ಬೆಂಗಳೂರು: ಆಸ್ಟ್ರೇಲಿಯಾ ಪ್ರಜೆಯ ವಿಲ್ಲಾದಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಂಜುನಾಥ್‌ನನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಂಜುನಾಥ್ ಸೆಕ್ಯೂರಿಟಿ ಗಾರ್ಡ್ ಆಗಿದ್ದ ವಿಲ್ಲಾದಲ್ಲೇ 3 ಡೈಮಂಡ್ ರಿಂಗ್ ಕದ್ದು ಪರಾರಿಯಾಗಿದ್ದ ಸದ್ಯ ಪೊಲೀಸರು ಈಗ ಕಳ್ಳನನ್ನು ಬಂಧಿಸಿದ್ದಾರೆ.
ಆರೋಪಿ ಮಂಜುನಾಥ್ ಬೆಂಗಳೂರಿನ ನಂದಿ ರಸ್ತೆಯ ವಿಲ್ಲಾದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಅದೇ ವಿಲ್ಲಾದಲ್ಲಿ ಆಸ್ಟ್ರೇಲಿಯಾ ದೇಶದ ವೋಹ್ನ್ ಟ್ರೋಲ್ಫೆ ದಂಪತಿ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿದೇಶಿ ಪ್ರಜೆ ಫುಟ್ ಬಾಲ್ ಆಡಲು ಹೋಗಿದ್ದಾಗ ಅಂದ್ರೆ ಆಗಸ್ಟ್ 28ರಂದು ಮಂಜುನಾಥ್ ವಿದೇಶಿ ಪ್ರಜೆಗಳ ಮನೆಗೆ ನುಗ್ಗಿ 25 ಲಕ್ಷ ರೂ ಬೆಲೆ ಬಾಳುವ 3 ಡೈಮಂಡ್ ರಿಂಗ್ ಕದ್ದು ಪರಾರಿಯಾಗಿದ್ದ.
ಬಳಿಕ ಪ್ಯಾರಿಸ್ನ ಎಫಿಲ್ ಟವರ್ ಮುಂದೆ ಪ್ರಪೋಸ್ ಮಾಡಿ ನೀಡಿದ್ದ ಡೈಮಂಡ್ ರಿಂಗ್ ಕಳ್ಳತನವಾಗಿದೆ ಎಂದು ವಿದೇಶಿ ದಂಪತಿ ಕಣ್ಣೀರಿಟ್ಟಿದ್ದರು. ಈ ಬಗ್ಗೆ ವಿಶ್ವನಾಥಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಮೊಬೈಲ್ ಕದ್ದ ಕೇಸ್ನಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ವೇಳೆ ಉಂಗುರ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ವಾಹನ ಕಳ್ಳರನ್ನು ಬಂಧಿಸಿದ ಬಿಡದಿ ಠಾಣೆಯ ಪೊಲೀಸರು
ಇನ್ನು ಮತ್ತೊಂದೆಡೆ ವಾಹನ ಕಳ್ಳರನ್ನು ರಾಮನಗರ ತಾಲೂಕಿನ ಬಿಡದಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಂಡ್ಯದ ರವಿಕುಮಾರ್, ಅನಿಲ್ ಕುಮಾರ್ ಬಂಧಿತ ಆರೋಪಿಗಳು. ಬಂಧಿತರಿಂದ 6 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಅಫ್ಘಾನ್ನಲ್ಲಿ ಮತ್ತೆ ಸ್ಫೋಟ; ಮಿನಿ ಬಸ್ನಲ್ಲಿ ನಡೆದ ಅವಘಡದಲ್ಲಿ ಒಬ್ಬ ಬಲಿ, ಐವರಿಗೆ ಗಾಯ
Published On - 11:45 am, Sun, 14 November 21