ಬೆಂಗಳೂರು, ಸೆಪ್ಟೆಂಬರ್ 03: ಬೆಂಗಳೂರು ವಿಮಾನ ನಿಲ್ದಾಣದ ಹರಾಜಿನಲ್ಲಿ ಇ ಸಿಗರೇಟ್ (E Cigarette) ಖರೀದಿಸಿ ನಗರದಲ್ಲಿ ಮಾರುತ್ತಿದ್ದ ಆರೋಪಿಗಳನ್ನು ಜೆಜೆ ನಗರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ವಿದೇಶದಿಂದ ಬರುವ ಪ್ರಯಾಣಿಕರ ಬಳಿ ಇರುವ ಇ ಸಿಗರೇಟ್ಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru International Airport) ಅಧಿಕಾರಿಗಳು ಸೀಜ್ ಮಾಡುತ್ತಾರೆ. ಸೀಜ್ ಮಾಡಿದ ಇ ಸಿಗರೇಟ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಹರಾಜು ಹಾಕಲಾಗುತ್ತದೆ.
ಹರಾಜಿನಲ್ಲಿ ಇ ಸಿಗರೇಟ್ಗಳನ್ನು ಖರೀದಿಸುವ ಖತರ್ನಾಕ್ ಗ್ಯಾಂಗ್ ಜೆಜೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಡೌನ್ನಲ್ಲಿ ಶೇಖರಿಸಿದ್ದರು. ಬಳಿಕ ಇ ಸಿಗರೇಟ್ಗಳನ್ನು ವಿಂಗಡಿಸುತ್ತಿದ್ದರು. ಬಳಸದ ಇ ಸಿಗರೇಟ್ಗಳನ್ನು 300-400 ರೂ. ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ತಿಳಿದು ದಾಳಿ ನಡೆಸಿದ ಜೆಜೆನಗರ ಪೊಲೀಸರು ಇಬ್ಬರು ಆರೋಪಿಗಳಿಂದ ಸುಮಾರು 110 ಇ ಸಿಗರೇಟ್ ವಶಪಡಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿ ಅಪ್ಡೇಟ್ ಆಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ