ಮಾನವನ ಭಾವನೆ ಅರ್ಥೈಸಿಕೊಂಡು ಸಂವಹನ ನಡೆಸುವ ರೋಬೋಟ್​​​: ಐಐಟಿ ಸಂಶೋಧನೆ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ ಬೆಂಗಳೂರಿನ ಸಂಶೋಧಕರು ಹೊಸ ರೋಬೋಟಿಕ್ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಮನುಷ್ಯರನ್ನು ಅರ್ಥಮಾಡಿಕೊಂಡು, ಅವರ ಭಾವನೆಗಳ ತಕ್ಕ ಹಾಗೆ ಅವರೊಂದಿಗೆ ಸಂವಹನ ನಡೆಸುತ್ತದೆ. ​

ಮಾನವನ ಭಾವನೆ ಅರ್ಥೈಸಿಕೊಂಡು ಸಂವಹನ ನಡೆಸುವ ರೋಬೋಟ್​​​: ಐಐಟಿ ಸಂಶೋಧನೆ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:Dec 04, 2023 | 11:38 AM

ಬೆಂಗಳೂರು ಡಿ.04: ಮನುಷ್ಯರನ್ನು ಅರ್ಥಮಾಡಿಕೊಂಡು, ಅವರ ಭಾವನೆಗಳ ತಕ್ಕ ಹಾಗೆ ಅವರೊಂದಿಗೆ ಸಂವಹನ ನಡೆಸುವ ರೋಬೋಟಿಕ್ ಮಾದರಿಯನ್ನು (Robotic model) ​ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ ಬೆಂಗಳೂರಿನ (IIIT-B) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಎಷ್ಟೊಸಾರಿ ಮನುಷ್ಯನಿಗೆ ಮನಷ್ಯನ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುದಿಲ್ಲ. ಆದರೆ ಈ ರೋಬೊಟ್​​ ಮಾನವನ ಭಾವನೆಗಳನ್ನು ಅರ್ಥೈಸಿಕೊಂಡು ಸಂವಹನ ನಡೆಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಸೋಹಂ ಜೋಶಿ, ಅರ್ಪಿತಾ ಮಳವಳ್ಳಿ ಮತ್ತು ಶ್ರೀಶಾ ರಾವ್ ಅವರ ಈ ಸಂಶೋಧನಾ ಪ್ರಬಂಧವು ಪಬ್ಲಿಕ್ ಲೈಬ್ರರಿ ಸೈನ್ಸ್ (PLOS) ನ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಕೆಲವೊಂದು ಸಾರಿ ವರ್ತನೆ ತಕ್ಕ ಹಾಗೆ ನಮಗೆ ಪ್ರತಿಕ್ರಿಯೆ ದೊರೆಯುವುದಿಲ್ಲ, ವಿಭಿನ್ನವಾಗಿರುತ್ತದೆ. ಆದರೆ ಈ ರೋಬೋಟ್​ ಮಾನವನ ವರ್ತನೆ ಮತ್ತು ಭಾವನೆಯನ್ನು ಅರ್ಥ ಮಾಡಿಕೊಂಡು ನಿಖರವಾಗಿ ಪ್ರತಿಕ್ರಿಯೆ ನೀಡುತ್ತದೆ ಎಂದು ಯೋಜನೆಯ ಅಧ್ಯಾಪಕ, ಮೇಲ್ವಿಚಾರಕ ರಾವ್ ಹೇಳಿದರು.

ಇದನ್ನೂ ಓದಿ: ಒಮಾನ್ ಮೂಲದ ಮಗುವಿಗೆ ರೋಬೋಟ್ ಸಹಾಯದಿಂದ ಕಿಡ್ನಿ ಶಸ್ತ್ರಚಿಕಿತ್ಸೆ ನಡೆಸಿದ ಬೆಂಗಳೂರಿನ ವೈದ್ಯರು 

ರೋಬೋಟ್‌ಗಳು/ಮಾಡೆಲ್‌ಗಳು ಮನೋವಿಜ್ಞಾನದ ಬಗ್ಗೆ ಸ್ವಲ್ಪ ತಿಳುವಳಿಕೆಯನ್ನು ಹೊಂದಿರಬೇಕು. ಸಂವಹನ ನಡೆಸುವ ವ್ಯಕ್ತಿಯ ಆಸಕ್ತಿ ಮತ್ತು ವಯಸ್ಸನ್ನು ಪರಿಗಣಿಸಬೇಕು. ಈ ಹೊಸ ತಂತ್ರಜ್ಞಾನವು ಭಾವನೆಗಳು ಮತ್ತು ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಧನಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಓರ್ವ ಉದ್ಯಮಿಯ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಂಡು ಅವರ ಉದ್ಯಮಕ್ಕೂ ಸಹ ಈ ರೋಬೋಟ್​ ಸಹಾಯಕವಾಗಬಹುದು. ಅಲ್ಲದೆ, ಅಪಘಾತಗಳನ್ನು ತಡೆಗಟ್ಟಲು ಚಾಲಕನ ನಡವಳಿಕೆಯ ಆಧಾರದ ಮೇಲೆ ಆತನ ನಿದ್ದೆ ಅಥವಾ ಅನಾರೋಗ್ಯವನ್ನು ರೊಬೋಟ್​​ ಪತ್ತೆ ಮಾಡಿ ಬಳಿಕ ಎಚ್ಚರಿಕೆ ನೀಡುತ್ತದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:06 am, Mon, 4 December 23

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ