ಕ್ರಮ ಜರುಗಿಸಿದ್ದ ಪೊಲೀಸರ ಮೇಲೆಯೇ ಕಣ್ಣಿಟ್ಟ PFI, ಎಚ್ಚರಿಕೆಯಿಂದ ಇರುವಂತೆ ರಾಜ್ಯ ಪೊಲೀಸರಿಗೆ ಐಬಿ ಸೂಚನೆ

| Updated By: ಸಾಧು ಶ್ರೀನಾಥ್​

Updated on: Nov 01, 2022 | 12:20 PM

NIA: ಎನ್​ಐಎ ತನಿಖೆ ವೇಳೆ ಸಿಕ್ಕ ಮಾಹಿತಿಯ ಅನ್ವಯ ಐಬಿ ಇಲಾಖೆಯಿಂದ ಈ ಸೂಚನೆ ಬಂದಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಪೊಲೀಸರಿಗೆ ಕೇಂದ್ರ ಗುಪ್ತಚರ ಇಲಾಖೆ ಈ ಸೂಚನೆ ರವಾನಿಸಿದೆ.

ಕ್ರಮ ಜರುಗಿಸಿದ್ದ ಪೊಲೀಸರ ಮೇಲೆಯೇ ಕಣ್ಣಿಟ್ಟ PFI, ಎಚ್ಚರಿಕೆಯಿಂದ ಇರುವಂತೆ ರಾಜ್ಯ ಪೊಲೀಸರಿಗೆ ಐಬಿ ಸೂಚನೆ
ಎಚ್ಚರಿಕೆಯಿಂದ ಇರುವಂತೆ ರಾಜ್ಯ ಪೊಲೀಸರಿಗೆ ಐಬಿ ಸೂಚನೆ
Follow us on

ಬೆಂಗಳೂರು: ದೇಶಾದ್ಯಂತ ಪಿಎಫ್​ಐ ಕಾರ್ಯಕರ್ತರ ಬಂಧನ ಪ್ರಕರಣ ದೊಡ್ಡ ಮಟ್ಟದ ಸಂಚಲನವನ್ನೇ ಉಂಟುಮಾಡಿದೆ. ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ PFI ಕಾರ್ಯಕರ್ತರಿಗೆ ಸರ್ಕಾರ ಅದರಲ್ಲೂ ಪೊಲೀಸರು ಬಿಸಿಮುಟ್ಟಿಸಿದ್ದರು. ಆದರೆ ಇದೀಗ PFI ಮೇಲೆ ಕ್ರಮಕೈಗೊಂಡಿದ್ದ ಪೊಲೀಸ್​ ಅಧಿಕಾರಿಗಳನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಪೊಲೀಸರನ್ನೇ ಟಾರ್ಗೆಟ್​ ಮಾಡಿದ್ದ ಪಿಎಫ್​ಐ ಸಂಘಟನೆ ಇದೀಗ ರಾಜ್ಯದಲ್ಲೂ ಪೊಲೀಸ್ ಅಧಿಕಾರಿಗಳ ಮೇಲೆ (Karnataka police) ಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ, ಎಚ್ಚರಿಕೆಯಿಂದ ಇರುವಂತೆ ರಾಜ್ಯ ಪೊಲೀಸರಿಗೆ ಕೇಂದ್ರ ಗುಪ್ತಚರ ಇಲಾಖೆಯಿಂದ (Intelligence Bureau -ಐಬಿ) ಸೂಚನೆ ಬಂದಿದೆ.

ಎನ್​ಐಎ (NIA) ತನಿಖೆ ವೇಳೆ ಸಿಕ್ಕ ಮಾಹಿತಿಯ ಅನ್ವಯ ಐಬಿ ಇಲಾಖೆಯಿಂದ ಈ ಸೂಚನೆ ಬಂದಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಪೊಲೀಸರಿಗೆ ಕೇಂದ್ರ ಗುಪ್ತಚರ ಇಲಾಖೆ ಈ ಸೂಚನೆ ರವಾನಿಸಿದೆ. PFI ನಿಷೇಧದ ಬಳಿಕವೂ ತನಿಖೆ ನಡೆಸಿರುವ ರಾಜ್ಯ ಪೊಲೀಸರು ಕೆ.ಜಿ. ಹಳ್ಳಿ ಪ್ರಕರಣದಲ್ಲಿ PFI ಸದಸ್ಯರನ್ನು ಬಂಧಿಸಿದ್ದರು.

ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿರುವ ಪೊಲೀಸರು ತನಿಖೆಯಲ್ಲಿ ಪಾಲ್ಗೊಂಡ ಅಧಿಕಾರಿಗಳ ಮೇಲೆ ಪಿಎಫ್​ಐ ಕಣ್ಣಿಟ್ಟಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳ ಚಲನವಲನಗಳ ಮೇಲೆ ಪಿಎಫ್ಐ ಕಣ್ಣಿಟ್ಟು ವಾಚ್ ಮಾಡ್ತಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮ ವಹಿಸುವಂತೆ ಐಬಿಯಿಂದ ಸಂದೇಶ ಬಂದಿದೆ ಎಂದು ಟಿವಿ 9 ಗೆ ರಾಜ್ಯ ಗೃಹ ಇಲಾಖೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.