Bengaluru: ರಾಜಧಾನಿಗೆ ಬರಲಿವೆ ಇನ್ನಷ್ಟು ಕಸ ಗುಡಿಸುವ ಟ್ರಕ್​ಗಳು; ಏನಿದರ ವಿಶೇಷ? ಇಲ್ಲಿದೆ ನೋಡಿ

ಬೆಂಗಳೂರು ನಗರದ ರಸ್ತೆಗಳಲ್ಲಿ ದೂಳು ಮತ್ತು ಕಸ ಹೆಚ್ಚುತ್ತಿದ್ದು, ಸ್ವಚ್ಛವಾಗಿಡಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಕಸಗುಡಿಸುವ ಯಂತ್ರಗಳ ಮೊರೆ ಹೋಗಿದೆ. ಈಗಾಗಲೇ ಬಿಬಿಎಂಪಿ ಬಳಿ ಕಸ ಗುಡಿಸುವ ಯಂತ್ರಗಳಿದ್ದರೂ ಅವು ಸಾಕಾಗುತ್ತಿಲ್ಲ. ಈ ಸಂಬಂಧ ಬಿಬಿಎಂಪಿ ಹೊಸದಾಗಿ, ಹೆಚ್ಚಿನ ಯಂತ್ರಗಳನ್ನು ಖರೀದಿಸಲು ಚಿಂತನೆ ನಡೆಸಿದೆ.

Bengaluru: ರಾಜಧಾನಿಗೆ ಬರಲಿವೆ ಇನ್ನಷ್ಟು ಕಸ ಗುಡಿಸುವ ಟ್ರಕ್​ಗಳು; ಏನಿದರ ವಿಶೇಷ? ಇಲ್ಲಿದೆ ನೋಡಿ
ಕಸ ಗುಡಿಸುವ ಯಂತ್ರ
Follow us
ವಿವೇಕ ಬಿರಾದಾರ
|

Updated on:Feb 20, 2023 | 11:37 AM

ಬೆಂಗಳೂರು: ದಿನದಿಂದ ದಿನಕ್ಕೆ ಸಿಲಿಕಾನ್​ ಸಿಟಿ ಬೆಳೆಯುತ್ತಿದೆ. ನಗರದ ರಸ್ತೆಗಳಲ್ಲಿ ದೂಳು ಮತ್ತು ಕಸ ಹೆಚ್ಚುತ್ತಿದ್ದು, ಸ್ವಚ್ಛವಾಗಿಡಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಕಸಗುಡಿಸುವ ಯಂತ್ರಗಳ ಮೊರೆ ಹೋಗಿದೆ. ಈಗಾಗಲೇ ಬಿಬಿಎಂಪಿ (BBMP) ಬಳಿ ಕಸ ಗುಡಿಸುವ ಯಂತ್ರಗಳಿದ್ದರೂ ಅವು ಸಾಕಾಗುತ್ತಿಲ್ಲ. ಈ ಸಂಬಂಧ ಬಿಬಿಎಂಪಿ ಹೊಸದಾಗಿ, ಹೆಚ್ಚಿನ ಯಂತ್ರಗಳನ್ನು ಖರೀದಿಸಲು ಚಿಂತನೆ ನಡೆಸಿದೆ.

ಬಿಬಿಎಂಪಿ ಹೆಚ್ಚಿಗೆ 25 ಕಸ ಗುಡಿಸುವ ಯಂತ್ರಗಳನ್ನು ಖರೀದಿಸಲು ಟೆಂಡರ್​ ಕರೆಯಲಿದೆ. ನಗರದಲ್ಲಿ 1,940 ಕಿ ಮೀ ರಸ್ತೆ ಮತ್ತು ಉಪರಸ್ತೆಗಳಿದ್ದು ಪ್ರಸ್ತುತ ಬಿಬಿಎಂಪಿ ಬಳಿ ಇರುವ 27 ಕಸಗುಡಿಸುವ ಯಂತ್ರಗಳಿಂದ ಈ ಎಲ್ಲ ರಸ್ತೆಗಳ ಕಸಗುಡಿಸಲು ಸಾಧ್ಯವಾಗುತ್ತಿಲ್ಲ. ಬಿಬಿಎಂಪಿ ಪ್ರಕಾರ ಬೆಂಗಳೂರಿಗೆ ಬರೊಬ್ಬರಿ 200 ಕಸಗುಡಿಸುವ ಯಂತ್ರಗಳು ಬೇಕಿವೆ.

ಈ ಬಗ್ಗೆ ಘನ ತ್ಯಾಜ್ಯ ವಿಲೇವಾರಿ ಘಟಕದ ವಿಶೇಷ ಆಯುಕ್ತ ಹರೀಶ್ ಕುಮಾರ್​ ಮಾತನಾಡಿ ನಾವು ಈಗಾಗಲೇ 25 ಯಂತ್ರಗಳನ್ನು ಕೊಂಡುಕೊಳ್ಳಲು ಟೆಂಡರ್​ ಕರೆಯಲಿದ್ದೇವೆ. ಒಂದು ಯಂತ್ರ 6 ರಿಂದ 8 ಗಂಟೆಗಳಲ್ಲಿ 40 ಕಿ ಮೀ ರಸ್ತೆಯನ್ನು ಗುಡಿಸುತ್ತದೆ. ಈಗ ಹೆಚ್ಚಿನ ಯಂತ್ರಗಳು ಬರುವುದರಿಂದ ಹೆಚ್ಚಿನ ನಗರಗಳನ್ನು ತಲುಪಲು ಸಾಧ್ಯವಾಗುತ್ತದೆ ಎಂದರು.

ಒಂದು ಯಂತ್ರಕ್ಕೆ 2 ಕೋಟಿ ರೂ. ಇದ್ದು, ಸದ್ಯ 70 ಕೋಟಿ ರೂ. ಟೆಂಡರ್​ ಇದ್ದು, ಇದರಲ್ಲಿ ಯಂತ್ರದ ನಿರ್ವಹಣೆ ಕೂಡ ಒಳಗೊಂಡಿದೆ. ಪ್ರತಿ ಕಸ ಗುಡಿಸುವ ಯಂತ್ರ (ಟ್ರಕ್​) 5 ರಿಂದ 6 ಕ್ಯೂಬಿಕ್​ ಮೀಟರ್​ ಕಸ ಮತ್ತು ಎಲೆಗಳನ್ನು ಸಂಗ್ರಹಣೆ ಮಾಡಿಕೊಳ್ಳುತ್ತದೆ. 1 ಕ್ಯೂಬಿಕ್​ ಮಿಟರ್​ ಅಂದ್ರೆ 900 ಕೇಜಿ ಎಷ್ಟು ಕಸವನ್ನು ಶೇಖರಣೆ ಮಾಡಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿದೆ.

ಪ್ರಸ್ತುತ ಇರುವ ಯಂತ್ರಗಳು 100 ಟನ್​ಗಳಷ್ಟು ದೂಳನ್ನು ಶೇಖರಣೆ ಮಾಡಿಕೊಳ್ಳುತ್ತವೆ. ಈ ಯಂತ್ರಗಳ ಮೂಲಕ ಮುಖ್ಯ ರಸ್ತೆಗಳಲ್ಲಿ ಮಾತ್ರ ಕಸ ಗುಡಿಸಲು ಸಾಧ್ಯವಾಗುತ್ತಿದೆ. ಯಂತ್ರಗಳು ಕಡಿಮೆ ಇರುವ ಕಾರಣ ಉಪ ರಸ್ತೆಗಳಲ್ಲಿ ಕಸ ಗುಡಿಸಲು ಸಾಧ್ಯವಾಗುತ್ತಿಲ್ಲವಾಗಿದ್ದು, ಅಲ್ಲಿ ಪೌರಕಾರ್ಮಿಕರು ಕಸ ಗುಡಿಸುತ್ತಿದ್ದಾರೆ. ಹೀಗಾಗಿ ರಾಜಧಾನಿಗೆ 200 ಯಂತ್ರಗಳು ಅವಶ್ಯಕತೆ ಇದೆ.

ನಗರವು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಹಾಗೆ ಮಾಲಿನ್ಯ ಕೂಡ ಹೆಚ್ಚುತ್ತಿದೆ. ಈ ಹಿನ್ನೆಲೆ ವಾಯು ಗುಣಮಟ್ಟವನ್ನು ಸುಧಾರಿಸುವತ್ತ ಗಮನಹರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಬಿಎಂಪಿಗೆ ಸೂಚನೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 am, Mon, 20 February 23