ಬೆಂಗಳೂರು: ಬಾಡಿಗೆಗೆ ಕ್ಯಾಮೆರಾ (Camera) ಪಡೆಯಲು ಬಂದು ವಂಚಿಸುತ್ತಿದ್ದ ಆರೋಪಿಯನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಪುರುಷೋತ್ತಮ್ ಬಂಧಿತ ಆರೋಪಿ. ಫೆಬ್ರವರಿ 22 ಚಂದ್ರಾಲೇಔಟಿನ ಇನ್ಫೆನೆಟ್ ವಿಂಗ್ ಫೋಟೋ ಸ್ಟುಡಿಯೋದಲ್ಲಿ (Photo Studio) ಕಳ್ಳತನ ನಡೆದಿತ್ತು. ಸೋನಿ ಎಸ್ 7 ಕ್ಯಾಮೆರಾ ಪಡೆದು ಕ್ಲಾರಿಟಿ ಪರಿಶೀಲಿಸುವುದಾಗಿ ಆರೋಪಿ ಹೇಳಿದ್ದ. ಹೊರಗಡೆ ಫೋಟೋ ಕ್ಲಿಕ್ಕಿಸುವುದಾಗಿ ಹೇಳಿ ಪರಾರಿಯಾಗಿದ್ದ. ಈ ಬಗ್ಗೆ ಫೋಟೋ ಸ್ಟುಡಿಯೋ ಮಾಲೀಕ ಚೇತನ್ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದ. ದೂರಿನನ್ವಯ ಆರೋಪಿಯನ್ನು ಬಂಧಿಸಿ, 3.65 ಲಕ್ಷ ಮೌಲ್ಯದ ವಿವಿಧ ಕ್ಯಾಮೆರಾಗಳನ್ನು ವಶಕ್ಕೆ ಪಡೆದಿದ್ದಾರೆ.
ಗಾಂಜಾ ಮಾರುತ್ತಿದ್ದವರು ಅರೆಸ್ಟ್!:
ದ್ವಿಚಕ್ರ ವಾಹನದಲ್ಲಿಟ್ಟುಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಜೆ.ಜೆ.ನಗರ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮನ್ಸೂರ್ ಹಾಗೂ ಅಲಿಬಾ ಬಂಧಿತರು. ಬಂಧಿತ ಮನ್ಸೂರ್ ನೀಡಿದ ಮಾಹಿತಿ ಮೇರೆಗೆ ಅಲಿಬಾ ಎಂಬಾತನ ಬಂಧನವಾಗಿದೆ. ಬಂಧಿತರಿಂದ 32 ಕೆ.ಜಿ 40 ಗ್ರಾಂ ಗಾಂಜಾ, 1 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ನೆಲಮಂಗಲದಲ್ಲಿ ಚಿನ್ನಾಭರಣಗಳು ಕಳವು:
ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಮನೆ ಕಿಟಕಿ ರಾಡ್ ಮುರಿದು ಕಳ್ಳತನ ನಡೆಸಿದ್ದಾರೆ. ನಾರಯಣಪ್ಪ ಅವರಿಗೆ ಸೇರಿದ ಮನೆಯಲ್ಲಿ ಈ ಕೃತ್ಯ ನಡೆದಿದ್ದು, 2 ಲಕ್ಷ ಬೆಲೆಬಾಳುವ ಚಿನ್ನಾಭರಣಗಳು ಕಳುವಾಗಿದೆ. ತುಮಕೂರಿನ ಸಂಬಂಧಿ ಮನೆಗೆ ತೆರಳಿ ವಾಪಸ್ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ
Health Tips: ಆರೋಗ್ಯ ವೃದ್ಧಿಸುವ ನೀಲಿ ಶಂಖಪುಷ್ಪ: ಇಲ್ಲಿದೆ ಉಪಯುಕ್ತ ಮಾಹಿತಿ