ಬೆಂಗಳೂರು, ಜುಲೈ.24: ರಾಜಧಾನಿ ಬೆಂಗಳೂರಿನಲ್ಲಿ ಬದಲಾಗುತ್ತಿರುವ ಹವಾಮಾನದ ಪರಿಣಾಮ ಸಾಕಷ್ಟು ಜನರ ಆರೋಗ್ಯದಲ್ಲಿ ವ್ಯತ್ಯಯ ಆಗುತ್ತಿದೆ. ಒಂದು ಕಡೆ ಸೊಳ್ಳೆ ಕಾಟದಿಂದ ಸಿಟಿಯಲ್ಲಿ ಡೆಂಗ್ಯೂ (Dengue) ಉಲ್ಬಣ ಆಗುತ್ತಾ ಇದ್ದರೆ, ಇನ್ನೊಂದು ಕಡೆ ಮಳೆ, ಚಳಿ, ಬಿಸಿಲು ಅಂತ ದಿನೇ ದಿನೇ ಬದಲಾಗುತ್ತಾ ಇರುವ ಕಾರಣ ಮಕ್ಕಳಲ್ಲಿ ಗುಲಾಬಿ ಕಣ್ಣಿನ ಸೋಂಕು (Pink Eye) ಕಾಣಿಸಿಕೊಳ್ಳುತ್ತಿದೆ.
ಮಾನ್ಸೂನ್ನಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಕಂಜಂಕ್ಟಿವಿಟಿಸ್ ಅಥವ ಪಿಂಕ್ ಐ ಕಣ್ಣಿನ ಪ್ರಕರಣಗಳು ಹೆಚ್ಚಾಗಿವೆ. ಈ ಸೋಂಕು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಬ್ಯಾಕ್ಟೀರಿಯಾಗಳಿಂದ ಬರಲಿದೆ. ಇದು ಬಂದಾಗ ಒಂದರಿಂದ ಎರಡು ವಾರಗಳ ಕಾಲ ರೋಗಿಯನ್ನ ಬಾಧಿಸಲಿದ್ದು, ಕಣ್ಣಿನ ಕಾರ್ನಿಯಲ್ ಅಲ್ಸರ್, ಶಿಲೀಂಧ್ರಗಳು ಹಾಗೂ ಕಣ್ಣಿನ ಕಾರ್ನಿಯಾದ ಮೇಲೆ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಇದರಿಂದಾಗಿ ಕಣ್ಣಿನ ಒಳಗೆ ಹುಣ್ಣುಗಳಾಗಲಿದ್ದು, ತೀವ್ರ ನೋವುಂಟು ಮಾಡುತ್ತದೆ. ಇದರಿಂದ ಕಣ್ಣುಗಳಲ್ಲಿ ನೀರು ಸೋರುವಿಕೆ ಹೆಚ್ಚಾಗಿ ಇರಲಿದೆ. ಇದರಿಂದಾಗಿ ಕಣ್ಣುಗಳು ಕೆಂಪು ಬಣ್ಣಕ್ಕೆ ಬರಲಿವೆ. ಈ ವೇಳೆ ಬೆಳಕಿನ ಸೂಕ್ಷ್ಮತೆ, ಮಸುಕಾದ ದೃಷ್ಟಿ ರೋಗಲಕ್ಷಣಗಳು ಕಂಡು ಬರಲಿದ್ದು, ತಕ್ಷಣಕ್ಕೆ ಚಿಕಿತ್ಸೆ ನೀಡದಿದ್ದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯಾತೆ ಇರಲಿದೆ. ಸಧ್ಯ ನಗರದ ಕಣ್ಣಿನ ಆಸ್ಪತ್ರೆಗಳಲ್ಲಿ ಇಂತಹ ಕೇಸ್ ಗಳು ಹೆಚ್ಚಾಗುತ್ತಿದ್ದು, ಮಕ್ಕಳ ಮೇಲೆ ನಿಗಾ ಇಡಿ ಅಂತ ವೈಧ್ಯರು ಸಲಹೆ ನೀಡ್ತಿದ್ದಾರೆ.
ಇದನ್ನೂ ಓದಿ: ಡೆಂಗ್ಯೂ ಏರಿಕೆಯ ಅಸಲಿ ಕಾರಣ ಪತ್ತೆ, ಖಾಸಗಿ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ಮಾಡಿಸಿದವರಿಗೆಲ್ಲ ಪಾಸಿಟಿವ್!
ಒಟ್ನಲ್ಲಿ, ನಗರದ ಆಸ್ಪತ್ರೆಯಲ್ಲಿ ಈ ಹಿಂದೆ ಒಂದು ವಾರಕ್ಕೆ ಎರಡರಿಂದ ಮೂರು ಕೇಸ್ ಗಳು ಬರುತ್ತಿದ್ದವು. ಆದ್ರೀಗ ಪ್ರತಿದಿನ 3 ರಿಂದ 4 ಕೇಸ್ ಬರುತ್ತಿದ್ದು, ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಜಾಸ್ತಿಯಾಗಿದೆ. ಮಳೆ ವೇಳೆ ಆರೋಗ್ಯದ ಮೇಲೆ ಹೆಚ್ಚು ನಿಗಾ ಇಡಬೇಕಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ