ಬೆಂಗಳೂರು, ಡಿ.04: ಚೀನಾ, ಅಮೇರಿಕಾ ಬೆನ್ನಲ್ಲೇ ಇದೀಗ ರಾಜಧಾನಿ ಬೆಂಗಳೂರಿನಲ್ಲಿ ನ್ಯೂಮೋನಿಯಾ (Pneumonia) ಆತಂಕ ಹೆಚ್ಚಾಗಿದೆ. ಕಳೆದ ಎರಡು ವಾರದಿಂದ ನಗರದ ಮಕ್ಕಳಲ್ಲಿ (Children) ಉಸಿರಾಟದ ಸಮಸ್ಯೆ, ವೈರಲ್ ನ್ಯುಮೋನಿಯಾ ಹೆಚ್ಚಾಗಿದೆ. ಆಸ್ಪತ್ರೆಗಳಲ್ಲಿ ದಿನಕ್ಕೆ ಮೂರರಿಂದ ನಾಲ್ಕು ವೈರಲ್ ನ್ಯುಮೋನಿಯಾ ಕೇಸ್ಗಳು ದಾಖಲಾಗುತ್ತಿವೆ. ರಾಜಧಾನಿಯಲ್ಲಿ ಸುಮಾರು 25 ರಿಂದ 30 ಮಕ್ಕಳಲ್ಲಿ ನ್ಯುಮೋನಿಯಾ ಪತ್ತೆಯಾಗುತ್ತಿದೆ. ಜೊತೆಗೆ 1-15 ವರ್ಷದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಾಗಿವೆ.
ಪ್ರತಿ ದಿನ ಚೀನಾ, ಅಮೇರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ 3ರಿಂದ14 ವರ್ಷ ವಯಸ್ಸಿನ ಮಕ್ಕಳಲ್ಲಿ ಏಕಾಏಕಿ ಭಾರೀ ಪ್ರಮಾಣದಲ್ಲಿ ನ್ಯುಮೋನಿಯಾ ಸೋಂಕು ಪತ್ತೆಯಾಗುತ್ತಿದೆ. ಚೀನಾದಲ್ಲೂ ಎಳೆಯ ವಯಸ್ಸಿನ ಮಕ್ಕಳಲ್ಲಿ ಇದೇ ರೀತಿಯಲ್ಲಿ ನ್ಯುಮೋನಿಯಾ ಮಾದರಿಯ ನಿಗೂಢ ಸೋಂಕು ಕಾಣಿಸಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಾಂಕ್ರಾಮಿಕ ಏಳುವ ಭೀತಿ ಎದುರಾಗಿದ್ದು ಬೆಂಗಳೂರಿನ ಮಕ್ಕಳಲ್ಲೂ ಉಸಿರಾಟದ ಸಮಸ್ಯೆ ಕಂಡು ಬರುತ್ತಿದೆ. ಹೀಗಾಗಿ ಎಚ್ಚರಿಕೆಯಿಂದ ಇರಲು ಪೋಷಕರಿಗೆ ಸೂಚನೆ ನೀಡಲಾಗಿದೆ. ಜ್ವರ, ಕೆಮ್ಮು, ಸುಸ್ತು, ಉಸಿರಾಟದ ಸಮಸ್ಯೆ ಕಂಡು ಬಂದರೆ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ.
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ರೆಸ್ಪಿರೇಟರಿ ಕೇಸ್ ಶೇಕಾಡ 20% ಹೆಚ್ಚಳವಾಗಿದೆ. ನ್ಯೂಮೋನಿಯಾ ಕೇಸ್ 20% ಹೆಚ್ಚಳ. 8 ರಿಂದ 10 ವರ್ಷದ ಮಕ್ಕಳಲ್ಲಿ ವೈರಲ್ ನ್ಯೂಮೋನಿಯಾ ಪತ್ತೆಯಾಗುತ್ತಿದ್ದು ಪ್ರತಿ ದಿನ 5 ರಿಂದ 6 ಹೊಸ ಕೇಸ್ಗಳು ದಾಖಲಾಗುತ್ತಿವೆ.
ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರೆಸ್ಪಿರೇಟರಿ ಕೇಸ್ ಶೇಕಾಡ 30% ಹೆಚ್ಚಳ, ನ್ಯೂಮೋನಿಯಾ ಕೇಸ್ 25% ಹೆಚ್ಚಳವಾಗಿದೆ. 8 ರಿಂದ 15 ವರ್ಷದ ಮಕ್ಕಳಲ್ಲಿ ವೈರಲ್ ನ್ಯೂಮೋನಿಯಾ ಪತ್ತೆಯಾಗಿದ್ದು ಪ್ರತಿ ದಿನ 5 ರಿಂದ 6 ಹೊಸ ಕೇಸ್ ದಾಖಲಾಗುತ್ತಿದೆ.
ರೈನ್ಬೋ ಚಿಲ್ಡ್ರನ್ ಆಸ್ಪತ್ರೆಯಲ್ಲಿ ರೆಸ್ಪಿರೇಟರಿ ಕೇಸ್ ಶೇಕಾಡ 25 % ಹೆಚ್ಚಳವಾಗಿದ್ದು ನ್ಯೂಮೋನಿಯಾ ಕೇಸ್ 20% ಹೆಚ್ಚಾಗಿದೆ. 8 ರಿಂದ 15 ವರ್ಷದ ಮಕ್ಕಳಲ್ಲಿ ವೈರಲ್ ನ್ಯೂಮೋನಿಯಾ ಪತ್ತೆಯಾಗುತ್ತಿದೆ. ಪ್ರತಿ ದಿನ 5 ರಿಂದ 6 ಹೊಸ ಕೇಸ್ ದಾಖಲಾಗುತ್ತಿದೆ.
ಜಯನಗರ ಆಸ್ಪತ್ರೆಯಲ್ಲಿ ಪ್ರತಿ ದಿನ ಒಪಿಡಿಗೆ 100ಕ್ಕೂ ಹೆಚ್ಚು ಮಕ್ಕಳು ಬರ್ತಿದ್ದಾರೆ. ಡೆಂಘೀ 2 ರಿಂದ 3 ಕೇಸ್ ಪಾಸಿಟಿವ್ ಬರ್ತಿದೆ. ನ್ಯೂಮೋನಿಯಾ ಕೇಸ್ 5% ಹೆಚ್ಚಳ.
ಬೌರಿಂಗ್ ಆಸ್ಪತ್ರೆಯಲ್ಲಿ ರೆಸ್ಪಿರೇಟರಿ ಕೇಸ್ ಶೇಕಾಡ 15% ಹೆಚ್ಚಳ. ನ್ಯೂಮೋನಿಯಾ ಕೇಸ್ 10% ಹೆಚ್ಚಳ. 8 ರಿಂದ 15 ವರ್ಷದ ಮಕ್ಕಳಲ್ಲಿ ವೈರಲ್ ನ್ಯೂಮೋನಿಯಾ ಪತ್ತೆಯಾಗುತ್ತಿದೆ. ಪ್ರತಿ ದಿನ 2 ರಿಂದ 4 ಹೊಸ ಕೇಸ್ ದಾಖಲಾಗುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ