂದು ನಾಗರಿಕರ ಒಕ್ಕೂಟ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ರನ್ನ ಭೇಟಿ ಮಾಡಲಿದೆ. ಚಾಮರಾಜಪೇಟೆಯಲ್ಲಿರುವ ಮೈದಾನ ಬಿಬಿಎಂಪಿಯ ಸ್ವತ್ತು. ಹೀಗಾಗಿ ಆಟದ ಮೈದಾನವೆಂದು ಪಾಲಿಕೆ ಘೋಷಿಸಬೇಕೆಂದು ಆಗ್ರಹಿಸಲಿದ್ದಾರೆ.
ಚಾಮರಾಜಪೇಟೆ ಮೈದಾನ ವಿವಾದದ ಹಿನ್ನೆಲೆ ಏನು?: ಆಟದ ಮೈದಾನವನ್ನು ಈದ್ಗಾ ಮೈದಾನ ಎಂದು ಕರೆಯಲಾಗುತ್ತದೆ. 1952ರಿಂದಲೇ ಈ ಮೈದಾನದ ಬಗ್ಗೆ ವಿವಾದ ಪ್ರಾರಂಭವಾಗಿತ್ತು. ಈ ಮೈದಾನದಲ್ಲಿ ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಅವಕಾಶ ಕೊಡದಿದ್ದರೆ ಈದ್ಗಾ ಮೈದಾನವನ್ನು ನೆಲಸಮ ಮಾಡುತ್ತೇವೆ ಎಂದು ವಿಶ್ವ ಸನಾತನ ಪರಿಷತ್ ಸಂಘಟನೆಯ ಅಧ್ಯಕ್ಷ ಎಸ್. ಭಾಸ್ಕರನ್ ಹೇಳಿದ್ದರು. ಕೋರ್ಟ್ ಆದೇಶವಿದ್ದರೂ ಧಾರ್ಮಿಕ ಆಚರಣೆಗೆ ಪೊಲೀಸರು ಅವಕಾಶ ಕೊಡುತ್ತಿಲ್ಲ, ಮುಸ್ಲಿಂ ಸಮುದಾಯದವರು ಹಿಂದೂಗಳ ಧಾರ್ಮಿಕ ಆಚರಣೆಗೆ ವಿರೋಧಿಸುತ್ತಿಲ್ಲ. ಆದರೆ ಶಾಸಕ ಜಮೀರ್ ಅಹಮದ್ ಖಾನ್ ಪೊಲೀಸರ ಮೂಲಕ ಅಡ್ಡಿ ಪಡಿಸುತ್ತಿದ್ದಾರೆಂದು ಹಿಂದೂಪರ ಸಂಘಟನೆಗಳ ಆರೋಪವಾಗಿದೆ.
ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆ; ಹವಾಮಾನ ಇಲಾಖೆ
ಚಾಮರಾಜಪೇಟೆ ಮೈದಾನ ಬಿಬಿಎಂಪಿಗೆ ಸೇರಿದ ಆಸ್ತಿಯಾಗಿದೆ ಎಂದು ಹೇಳಿದ್ದ ಬಿಬಿಎಂಪಿ, ಆಟದ ಮೈದಾನ, ಪಿಐಡಿ ನಂ. 46-8-2 ಬಿಬಿಎಂಪಿ ಸ್ವತ್ತುಗಳಾಗಿವೆ, ಇದರ ಜೊತೆಗೆ ಈದ್ಗಾ ಗೋಡೆ ಬಿಬಿಎಂಪಿ ಸ್ವತ್ತು ಎಂದು ದಾಖಲೆಯಲ್ಲಿದೆ. 2 ಎಕರೆಯಲ್ಲಿ ಈ ಮೈದಾನದವಿದ್ದು, 941 ಚದರ ಅಡಿ ಈದ್ಗಾ ಗೋಡೆ ಇದೆ, 941 ಅಡಿ ಈದ್ಗಾ ಗೋಡೆ ಬಿಟ್ಟು, ಉಳಿದದ್ದು ಬಿಬಿಎಂಪಿ ಸ್ವತ್ತಾಗಿದೆ ಎಂದು ಆರಂಭದಲ್ಲಿ ಹೇಳಿತ್ತು. ನಂತರದಲ್ಲಿ ವಕ್ಫ್ ಬೋರ್ಡ್ ಆಸ್ತಿ ಹಕ್ಕು ಮತ್ತು 1965 ರ ಗೆಜೆಟ್ ಅಧಿಸೂಚನೆ ಸೇರಿದಂತೆ ದಾಖಲೆಗಳನ್ನು ಸಲ್ಲಿಸಿದೆ ಎಂದು ಬಿಬಿಎಂಪಿ ಹೇಳಿತ್ತು.
ಇದನ್ನೂ ಓದಿ: ಜು.16ರಂದು 296 ಕಿಮೀ ಉದ್ದದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ
Published On - 8:42 am, Thu, 14 July 22