ಬೆಂಗಳೂರು: ಅಮೆಜಾನ್ (Amazon) ಗೋಡೌನ್ ಮಾಡಿ ಬಾಡಿಗೆ ಕೊಡುತ್ತೇನೆ ಎಂದು ವಂಚಿಸಿದ್ದ ಅರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ವಿ ಎಂಬಾತನನ್ನು ಈಶಾನ್ಯ ವಿಭಾಗದ ಸಿಇಎನ್ (CEN) ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ಅಂಗಡಿಗೆ ಬಂದು ಅಂಗಡಿಯ ಒಂದು ಭಾಗವನ್ನು ಗೋಡೌನ್ ಮಾಡುತ್ತೇವೆ, ಬಾಡಿಗೆಗೆ ಕೊಡಿ ಎಂದಿದ್ದ. ಬಳಿಕ ಅದಕ್ಕೆ ಆ್ಯಪ್ ಮೂಲಕ ಕೆವೈಸಿ ಮಾಡಬೇಕು ಎಂದು ಮಾಲೀಕರ ಮೊಬೈಲ್ ಪಡೆದಿದ್ದ. ಬಳಿಕ ಲೋನ್ (Loan) ಪಡೆಯುವ ಪೋಸ್ಟ್ ಪೇ ಎಂಬ ಆ್ಯಪ್ ಇನ್ಸ್ಟಾಲ್ ಮಾಡಿ ವಂಚಿಸಿದ್ದಾನೆ.
ಬಂಧಿತ ಆರೋಪಿ ಆ್ಯಪ್ ಮೂಲಕ ನಲವತ್ತು ಸಾವಿರ ಹಾಗು ಪೇಟಿಯಮ್ ಮೂಲಕ ಒಂಬತ್ತು ಸಾವಿರ ಸಾಲ ಪಡೆದು ಹಣ ವರ್ಗಾವಣೆ ಮಾಡಿಕೊಂಡಿದ್ದ. ಸಾಲ ಕಟ್ಟುವಂತೆ ನೋಟೀಸ್ ಬಂದಾಗ ಕೃತ್ಯ ಎಸಗಿರುವುದು ಬಯಲಿಗೆ ಬಂದಿದೆ. ಅರೋಪಿ ಅಮೆಜಾನ್ ಕಂಪನಿಯಲ್ಲಿ ಸೆಲ್ಲರ್ ಮತ್ತು ಬೋರ್ಡಿಂಗ್ ಎಕ್ಸಿಕ್ಯುಟಿವ್ ಅಗಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುತ್ತಿದ್ದ ಕಂಪನಿಯ ಹೆಸರಲ್ಲೆ ವಂಚನೆ ಮಾಡಿದ್ದು, ಸದ್ಯ ಅರೋಪಿಯನ್ನು ಬಂಧಿಸಿ, ಆತನ ಬಳಿಯಿದ್ದ ಮೂವತ್ತು ಸಾವಿರ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಕಲಿ ಮದ್ಯ ತಯಾರಿಸುತ್ತಿದ್ದ ಮನೆ ಮೇಲೆ ದಾಳಿ
ನಕಲಿ ಮದ್ಯ ತಯಾರಿಸುತ್ತಿದ್ದ ಮನೆ ಮೇಲೆ ದಾಳಿ ನಡೆಸಿ, ಇಬ್ಬರನ್ನು ಬಂಧಿಸಲಾಗಿದೆ. ಮೈಸೂರು ತಾಲೂಕಿನ ಗೊರೂರು ಗ್ರಾಮದ ಬಳಿ ಬಂಧಿಸಲಾಗಿದ್ದು, ಮದ್ಯ ತಯಾರಿಕೆಗೆ ಬಳಸುತ್ತಿದ್ದ ಯಂತ್ರೋಪಕರಣ, ಸ್ಪಿರಿಟ್ನ ಅರಣ್ಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರೋಪಿಗಳು ತುಮಕೂರಿನಲ್ಲಿ ಕಡಿಮೆ ಬೆಲೆಗೆ ನಕಲಿ ಮದ್ಯ ಮಾರಾಟ ಮಾಡುತ್ತಿದ್ದರು. ನಕಲಿ ಮದ್ಯ ಸರಬರಾಜುದಾರ ನೀಡಿದ ಮಾಹಿತಿಯನ್ನು ಆಧರಿಸಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ
KL Rahul: ದಾಖಲೆಯ ಮೊತ್ತಕ್ಕೆ ಕೆಎಲ್ ರಾಹುಲ್ರನ್ನು ಖರೀದಿಸಿದ ಲಖನೌ: ಹಾರ್ದಿಕ್ ಕೂಡ ಸೇಲ್
ಚಿತ್ರದುರ್ಗದಲ್ಲಿ ಬಲವಂತವಾಗಿ ಮತಾಂತರ ಮಾಡಿರುವ ಆರೋಪ! ಹೆಂಡತಿ, ಮಾವನ ವಿರುದ್ಧ ದೂರು ದಾಖಲು
Published On - 8:55 am, Sat, 22 January 22