ಬೆಂಗಳೂರು: ಸದಾಶಿವ ನಗರದಲ್ಲಿ ರೇಂಜ್ ರೋವರ್ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ (rikki rai) ಮತ್ತೆ ಸಂಕಷ್ಟ ಎದುರಾಗಿದೆ. ಬರೋಬ್ಬರಿ ಒಂದು ವರ್ಷ ನಾಲ್ಕು ತಿಂಗಳ ಬಳಿಕ ರಿಕ್ಕಿ ರೈ ಹಾಗೂ ಐವರ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ ಮಾಡಲಾಗಿದೆ. 2021 ಅಕ್ಟೋಬರ್ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ್ ನಾಯ್ಡು ಎಂಬುವವರಿಗೆ ಸೇರಿದ್ದ 3 ಕೋಟಿ ಬೆಲೆ ಬಾಳುವ ರೇಂಜ್ ರೋವರ್ ಕಾರಿಗೆ ಬೆಂಕಿ ಹಚ್ಚಲಾಗಿತ್ತು. ಹಣಕಾಸು ವ್ಯವಹಾರದ ವೈಶ್ಯಮದ ಹಿನ್ನೆಲೆ, ರಿಕ್ಕಿ ರೈ ಅಣತಿಯಂತೆ ದುಷ್ಕರ್ಮಿಗಳು ಶ್ರೀನಿವಾಸ್ ನಾಯ್ಡು ಕಾರಿಗೆ ಬೆಂಕಿ ಹಚ್ಚಿದ್ದರು. ಸದಾಶಿವನಗರ ಠಾಣೆ ಪೊಲೀಸರು ರಿಕ್ಕಿ ರೈ ಸೇರಿದಂತೆ ಆರು ಜನರನ್ನು ಬಂಧನ ಮಾಡಿದ್ದರು.
ಇದನ್ನೂ ಓದಿ: Crime News ಉದ್ಯಮಿ ಶ್ರೀನಿವಾಸನಾಯ್ಡು ಕಾರು ಸುಟ್ಟ ಪ್ರಕರಣ: ಸದಾಶಿವನಗರ ಪೊಲೀಸರಿಂದ ಐವರು ಆರೋಪಿಗಳ ಬಂಧನ
ಶ್ರೀನಿವಾಸ್, ರಿಕ್ಕಿ ರೈಗೆ ಸೇರಿದ ವೈಟ್ ಫೀಲ್ಡ್ ಬಳಿಯ ಜಾಗ ಅಭಿವೃದ್ಧಿ ಮಾಡಿದ್ದರು. ಶ್ರೀನಿವಾಸ್ ನಾಯ್ಡು ಜಾಗ ಅಭಿವೃದ್ಧಿ ಕಾರ್ಯಕ್ಕೆ 1.5 ಕೋಟಿ ಫೀಸ್ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಕಿರಿಕ್ ನಡೆದಿತ್ತು. ಇದೇ ವಿಚಾರಕ್ಕೆ ಸುಪಾರಿ ನೀಡಿ ಕೃತ್ಯ ಎಸಗಿದ್ದಾರೆಂದು ಶ್ರೀನಿವಾಸ್ ನಾಯ್ಡು ಈ ಹಿಂದೆ ದೂರು ಸಲ್ಲಿಸಿದ್ದರು. ನಾರಾಯಣ್ ಎಂಬುವವರ ಮೂಲಕ ಸಂಚು ರೂಪಿಸಿ ಕೃತ್ಯ ಎಸಗಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಬೇರೆ ಬೇರೆ ಅಪರಿಚಿತ ವ್ಯಕ್ತಿಗಳಿಂದ ಕರೆ ಮಾಡಿ ಜೀವ ಬೆದರಿಕೆ ಹಾಕಲಾಗಿತ್ತು. ರಿಕ್ಕಿ ರೈ, ನಾರಾಯಣ ಹಾಗೂ ಬಂಧಿತರ ವಿರುದ್ಧ ಕೈಗೊಳ್ಳುವಂತೆ ಮನವಿ ಮಾಡಿ ಶ್ರೀನಿವಾಸ್ ದೂರು ದಾಖಲಿಸಿದ್ದರು.
ಇದನ್ನೂ ಓದಿ: ರೇಂಜ್ ರೋವರ್ ಕಾರಿಗೆ ಬೆಂಕಿ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ ದೂರು ದಾಖಲಿಸಿದ ಉದ್ಯಮಿ ಶ್ರೀನಿವಾಸ್ ನಾಯ್ಡು
ಕಾರು ಬೆಂಕಿ ಹಚ್ಚಿದ್ದ ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕೇಸಿನ ತನಿಖೆ ವೇಳೆ ಐವರು ಆರೋಪಿಗಳನ್ನ ಸದಾಶಿವನಗರ ಪೊಲೀಸರು ಬಂಧಿಸಿದ್ದರು. ಸಂಚು ರೂಪಿಸಿ ತನ್ನ ಮನೆಯ ಕಾರಿಗೆ ಬೆಂಕಿ ಹಾಕಿ ಬೆದರಿಕೆ ಹಾಕಿರುವ ಆರೋಪ ಹಿನ್ನಲೆ ರಿಕ್ಕಿ ರೈ ಬಂಧಿಸಬೇಕೆಂದು ದೂರು ಸಲ್ಲಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:24 am, Mon, 20 February 23