ಪ್ರಧಾನಿ ಮೋದಿ ಅಮೆರಿಕ ಭೇಟಿಯಿಂದ ಕರ್ನಾಟಕ ಸೇರಿ ಭಾರತಕ್ಕೆ ಐತಿಹಾಸಿಕ ಲಾಭ: ತೇಜಸ್ವಿ ಸೂರ್ಯ

|

Updated on: Jun 23, 2023 | 11:55 AM

ಪ್ರಧಾನಿ ಮೋದಿ ಅಮೆರಿಕ ಭೇಟಿ ದೇಶಕ್ಕೆ ಅನೇಕ ಐತಿಹಾಸಿಕ ಲಾಭಗಳನ್ನು ತಂದಿದೆ. ಕರ್ನಾಟಕ ಮತ್ತು ಬೆಂಗಳೂರಿಗೆ ಅತ್ಯಂತ ಪ್ರಯೋಜನವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಪ್ರಧಾನಿ ಮೋದಿ ಅಮೆರಿಕ ಭೇಟಿಯಿಂದ ಕರ್ನಾಟಕ ಸೇರಿ ಭಾರತಕ್ಕೆ ಐತಿಹಾಸಿಕ ಲಾಭ: ತೇಜಸ್ವಿ ಸೂರ್ಯ
ಪ್ರಧಾನಿ ಮೋದಿ ಅಮೆರಿಕ ಭೇಟಿಯಿಂದ ಕರ್ನಾಟಕ ಸೇರಿ ಭಾರತಕ್ಕೆ ಐತಿಹಾಸಿಕ ಲಾಭವಾಗಳಾಗಿವೆ ಎಂದ ಸಂಸದ ತೇಜಸ್ವಿ ಸೂರ್ಯ
Follow us on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅಮೆರಿಕ ಭೇಟಿಯಿಂದ ಐತಿಹಾಸಿಕ ಲಾಭಗಳಾಗಿವೆ. ಕರ್ನಾಟಕ ಮತ್ತು ಬೆಂಗಳೂರಿಗೆ (Bengaluru) ಅತ್ಯಂತ ಪ್ರಯೋಜನವಾಗಿದೆ ಎಂದು ಸಂಸದರೂ ಆಗಿರುವ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಯುಎಸ್ ರಾಯಭಾರಿ ಕಚೇರಿ ಬರಬೇಕು ಎಂಬ ಬೇಡಿಕೆ ಇತ್ತು. ನಮ್ಮ ಈ ಬೇಡಿಕೆ ಈಗ ಈಡೇರಿದೆ ಎಂದರು.

ಬೆಂಗಳೂರಿಗೆ ಯುಎಸ್ ರಾಯಭಾರಿ ಕಚೇರಿ ಬರಬೇಕು ಎಂಬ ಬೇಡಿಕೆ ಇದ್ದರೂ ಯುಪಿಎ ಸರ್ಕಾರ ಇದಕ್ಕೆ ಬೇಕಾದ ಕೆಲಸ ಮಾಡಿರಲಿಲ್ಲ. ಯುಪಿಎ ಅವಧಿಯಲ್ಲಿ ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ಆರಂಭವಾದರೂ ಬೆಂಗಳೂರಿನಲ್ಲಿ ಆರಂಭವಾಗಿರಲಿಲ್ಲ. ಆದರೆ ನಾವು ಮೂವರು ಸಂಸದರು ಬೆಂಗಳೂರಿಗೆ ರಾಯಭಾರಿ ಕಚೇರಿ ಬರಬೇಕು ಎಂದು ಮನವಿ ಮಾಡಿದ್ದೆವು ಎಂದರು.

ನನ್ನ ಮೊದಲ ಲೋಕಸಭಾ ಅಧಿವೇಶನದಲ್ಲಿ ಯುಎಸ್ ರಾಯಭಾರಿ ಕಚೇರಿ ಬರಬೇಕು ಎಂದು ಪ್ರಸ್ತಾಪ ಮಾಡಿದ್ದೆ. 2020 ರಲ್ಲಿ ಕೇಂದ್ರ ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಕಚೇರಿ ತೆಗೆಯಬೇಕು ಎಂದು ಮನವಿ ಮಾಡಿದ್ದೆವು. ಭಾರತ ಅಮೆರಿಕಾದ ಸಿಯಾಟಲ್‌‌ನಲ್ಲಿ ಕಚೇರಿ ತೆರೆಯುವ ಹಂತದಲ್ಲಿದೆ. ಆ ಪರಸ್ಪರ ಒಪ್ಪಂದದಡಿ ಬೆಂಗಳೂರಿನಲ್ಲಿ ಕಚೇರಿ ತೆರೆಯುವ ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದರು. ನಾವು ಅಮೆರಿಕಾದ ರಾಯಭಾರಿಯಾಗಿದ್ದ ಕೆನ್ನೆತ್ ಜಸ್ಟರ್‌ರವರಿಗೂ ಕೂಡ ಮನವರಿಕೆ ಮಾಡಿಕೊಟ್ಟಿದ್ದೆವು ಎಂದರು.

ಇದನ್ನೂ ಓದಿ: ಅಮೆರಿಕ ವೀಸಾಕ್ಕಾಗಿ ಇನ್ನು ಚೆನ್ನೈಗೆ ಹೋಗಬೇಕಿಲ್ಲ; ಬೆಂಗಳೂರಲ್ಲೇ ಆರಂಭವಾಗಲಿದೆ ಕಾನ್ಸುಲೇಟ್ ಕಚೇರಿ

ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಅಮೆರಿಕಾಕ್ಕೆ ಪ್ರಯಾಣಿಸುವವರಿದ್ದಾರೆ. ವೀಸಾ ಸ್ಟಾಪಿಂಗ್‌ಗೆ ಚೆನ್ನೈ, ಹೈದರಾಬಾದ್‌ಗೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ನಾವು ಮನವರಿಕೆ ಮಾಡಿಕೊಟ್ಟಿದ್ದೆವು. ಸದ್ಯ ಬೆಂಗಳೂರಿಗೆ ಯುಎಸ್ ರಾಯಭಾರಿ ಕಚೇರಿಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಬೆಂಗಳೂರು ಮತ್ತು ಅಹಮದಾಬಾದ್‌‌ನಲ್ಲಿ ಕಚೇರಿ ತೆರಯುವ ಅಂದಾಜಿದೆ. 4 ರಿಂದ 5 ಲಕ್ಷ ಜನತೆಗೆ ವರ್ಷಕ್ಕೆ ಸಹಾಯವಾಗಲಿದೆ. ಬೇರೆ ರಾಜ್ಯಗಳಿಗೆ ಹೋಗದೇ ವೀಸಾ ಪಡೆದುಕೊಳ್ಳುವಂತಾಗುತ್ತದೆ ಎಂದರು.

ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸೂಕ್ತವಾದ ಜಾಗ ಕೊಡುವುದಾಗಿ ಕೂಡ ತಿಳಿಸಿದ್ದರು. ಆ ಜಾಗ ಕೊಟ್ಟು ಆದಷ್ಟು ಬೇಗ ಕಚೇರಿ ನಿರ್ಮಾಣ ಆಗುವುಂತೆ ನೋಡಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಮತ್ತು ಬೆಂಗಳೂರು ಉಸ್ತುವಾರಿಯೂಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಲಿದ್ದೇನೆ ಎಂದರು.

ಭಾರತ-ಅಮೆರಿಕ ನಡುವೆ ಹಲವು ಒಪ್ಪಂದಗಳಿಗೆ ಸಹಿ ಹಾಕಿವೆ. ಫೈಟರ್ ಜೆಟ್​ ನಿರ್ಮಾಣ ಸಂಬಂಧ ಹೆಚ್​​ಎಎಲ್​​, ಅಮೆರಿಕದ ಜಿಇ ಕಂಪನಿ ನಡುವೆ ಒಪ್ಪಂದ ನಡೆದಿದೆ. ಹಿಂದೆ ಹೆಚ್​ಎಎಲ್ ಕಂಪನಿ​​ ಮುಚ್ಚಲಾಗುತ್ತೆ ಎಂದು ಹೇಳುತ್ತಿದ್ದರು. ಮೋದಿ ಅವರು ಹೆಚ್​ಎಎಲ್​​​​ ಕಂಪನಿ ಗಟ್ಟಿಗೊಳಿಸುವ ಕೆಲಸ ಮಾಡಿದ್ದಾರೆ.

ಭಾರತ-ಅಮೆರಿಕ ನಡುವೆ ಹಲವು ಒಪ್ಪಂದಗಳಿಗೆ ಸಹಿ

ಭಾರತ-ಅಮೆರಿಕ ನಡುವೆ ಹಲವು ಒಪ್ಪಂದಗಳಿಗೆ ಸಹಿ ಹಾಕಿವೆ. ಫೈಟರ್ ಜೆಟ್​ ನಿರ್ಮಾಣ ಸಂಬಂಧ ಹೆಚ್​​ಎಎಲ್​​, ಅಮೆರಿಕದ ಜಿಇ ಕಂಪನಿ ನಡುವೆ ಒಪ್ಪಂದ ನಡೆದಿದೆ. ಟೆಕ್ನಾಲಜಿ ಟ್ರಾನ್ಸ್‌ಫರ್‌ನಿಂದ ಹೆಚ್ಎಎಲ್ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ. 10 ವರ್ಷಗಳ ಹಿಂದೆ ಹೆಚ್ಎಎಲ್ ಮುಚ್ಚಿಯೇ ಹೋಯ್ತು ಅಂತಿದ್ದರು. ಆದರೆ ಪ್ರಧಾನಿ ಮೋದಿ ವಿವಿಧ ಮೂಲಗಳಿಂದ ಹೆಚ್ಎಎಲ್ ಗಟ್ಟಿಗೊಳಿಸುವ ಕೆಲಸ ಮಾಡಿದರು ಎಂದು ತೇಜಸ್ವ ಸೂರ್ಯ ಹೇಳಿದರು.

ಅಂತಾರಾಷ್ಟ್ರೀಯ ಬ್ಯಾಟರಿ ಕಂಪನಿ ಬೆಂಗಳೂರಿಗೆ ಬರುತ್ತಿದೆ. ಅವರು ನೂರು ಎಕರೆ ಜಾಗ ಕೇಳಿದ್ದಾರೆ. ಎಂಟು ಸಾವಿರ ಕೋಟಿ ಹೂಡಿಕೆ ಆಗಲಿದೆ. ಹೀಗಾಗಿ ಆದಷ್ಟೂ ಬೇಗ ದೇವನಹಳ್ಳಿಯಲ್ಲಿ‌ ಜಾಗ ನೀಡಬೇಕು. ಈ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.

ಇಸ್ರೋ ಮತ್ತು ನಾಸಾ ಜೊತೆ ಕೂಡ ಒಪ್ಪಂದ ಆಗಿದೆ. ಇದರಿಂದ ಸಾಕಷ್ಟು ಅನುಕೂಲ ಆಗಲಿದೆ. ಬೆಂಗಳೂರಿಗೆ ಅನೇಕ ಯೋಜನೆಯನ್ನು ಈ ಮೂಲಕ ಪ್ರಧಾನಿ ಮೋದಿ ನೀಡಿದ್ದಾರೆ. ಇದ್ಯಾವುದೂ ಎರಡು ರಾತ್ರಿಯಲ್ಲಿ ಆದ ಕೆಲಸ ಅಲ್ಲ. ಇದರ ಹಿಂದೆ ಹೋಮ್ ವರ್ಕ್, ಗ್ರೌಂಡ್ ವರ್ಕ್ ಇದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ