AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಬೆಂಗಳೂರಿನ ಈ ಪಾರ್ಕ್​ನಲ್ಲಿ ಜಾಗಿಂಗ್, ವಾಕಿಂಗ್ ಮಾಡುವಂತಿಲ್ಲ; ನಾಗಿಣಿ ಡ್ಯಾನ್ಸ್​ ಮಾಡಬಹುದಾ ಎಂದ ನೆಟ್ಟಿಗರು!

ಬೆಂಗಳೂರಿನ ಈ ಪಾರ್ಕ್​ನಲ್ಲಿ ಯಾರೂ ಜಾಗಿಂಗ್, ವಾಕಿಂಗ್ ಮಾಡುವಂತಿಲ್ಲ, ಬಲದಿಂದ ಎಡಕ್ಕೆ ಯಾರೂ ನಡೆಯುವಂತಿಲ್ಲ ಎಂದು ಬಿಬಿಎಂಪಿ ದೊಡ್ಡ ಬೋರ್ಡ್​ ಹಾಕಿದೆ. ಇದರ ಫೋಟೋ ಈಗ ವೈರಲ್ ಆಗಿದೆ.

Bengaluru: ಬೆಂಗಳೂರಿನ ಈ ಪಾರ್ಕ್​ನಲ್ಲಿ ಜಾಗಿಂಗ್, ವಾಕಿಂಗ್ ಮಾಡುವಂತಿಲ್ಲ; ನಾಗಿಣಿ ಡ್ಯಾನ್ಸ್​ ಮಾಡಬಹುದಾ ಎಂದ ನೆಟ್ಟಿಗರು!
ಬೆಂಗಳೂರಿನ ಪಾರ್ಕ್​ನಲ್ಲಿರುವ ಬೋರ್ಡ್Image Credit source: Hindustan Times
TV9 Web
| Updated By: ಸುಷ್ಮಾ ಚಕ್ರೆ|

Updated on:Jul 14, 2022 | 1:22 PM

Share

ಬೆಂಗಳೂರು: ಬೆಂಗಳೂರು ಉದ್ಯಾನನಗರಿ ಎಂಬ ಹೆಗ್ಗಳಿಕೆ ಪಡೆದಿರುವ ನಗರ. ಇಲ್ಲಿ ಪ್ರತಿ ಏರಿಯಾಗೂ ನಾಲ್ಕೈದು ಪಾರ್ಕ್​ಗಳಿರುತ್ತವೆ. ಸಾಮಾನ್ಯವಾಗಿ ಭಾರತದ ಸಾರ್ವಜನಿಕ ಪಾರ್ಕ್​ಗಳಲ್ಲಿ ಜನರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಅವರಿಗಾಗಿ ಸಮಯವನ್ನೂ ನಿಗದಿ ಮಾಡಲಾಗುತ್ತದೆ. ಬೆಳಗಿನ ವೇಳೆ ಜಾಗಿಂಗ್, ವಾಕಿಂಗ್ ಮಾಡುವವರಿಗೆ ಮತ್ತು ಸಂಜೆಯ ವೇಳೆ ವಾಕಿಂಗ್ ಮಾಡುವವರಿಗೆ ಪಾರ್ಕ್​ಗಳ ಗೇಟ್ ಓಪನ್ ಮಾಡಲಾಗುತ್ತದೆ. ಆದರೆ, ಬೆಂಗಳೂರಿನ ಈ ಪಾರ್ಕ್​ನಲ್ಲಿ ಯಾರೂ ಜಾಗಿಂಗ್, ವಾಕಿಂಗ್ ಮಾಡುವಂತಿಲ್ಲ, ಬಲದಿಂದ ಎಡಕ್ಕೆ ಯಾರೂ ನಡೆಯುವಂತಿಲ್ಲ ಎಂದು ಬಿಬಿಎಂಪಿ ದೊಡ್ಡ ಬೋರ್ಡ್​ ಹಾಕಿದೆ. ಇದರ ಫೋಟೋ ಈಗ ವೈರಲ್ ಆಗಿದ್ದು, ಪಾರ್ಕ್​ನಲ್ಲಿ ವಾಕಿಂಗ್ ಮಾಡಬಾರದು ಎಂದಾದರೆ ನಾಗಿಣಿ ಡ್ಯಾನ್ಸ್​ ಮಾಡಬಹುದಾ? ಎಂದು ಲೇವಡಿ ಮಾಡಿದ್ದಾರೆ.

ಬೆಂಗಳೂರಿನ ಪಾರ್ಕ್​ನ ಗೇಟ್​​ನಲ್ಲಿ ಹಾಕಿರುವ ಒಂದು ಫಲಕದ ಫೋಟೋ ಈಗ ವೈರಲ್ ಆಗಿದೆ. ಇಲ್ಲಿ ಜನರು ಆ್ಯಂಟಿ ಕ್ಲಾಕ್​ವೈಸ್​ (ಬಲದಿಂದ ಎಡಕ್ಕೆ) ನಡೆಯುವಂತಿಲ್ಲ, ವಾಕಿಂಗ್ ಮಾಡುವಂತಿಲ್ಲ, ಜಾಗಿಂಗ್ ಮಾಡುವಂತಿಲ್ಲ ಎಂದು ಬೋರ್ಡ್​ ಹಾಕಲಾಗಿದೆ. ಹಾಗಿದ್ದರೆ ಈ ಪಾರ್ಕ್​ನಲ್ಲಿ ಏನು ಮಾಡಬೇಕು? ಎಂಬುದು ಸದ್ಯಕ್ಕೆ ನೆಟ್ಟಿಗರ ಪ್ರಶ್ನೆಯಾಗಿದೆ. ಈ ಬೋರ್ಡ್​ ಹಾಕುವ ಮೂಲಕ ಬಿಬಿಎಂಪಿ ಸಾಮಾಜಿಕ ಜಾಲತಾಣ ಬಳಕೆದಾರರ ಲೇವಡಿಗೆ ಗುರಿಯಾಗಿದೆ.

ಇದನ್ನೂ ಓದಿ
Image
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡದಂತೆ ಶಿಕ್ಷಣ ಇಲಾಖೆಗೆ ಶಿಫಾರಸ್ಸು! ಎನ್ಇಪಿ ಸಮಿತಿ ವಿರುದ್ಧ ತೀವ್ರ ಆಕ್ರೋಶ
Image
ಆಹಾರದ ಮೇಲೆ ಜಿಎಸ್​ಟಿ ಹೇರಿಕೆ; ನಾಳೆ ಯಶವಂತಪುರ ಎಪಿಎಂಸಿ ಬಂದ್, ಅಕ್ಕಿಗಿರಣಿ ಮಾಲೀಕರ ಸಂಘದಿಂದ ಪ್ರತಿಭಟನೆ
Image
ಬಿಬಿಎಂಪಿಯ ಮತ್ತೊಂದು ಕಳಪೆ ಕಾಮಗಾರಿ ಬಟಾಬಯಲು! ವೈಟ್ ಟಾಪಿಂಗ್ ಮಾಡಿದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣ

ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಹೆಂಡತಿಯನ್ನು ಇರಿದು ಕೊಂದು ಪೊಲೀಸರಿಗೆ ಫೋನ್ ಮಾಡಿದ ಟೈಲರ್!

ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಕಿರುವ ಬೋರ್ಡ್ ಈಗ ಚರ್ಚೆಗೆ ಕಾರಣವಾಗಿದೆ. ಹಾಗಿದ್ದರೆ ಪಾರ್ಕ್​ನಲ್ಲಿ ನಾಗಿನ್ (ಹಾವಿನ) ನೃತ್ಯವನ್ನು ಮಾಡಬಹುದಾ? ಎಂದು ಒಬ್ಬರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಅದಕ್ಕೆ ಮರುಟ್ವೀಟ್ ಮಾಡಿರುವ ಇನ್ನೊಬ್ಬರು, ನೀವು ನಾಗಿಣಿ ಡ್ಯಾನ್ಸನ್ನು ಕೂಡ ಎಡದಿಂದ ಬಲಕ್ಕೇ ಮಾಡಬೇಕು, ಇಲ್ಲವಾದರೆ ನಿಮಗೆ ಅನುಮತಿಯಿಲ್ಲ ಎಂದು ತಮಾಷೆ ಮಾಡಿದ್ದಾರೆ.

ಇನ್ನು ಕೆಲವರು ಹಾಗಾದರೆ ಈ ಪಾರ್ಕ್​ನಲ್ಲಿ ಮೂನ್ ವಾಕ್ ಮಾಡಬಹುದಾ? ಎಂದು ಬಿಬಿಎಂಪಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ. ಸರಿಯಾಗಿ ರಸ್ತೆ ರಿಪೇರಿ, ಚರಂಡಿ ರಿಪೇರಿ ಮಾಡೋದನ್ನು ಬಿಟ್ಟು ಬಿಬಿಎಂಪಿ ಬೇರೆಲ್ಲ ನಿಯಮಗಳನ್ನೂ ಮಾಡುತ್ತಿದೆ ಎಂದು ಹಲವರು ಟೀಕಿಸಿದ್ದಾರೆ.

Published On - 1:20 pm, Thu, 14 July 22

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!