ಕಾರ್ಮಿಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಆರೋಪಿ ಸೆರೆ; ಠಾಣೆಯಲ್ಲಿ ಪೊಲೀಸರು ಹೊಡೆಯುತ್ತಿರುವ ವಿಡಿಯೋ ವೈರಲ್

| Updated By: preethi shettigar

Updated on: Sep 29, 2021 | 12:56 PM

ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರನ್ನು ಅಡ್ಡಗಟ್ಟಿ ರಾಬರಿ ಮಾಡುತ್ತಿದ್ದ ಖದೀಮರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಮೂವರ ಪೈಕ್ ಒಬ್ಬ ಆರೋಪಿ ಸೆರೆ ಸಿಕ್ಕಿದ್ದಾನೆ.

ಕಾರ್ಮಿಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಆರೋಪಿ ಸೆರೆ; ಠಾಣೆಯಲ್ಲಿ ಪೊಲೀಸರು ಹೊಡೆಯುತ್ತಿರುವ ವಿಡಿಯೋ ವೈರಲ್
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಕಾರ್ಮಿಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ, ಆರೋಪಿ ಸಂತೋಷ್​ನನ್ನು ಬೆಂಗಳೂರಿನ ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸಬ್​ ಇನ್ಸ್​ಪೆಕ್ಟರ್​ ವೆಂಕಟೇಶ್ ಹೊಡೆದಿದ್ದು, ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ದರೋಡೆ ಮಾಡುತ್ತಿದ್ದ ವೇಳೆ ಸಂತೋಷ್​ನನ್ನು ಸೆರೆ ಹಿಡಿಯಲಾಗಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ಸದ್ಯ ಆರೋಪಿ ಸಂತೋಷ್ ವಿಚಾರಣೆಯ ವಿಡಿಯೋ ವೈರಲ್ ಆಗಿದೆ.

ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರನ್ನು ಅಡ್ಡಗಟ್ಟಿ ರಾಬರಿ ಮಾಡುತ್ತಿದ್ದ ಖದೀಮರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಮೂವರ ಪೈಕ್ ಒಬ್ಬ ಆರೋಪಿ ಸೆರೆ ಸಿಕ್ಕಿದ್ದಾನೆ. ಹೆಬ್ಬಗೋಡಿ ಪೋಲಿಸ್ ಠಾಣಾ ವ್ಯಾಪ್ತಿಯ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಳ್ಳತನ, ಡಕಾಯಿತಿ, ಸಾರ್ವಜನಿಕರಿಗೆ ಬೆದರಿಕೆ‌ ಹಾಕುತ್ತಿದ್ದ ಹಿನ್ನೆಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂರು ಜನರ ತಂಡದಿಂದ ರಾಬರಿಗೆ ಯತ್ನ
ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಅಮಾನ್ ಎಂಬುವನನ್ನು ಅಡ್ಡಹಾಕಿ ಆರೋಪಿಗಳು ರಾಬರಿ ಮಾಡಿದ್ದಾರೆ. ಅಮಾನ್ ದ್ವಿಚಕ್ರ ವಾಹನದಲ್ಲಿ ಅತ್ತಿಬೆಲೆ ಮೂಲಕ ತಮಿಳುನಾಡಿಗೆ ಹೊರಟಿದ್ದರು, ಚೆಕ್ ಪೋಸ್ಟ್​ನಲ್ಲಿ ಪೋಲಿಸರು ಅಡ್ಡ ಹಾಕಿದಾಗ ಆರೋಪಿಗಳು ಪರಾರಿಯಾಗಿದ್ದಾರೆ. ಆಗ ಸಂತೋಷ್ ಎಂಬಾತ ಸಿಕ್ಕಿ ಹಾಕಿಕೊಂಡಿದ್ದಾನೆ. 21 ವರ್ಷದ ಆಸುಪಾಸು ವಯಸ್ಸಿನ ಯುವಕರ ತಂಡ ಈ ಕೃತ್ಯ ಎಸಗಿದೆ ಎನ್ನುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಕಳೆದ ಸಾಕಷ್ಟು ದಿನಗಳಿಂದ ಕಾರ್ಮಿಕರ ಬಳಿ ರಾಬರಿ ಮಾಡುತ್ತಿದ್ದ ಈ ತಂಡ, ಕಾರ್ಮಿಕರ ಬಳಿ ಇದ್ದ ಮೊಬೈಲ್, ಹಣ ಕಸಿದು ಪರಾರಿಯಾಗುತ್ತಿತ್ತು. ಪ್ರತಿರೋಧ ತೋರಿದಾಗ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದರು. ನೊಂದ ಜನ ಈ ಕುರಿತು ಪೊಲೀಸರಿಗೆ ದೂರು ನೀಡಿತ್ತು, ಸದ್ಯ ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೋಲಿಸರ ಯಶಸ್ಸಿ ಕಾರ್ಯಾಚರಣೆಯಿಂದ ಆರೋಪಿ ಬಂಧನವಾಗಿದೆ. ತಪ್ಪಿಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ:
ಬೆಂಗಳೂರಿನ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಸಿಸಿಬಿ ದಾಳಿ; ಐವರು ಆರೋಪಿಗಳ ಬಂಧನ

ಬೆಂಗಳೂರು: ಖಾಸಗಿ ವಿಡಿಯೋ ಸೆರೆ ಹಿಡಿದು ಬೆದರಿಕೆ; ಯುವತಿ ಮೇಲೆ ದೌರ್ಜನ್ಯವೆಸಗಿದ ಐವರ ಬಂಧನ

Published On - 12:46 pm, Wed, 29 September 21