ಪೊಲೀಸರೇ ನಮ್ಮ ಮನೆಗೆ ಗ್ರೆನೇಡ್ ತಂದಿಟ್ಟಿದ್ದಾರೆ: ಶಂಕಿತ ಉಗ್ರ ಸಹೋದರನ ಆರೋಪ
ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ನಿನ್ನೆ ಬಂಧನಕ್ಕೊಳಗಾದ ಶಂಕಿತ ಐವರು ಉಗ್ರರರ ಪೈಕಿ ಜಾಹಿದ್ ತಬ್ರೇಜ್ ನಿವಾಸದಲ್ಲಿ ಗ್ರೆನೇಡ್ ಪತ್ತೆಯಾಗಿದ್ದು, ಪೊಲೀಸರೇ ನಮ್ಮ ಮನೆಗೆ ಗ್ರೆನೇಡ್ ತಂದಿಟ್ಟಿದ್ದಾರೆ. ಎಂದು ಶಂಕಿತ ಉಗ್ರ ಜಾಹಿದ್ ತಬ್ರೇಜ್ ಸಹೋದರ ಹೇಳಿದ್ದಾರೆ.
ಬೆಂಗಳೂರು, ಜುಲೈ 20: ನಿನ್ನೆ ಬಂಧನಕ್ಕೊಳಗಾಗಿದ್ದ ಐವರು ಶಂಕಿತ ಉಗ್ರರರ (Suspected terrorist) ಪೈಕಿ ಜಾಹಿದ್ ತಬ್ರೇಜ್ ಎಂಬಾತನ ನಿವಾಸದಲ್ಲಿ ಗ್ರೆನೇಡ್ ಪತ್ತೆಯಾಗಿದ್ದು, ಪೊಲೀಸರೇ ನಮ್ಮ ಮನೆಗೆ ಗ್ರೆನೇಡ್ ತಂದು ಇಟ್ಟಿದ್ದಾರೆ ಎಂದು ಶಂಕಿತ ಉಗ್ರ ಜಾಹಿದ್ ತಬ್ರೇಜ್ ಸಹೋದರ ಅವೇಜ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆ ಪೊಲೀಸರು ತಮ್ಮನನ್ನು ಕರೆದುಕೊಂಡು ಬಂದಿದ್ದು, ಗ್ರೆನೇಡ್ ತಂದು ಇಟ್ಟಿದ್ದಾರೆ ಎಂದರು.
ನನ್ನ ಸಹೋದರ ಅಂತಹ ಕೆಲಸ ಮಾಡುವವನಲ್ಲ. ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ತನ್ನಪಾಡಿಗೆ ತಾನಿದ್ದ. ನಾನು ಮತ್ತು ಸಹೋದರ ಇಬ್ಬರೇ ಮನೆಯಲ್ಲಿ ದುಡಿಯವವರು ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆ; ಪೊಲೀಸರಲ್ಲಿ ಹೆಚ್ಚಿದ ಆತಂಕ, ಎಲ್ಲೆಡೆ ಕಟ್ಟೆಚ್ಚರ
2017ರಲ್ಲಿ ಜುನೈದ್ ಜೊತೆ ಕೇಸ್ವೊಂದರಲ್ಲಿ ಅರೆಸ್ಟ್ ಆಗಿದ್ದ. ಕ್ಯಾಬ್ ಓಡಿಸುವಾಗ ಜುನೈದ್ ಕರೆದೊಯ್ದು ಹೀಗೆ ಮಾಡಿದ್ದ. ಬಳಿಕ ಜುನೈದ್ ಸಹವಾಸವನ್ನೇ ಜಾಹಿದ್ ತಬ್ರೇಜ್ ಬಿಟ್ಟಿದ್ದ. ನಾವು ಸಂಸಾರಸ್ಥರು, ನಾವು ಏಕೆ ಗ್ರೆನೇಡ್ ಇಟ್ಟುಕೊಳ್ಳುತ್ತೇವೆ. ನನ್ನ ತಮ್ಮ ಈ ರೀತಿಯ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಗ್ರೆನೇಡ್ ಅಷ್ಟೇ ಅಲ್ಲ, 45 ಜೀವಂತ ಗುಂಡುಗಳು, ಏಳು ಪಿಸ್ತೂಲ್ಗಳು ಪತ್ತೆ
ಸದ್ಯ ಅರೆಸ್ಟ್ ಆಗಿರುವ ಐವರ ಬಳಿ ಒಟ್ಟು 45 ಜೀವಂತ ಗುಂಡುಗಳು, ಏಳು ಪಿಸ್ತೂಲ್, ವಾಕಿಟಾಕಿ, ಮೊಬೈಲ್ ಸಿಮ್ ಕಾರ್ಡ್ಗಳು ಸಿಕ್ಕಿವೆ. ಇದೆಲ್ಲವನ್ನು ಹೊಂದಿಸಬೇಕು ಅಂದರೆ ಅದಕ್ಕೆ ಹಣ ಬೇಕು. ಈ ಹಣದ ವ್ಯವಸ್ಥೆ ಯನ್ನು ಖುದ್ದು ಎ2 ಮಹಮ್ಮದ್ ಜುನೈದ್ ವಿದೇಶದಲ್ಲಿ ಕುಳಿತು ಮಾಡುತ್ತಿದ್ದ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಂಧಿತ ಶಂಕಿತ ಉಗ್ರನ ಮನೆಯಲ್ಲಿ 4 ಗ್ರೆನೇಡ್ ಪತ್ತೆ, ಸಿಸಿಬಿ ಶಾಕ್
2017 ರಲ್ಲಿ ಕೊಲೆ ಕೇಸ್, 2020 ರಲ್ಲಿ ರಕ್ತ ಚಂದನ ಕೇಸ್, 2021ರಲ್ಲಿ ಎರಡು ಬಾರಿ ದರೋಡೆಗೆ ಸಂಚು ಕೇಸ್ನಲ್ಲಿ ಜೈಲು ಸೇರಿದ್ದ. ನಂತರ ಜೈಲಿನಿಂದ ಹೊರ ಬಂದ ಜುನೈದ್ ನಾಪತ್ತೆ ಆಗಿದ್ದ, ಜುನೈದ್ ಮಿಡಲ್ ಈಸ್ಟ್ನ ಒಂದು ದೇಶದಲ್ಲಿ ಕುಳಿತು ಏನು ಏನು ಮಾಡಬೇಕು ಎಂದು ಮಾಹಿತಿ ನೀಡುತ್ತಿದ್ದ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:08 pm, Thu, 20 July 23