ಬೆಂಗಳೂರು: ಚಿತ್ರದುರ್ಗದ ಮುರುಘಾಮಠಕ್ಕೆ (Murugha Math) ಆಡಳಿತಾಧಿಕಾರಿಯಾಗಿ ನಿವೃತ್ತ IAS ಅಧಿಕಾರಿ ಪಿ.ಎಸ್.ವಸ್ತ್ರದ್ ಅವರನ್ನು ನೇಮಿಸಿದನ್ನು ಪ್ರಶ್ನಿಸಿ ಡಿ.ಎಸ್.ಮಲ್ಲಿಕಾರ್ಜುನ ಮತ್ತಿತರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇಂದು (ಡಿ.16) ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತೀರ್ಪನ್ನು ಕಾಯ್ದಿರಿಸಿದೆ.
ರಿಟ್ ಅರ್ಜಿ ವಿಚಾರಣೆ
ಹೈಕೋರ್ಟ್: ಆಡಳಿತಾಧಿಕಾರಿ ನೇಮಕದಿಂದ ಶ್ರೀಗಳ ಜಿಪಿಎ ಮೇಲೆ ಪರಿಣಾಮವಿದೆಯೇ ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಪ್ರಶ್ನಿಸಿದರು.
ಸರ್ಕಾರದ ಪರ ಎಜಿ ಪ್ರಭುಲಿಂಗ್ ಕೆ.ನಾವದಗಿ: ಇದಕ್ಕೆ ಬಂಧನದಲ್ಲಿರುವುದರಿಂದ ಶ್ರೀಗಳು ಜಿಪಿಎ ನೀಡುವಂತಿಲ್ಲ. ಮೇಲುಸ್ತುವಾರಿ ನಡೆಸಲು ಮಾತ್ರ ಆಡಳಿತಾಧಿಕಾರಿ ನೇಮಿಸಲಾಗಿದೆ. ಮಠದ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಇಲ್ಲ ದಾಸೋಹ, ಸಂಬಳ, ಧಾರ್ಮಿಕ ಕೈಂಕರ್ಯಗಳಿಗೆ ಅಡ್ಡಿಯಿಲ್ಲ ಎಂದು ಹೈಕೋರ್ಟ್ಗೆ ಎಜಿ ಪ್ರಭುಲಿಂಗ್ ಕೆ.ನಾವದಗಿ ಹೇಳಿದರು.
ಹೈಕೋರ್ಟ್: ಮುರುಘಾಶ್ರೀಗೆ ಜಾಮೀನು ಸಿಕ್ಕರೆ ಮಠದ ಆಡಳಿತ ನೀಡುತ್ತೀರಾ?
ಎಜಿ ಪ್ರಭುಲಿಂಗ್ ನಾವದಗಿ: ಆ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರೆ ಆಗ ಪರಿಗಣಿಸಲಾಗುವುದು. ಈಗ ಶ್ರೀಗಳು ಜೈಲಲ್ಲಿರುವುದರಿಂದ ಆಡಳಿತಾಧಿಕಾರಿ ನೇಮಿಸಲಾಗಿದೆ ಎಂದು ಎಜಿ ಪ್ರಭುಲಿಂಗ್ ನಾವದಗಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮುರುಘಾಶ್ರೀ ವಿರುದ್ಧ ಪಿತೂರಿ ಪ್ರಕರಣ: ಸೌಭಾಗ್ಯ ಬಸವರಾಜನ್ ಅರೆಸ್ಟ್
ಹೈಕೋರ್ಟ್: ಮಠದ ಒಟ್ಟು ಆಸ್ತಿ ಮೌಲ್ಯ ಎಷ್ಟು?
ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್ ಪಾಟೀಲ್ : 1600 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಅಂದಾಜಿಸಲಾಗಿದೆ. ಮುರುಘಾ ಮಠದ ಆಡಳಿತದಲ್ಲಿ 106 ಶಿಕ್ಷಣ ಸಂಸ್ಥೆಗಳಿವೆ. ಪ್ರತಿ ವರ್ಷ ಮಠದ ವ್ಯವಹಾರಗಳ ಆಡಿಟ್ ಮಾಡಲಾಗಿದೆ. ಮಠಗಳನ್ನು ಉದ್ದೇಶಪೂರ್ವಕವಾಗಿ ಶಾಸನಗಳಿಂದ ಹೊರಗಿಡಲಾಗಿದೆ. ಹೀಗಾಗಿ ಸಂವಿಧಾನದ ಆರ್ಟಿಕಲ್ 162 ಬಳಸಬಾರದಿತ್ತು. ಆಡಳಿತಾಧಿಕಾರಿ ನೇಮಕ ಕಾನೂನು ಬಾಹಿರವೆಂದು ವಾದ ಮಂಡಿಸಿದರು.
ಹೈಕೋರ್ಟ್: ವಿರಕ್ತ ಮಠದ ಸ್ವಾಮೀಜಿ ಅವಿರಕ್ತ ಚಟುವಟಿಕೆ ನಡೆಸಬಹುದೇ? ವಿರಕ್ತ ಪದದ ಬಗ್ಗೆ ಮಾಹಿತಿ ಹೇಳಿ
ವಕೀಲ ಜಯಕುಮಾರ್ ಎಸ್ ಪಾಟೀಲ್: ಅರಿಷಡ್ವರ್ಗಗಳನ್ನು ಬಿಟ್ಟವನೇ ವಿರಕ್ತ. ವೈಯಕ್ತಿಕ ಬಿಟ್ಟು ಸಮಾಜದ ಕಲ್ಯಾಣದಲ್ಲಿ ಆಸಕ್ತಿ ಹೊಂದಿದವರು. ಅನ್ನ ದಾಸೋಹದ ಜೊತೆ ಜ್ಞಾನ ದಾಸೋಹ ನಡೆಸಲಾಗುತ್ತಿದೆ. ಮಠ ಬಹಳ ಐತಿಹಾಸಿಕ ಪರಂಪರೆ ಹೊಂದಿದೆ. ಮಠಾಧೀಶರು ಅದ್ಭುತ ಚಾರಿತ್ರ್ಯ ಹೊಂದಿರುತ್ತಾರೆಂದು ಹಿರಿಯರು ನಂಬಿದ್ದರು. ಮಠಾಧೀಶರ ವಿರುದ್ಧ ಇರುವುದು ಆರೋಪ ಮಾತ್ರ ಎಂದರು.
ಇದನ್ನೂ ಓದಿ: ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ರಿಟ್ ಅರ್ಜಿ: ಪಿ.ಎಸ್.ವಸ್ತ್ರದ್ ನೇಮಕ ರದ್ದತಿಗೆ ಮನವಿ
ಹೈಕೋರ್ಟ್: ಇಂತಹ ಘಟನೆ ನಡೆದಾಗ ಮಠದ ನಿರ್ವಹಣೆ ಹೇಗೆ?
ವಕೀಲ ಜಯಕುಮಾರ್ ಎಸ್ ಪಾಟೀಲ್: ಈಗಾಗಲೇ ಮಠ, ಶಿಕ್ಷಣ ಸಂಸ್ಥೆಯ ಆಡಳಿತಕ್ಕೆ ಜಿಪಿಎ ನೀಡಲಾಗಿದೆ. ಹೀಗಾಗಿ ರಾಜ್ಯ ಸರ್ಕಾರದ ಕ್ರಮ ರದ್ದುಪಡಿಸುವಂತೆ ಮನವಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:04 pm, Fri, 16 December 22