ಡ್ರಗ್ಸ್ ಸಂಬಂಧ ಪೊಲೀಸರಿಗೆ ಇನ್ ಫಾರ್ಮರ್ ಆಗಿದ್ದವನ ಬಳಿಯೇ ಡ್ರಗ್ಸ್ ಪತ್ತೆ, ಪೊಲೀಸರ ಮೇಲೂ ಅನುಮಾನ

| Updated By: ಆಯೇಷಾ ಬಾನು

Updated on: Sep 03, 2021 | 9:04 AM

ಪೊಲೀಸ್ ಇನ್ ಫಾರ್ಮರ್ ನೆಪದಲ್ಲಿ ರತನ್ ಲಾಲ್ ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿದ್ದ ಆರೋಪ ಕೇಳಿ ಬಂದಿದ್ದು ಈ ಸಂಬಂಧ ರತನ್ ಲಾಲ್ನಿಂದ ಸುಲಿಗೆಗೊಳಗಾದವರು ಮತ್ತಷ್ಟು ದೂರು ದಾಖಲಿಸುವ ಸಾಧ್ಯತೆ ಇದೆ. ಕಾಮಾಕ್ಷಿ ಪಾಳ್ಯ ಪೊಲೀಸರು ಕೆ.ಎಸ್.ಲೇಔಟ್ ಪೊಲೀಸರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಡ್ರಗ್ಸ್ ಸಂಬಂಧ ಪೊಲೀಸರಿಗೆ ಇನ್ ಫಾರ್ಮರ್ ಆಗಿದ್ದವನ ಬಳಿಯೇ ಡ್ರಗ್ಸ್ ಪತ್ತೆ, ಪೊಲೀಸರ ಮೇಲೂ ಅನುಮಾನ
ಗಾಂಜಾ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಪೊಲೀಸ್ ಇನ್ ಫಾರ್ಮರ್ ಆಗಿದ್ದ ರತನ್ ಲಾಲ್ ಬಳಿ ಸಿಂಥೆಟಿಕ್, ನಾನ್ ಸಿಂಥೆಟಿಕ್ ಡ್ರಗ್, ಎಕ್ಸ್ ಟೆಸಿ, ಎಂಡಿಎಂಎ, ಅಪೀಮು, ಗಾಂಜಾ ಪತ್ತೆಯಾಗಿದೆ. ಈತ ಗಾಂಜಾ ಕೇಸ್ ಸಂಬಂಧ ಕೆ.ಎಸ್.ಲೇಔಟ್ ಪೊಲೀಸರಿಗೆ ಇನ್ ಫಾರ್ಮರ್ ಆಗಿ ಮಾಹಿತಿದಾರನಾಗಿದ್ದ. ಆದ್ರೆ ಈಗ ಇವನ ಬಳಿಯೇ ಡ್ರಗ್ಸ್ ಪತ್ತೆಯಾಗಿದೆ.

ಸದ್ಯ ಪೊಲೀಸರು ಇನ್ ಫಾರ್ಮಾರ್ ಅಸಲಿಯತ್ತು ಪತ್ತೆಗೆ ವಿಚಾರಣೆ ಆರಂಭಿಸಿದ್ದಾರೆ. ಪೊಲೀಸ್ ಇನ್ ಫಾರ್ಮಾರ್ ಆಗಿದ್ದ ರತನ್ ಲಾಲ್ ಒಂದೊಂದು ಅಸಲಿಯತ್ತು ಬೆಳಕಿಗೆ ಬರುತ್ತಿದೆ. ರತನ್ ಲಾಲ್ ಬಳಿ ಮಾದಕ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಇದೇ ರತನ್ ಲಾಲ್ ಮಾಹಿತಿ ಆಧರಿಸಿ ಭರತ್ ಕರೆದೊಯ್ಯಲು ಕೆ.ಎಸ್. ಲೇಔಟ್ ಪೊಲೀಸರು ಬಂದಿದ್ದರು. ಹೀಗಾಗಿ ಪೊಲೀಸರ ಮೇಲೂ ಶಂಕೆ ವ್ಯಕ್ತವಾಗಿದೆ.

ಪೊಲೀಸ್ ಇನ್ ಫಾರ್ಮರ್ ನೆಪದಲ್ಲಿ ರತನ್ ಲಾಲ್ ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿದ್ದ ಆರೋಪ ಕೇಳಿ ಬಂದಿದ್ದು ಈ ಸಂಬಂಧ ರತನ್ ಲಾಲ್ನಿಂದ ಸುಲಿಗೆಗೊಳಗಾದವರು ಮತ್ತಷ್ಟು ದೂರು ದಾಖಲಿಸುವ ಸಾಧ್ಯತೆ ಇದೆ. ಕಾಮಾಕ್ಷಿ ಪಾಳ್ಯ ಪೊಲೀಸರು ಕೆ.ಎಸ್.ಲೇಔಟ್ ಪೊಲೀಸರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಪುರುಷರ ಟಾಯ್ಲೆಟ್​ನಲ್ಲಿ ಅಡಗಿ ಕುಳಿತಿದ್ದ ಡ್ರಗ್ಸ್​ ಆರೋಪಿ ಸೋನಿಯಾ; ಕಡೆಗೂ​ ಪೊಲೀಸ್​ ಬಲೆಗೆ ಬಿದ್ದ ಮಾಡೆಲ್​