AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

OLXನಲ್ಲಿ ವಸ್ತು ಖರೀದಿಸುವ ನೆಪದಲ್ಲಿ ದರೋಡೆ ಮಾಡ್ತಿದ್ದ ಮೂವರ ಸೆರೆ

ಈ ಕಿಲಾಡಿಗಳಿಗೆ OLX ಬಳಕೆದಾರರೇ ಟಾರ್ಗೆಟ್. OLXನಲ್ಲಿ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಸಂಪರ್ಕಿಸಿ ಅವರ ಬಳಿಯೇ ದರೋಡೆ ಆಡುತ್ತಿದ್ದರು. ಸದ್ಯ ಈಗ ಮೂವರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮೊಬೈಲ್ ಖರೀದಿಸುವ ನೆಪ ಮಾಡಿ ಚಿಕ್ಕಪೇಟೆ ಮೆಟ್ರೋ ಸ್ಟೇಷನ್​ಗೆ ಕರೆಸಿಕೊಂಡು ನಂತರ ಅಮ್ಮನ ಬಳಿ ಹಣ ಇದೆ ಕೊಡ್ತೀನಿ ಅಂತ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮನೆಯಲ್ಲಿದ್ದ ನಾಲ್ವರು ಜೊತೆಗೂಡಿ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದಾರೆ. ಈ ಬಗ್ಗೆ ದರೋಡೆಗೊಳಗಾದ ವ್ಯಕ್ತಿ ಕೆ.ಆರ್. ಮಾರುಕಟ್ಟೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ನಾಪತ್ತೆಯಾದ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

OLXನಲ್ಲಿ ವಸ್ತು ಖರೀದಿಸುವ ನೆಪದಲ್ಲಿ ದರೋಡೆ ಮಾಡ್ತಿದ್ದ ಮೂವರ ಸೆರೆ
ಆರೋಪಿಗಳಿಂದ ಪೊಲೀಸರು ವಶ ಪಡಿಸಿಕೊಂಡ ಮೊಬೈಲ್ ಮತ್ತು ಹಣ
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on:Oct 16, 2026 | 10:58 PM

Share

ಬೆಂಗಳೂರು: OLX ನಲ್ಲಿ ವಸ್ತು ಮಾರಾಟ ಮಾಡುತ್ತಿದ್ದವರ ಬಳಿ ದರೋಡೆ ಮಾಡ್ತಿದ್ದ ಮೂವರನ್ನು ಬೆಂಗಳೂರಿನ ಕೆ.ಆರ್​.ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಈ ಕಿಲಾಡಿಗಳಿಗೆ OLX ಬಳಕೆದಾರರೇ ಟಾರ್ಗೆಟ್. OLXನಲ್ಲಿ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಸಂಪರ್ಕಿಸಿ ಅವರ ಬಳಿಯೇ ದರೋಡೆ ಆಡುತ್ತಿದ್ದರು. ಸದ್ಯ ಈಗ ಮೂವರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮೊದಲಿಗೆ ಈ ದರೋಡೆಕೋರರು OLXನಲ್ಲಿ ವಸ್ತುಗಳನ್ನು ಸರ್ಚ್ ಮಾಡುತ್ತಾರೆ. ಬಳಿಕ ಪ್ಲಾನ್ ಮಾಡಿ ವಸ್ತು ಖರೀದಿಸುವ ನೆಪದಲ್ಲಿ ವಸ್ತು ಮಾರಾಟಕ್ಕೆ ಮುಂದಾಗಿರುವ ವ್ಯಕ್ತಿಗೆ ಕರೆ ಮಾಡಿ ವಸ್ತು ನೋಡಬೇಕೆಂದು ಒಂದು ಲೊಕೇಷನ್ ಫಿಕ್ಸ್ ಮಾಡಿ ಕರೆಸಿಕೊಳ್ಳುತ್ತಿದ್ದರು. ಬಳಿಕ ವ್ಯಕ್ತಿ ಬಂದ ಮೇಲೆ ವಸ್ತು ನೋಡುವಂತೆ ನಾಟಕವಾಡಿ ಪಕ್ಕದ ಏರಿಯಾದಲ್ಲೇ ಮನೆ ಇದೆ ಅಲ್ಲೇ ಹಣ ಕೊಡೋದಾಗಿ ಕರೆದುಕೊಂಡು ಹೋಗಿ ಗುಂಪು ಗುಂಪಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಹಣ ದೋಚುತ್ತಿದ್ದರು. ಇದೇ ರೀತಿ ಜನವರಿ 23ರಂದು ವ್ಯಕ್ತಿಯೋರ್ವನಿಂದ ದರೋಡೆ ಮಾಡಿದ್ದಾರೆ.

ಮೊಬೈಲ್ ಖರೀದಿಸುವ ನೆಪ ಮಾಡಿ ಚಿಕ್ಕಪೇಟೆ ಮೆಟ್ರೋ ಸ್ಟೇಷನ್​ಗೆ ಕರೆಸಿಕೊಂಡು ನಂತರ ಅಮ್ಮನ ಬಳಿ ಹಣ ಇದೆ ಕೊಡ್ತೀನಿ ಅಂತ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮನೆಯಲ್ಲಿದ್ದ ನಾಲ್ವರು ಜೊತೆಗೂಡಿ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದಾರೆ. ಈ ಬಗ್ಗೆ ದರೋಡೆಗೊಳಗಾದ ವ್ಯಕ್ತಿ ಕೆ.ಆರ್. ಮಾರುಕಟ್ಟೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ನಾಪತ್ತೆಯಾದ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Published On - 12:43 pm, Mon, 25 January 21

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಮೈಸೂರು ದಸರಾ: ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್
ಮೈಸೂರು ದಸರಾ: ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್
ಮೈಸೂರು ದಸರಾ 2026: ಗೊಂದಲಗಳ ನಡುವೆ ವಜ್ರಮುಷ್ಟಿ ಕಾಳಗ!
ಮೈಸೂರು ದಸರಾ 2026: ಗೊಂದಲಗಳ ನಡುವೆ ವಜ್ರಮುಷ್ಟಿ ಕಾಳಗ!
ಮೈಸೂರು ದಸರಾ: ಅರಮನೆ ಪ್ರವೇಶಿಸಿದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ
ಮೈಸೂರು ದಸರಾ: ಅರಮನೆ ಪ್ರವೇಶಿಸಿದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ
ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನನ
ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನನ
ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರುವ ಪ್ರಶಾಂತ ಆನೆಗೆ ವಿಶೇಷ ಮಜ್ಜನ
ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರುವ ಪ್ರಶಾಂತ ಆನೆಗೆ ವಿಶೇಷ ಮಜ್ಜನ
ಡಿಸೆಂಬರ್ 2029ರೊಳಗೆ ಭಾರತ ‘ಡ್ರಗ್ಸ್ ಮುಕ್ತ’ ದೇಶ: ಅಮಿತ್ ಶಾ ಘೋಷಣೆ
ಡಿಸೆಂಬರ್ 2029ರೊಳಗೆ ಭಾರತ ‘ಡ್ರಗ್ಸ್ ಮುಕ್ತ’ ದೇಶ: ಅಮಿತ್ ಶಾ ಘೋಷಣೆ
ವಿಜಯದಶಮಿಯ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವ: ಡಾ. ಶೆಲ್ವಪಿಳ್ಳೈ ಅಯ್ಯಂಗಾರ್
ವಿಜಯದಶಮಿಯ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವ: ಡಾ. ಶೆಲ್ವಪಿಳ್ಳೈ ಅಯ್ಯಂಗಾರ್
ವಜ್ರ ಕದ್ದು ಕಾವಲುಗಾರರ ನೆಮ್ಮದಿ ಕೆಡಿಸಿದ ಆಸಿಯಾ: ವಿಡಿಯೋ
ವಜ್ರ ಕದ್ದು ಕಾವಲುಗಾರರ ನೆಮ್ಮದಿ ಕೆಡಿಸಿದ ಆಸಿಯಾ: ವಿಡಿಯೋ
ಮೈಸೂರು ದಸರಾ: ಆಟೋದಲ್ಲಿ ಸಂಚರಿಸಿ ಗಮನಸೆಳೆದ ಸಚಿವ ಕೃಷ್ಣಭೈರೇಗೌಡ
ಮೈಸೂರು ದಸರಾ: ಆಟೋದಲ್ಲಿ ಸಂಚರಿಸಿ ಗಮನಸೆಳೆದ ಸಚಿವ ಕೃಷ್ಣಭೈರೇಗೌಡ
ಮೈಸೂರು ದಸರಾ: ಚಾಮುಂಡಿ ಬೆಟ್ಟದಿಂದ ಅರಮನೆಗೆ ಹೊರಟ ಉತ್ಸವ ಮೂರ್ತಿ ಮೆರವಣಿಗೆ
ಮೈಸೂರು ದಸರಾ: ಚಾಮುಂಡಿ ಬೆಟ್ಟದಿಂದ ಅರಮನೆಗೆ ಹೊರಟ ಉತ್ಸವ ಮೂರ್ತಿ ಮೆರವಣಿಗೆ