Supari For Robbery | ದಿಢೀರ್ ದುಡ್ಡು ಮಾಡಲು ಕಳ್ಳದಾರಿ ಹಿಡಿದು ಸುಪಾರಿ ಕೊಟ್ಟು ಚಿನ್ನದ ಗಟ್ಟಿ ದೋಚಿಸಿದ್ದ ಕಿಲಾಡಿ ಅರೆಸ್ಟ್
ಅಂಗಡಿ ಹಾಗೂ ಏರಿಯಾ ಚಿಕ್ಕದಾಗೇ ಇದ್ರೂ ಇಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತೆ. ಇಂತಹ ಏರಿಯಾದಲ್ಲೇ ಗಣೇಶ್ ಕಾರ್ಪ್ ಗೋಲ್ಡ್ ಎಂಬ ಸ್ಟೋರ್ನಲ್ಲಿ 2 ತಿಂಗಳ ಹಿಂದೆ ಕಳ್ಳತನ ನಡೆದಿತ್ತು.
ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರತ್ ಪೇಟೆಯಲ್ಲಿ ಚಿನ್ನದ ಗಟ್ಟಿಗಳನ್ನೆ ಮಾರಾಟ ಮಾಡುವ ಒಂದಷ್ಟು ವ್ಯಾಪಾರಿಗಳಿದ್ದಾರೆ. ಅಂಗಡಿ ಹಾಗೂ ಏರಿಯಾ ಚಿಕ್ಕದಾಗೇ ಇದ್ರೂ ಇಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತೆ. ಇಂತಹ ಏರಿಯಾದಲ್ಲೇ ಗಣೇಶ್ ಕಾರ್ಪ್ ಗೋಲ್ಡ್ ಎಂಬ ಸ್ಟೋರ್ನಲ್ಲಿ 2 ತಿಂಗಳ ಹಿಂದೆ ಕಳ್ಳತನ ನಡೆದಿತ್ತು. ಈ ಕಳ್ಳತನ ಕೇಸ್ ಬೆನ್ನತ್ತಿದ ಪೊಲೀಸರು ಇಂಟ್ರೆಸ್ಟಿಂಗ್ ಕಹಾನಿ ರಿವೀಲ್ ಮಾಡಿದ್ದಾರೆ.
ಕಳ್ಳತನಕ್ಕೆ ಸುಪಾರಿ ಕೊಟ್ಟಿದ್ದ ಪೊಲೀಸ್ ಇನ್ಫಾರ್ಮರ್
ಈ ಸ್ಟೋರಿಯ ವಿಲನ್ ಸುನಿಲ್ ಮಾಲಿ. ಇವನು ಬೆಂಗಳೂರಿನ ಹಲವು ಪೊಲೀಸ್ ಅಧಿಕಾರಿಗಳಿಗೆ ಚಿರಪರಿಚಿತ. ಯಾಕಂದ್ರೆ ಈ ಸುನಿಲ್ ಓರ್ವ ಚಿನ್ನದ ಗಟ್ಟಿಯನ್ನ ಮಾರಾಟ ಮಾಡುವ ವ್ಯಕ್ತಿ. ಅಲ್ದೆ, ಪೊಲೀಸ್ ಇನ್ಫಾರ್ಮರ್ ಕೂಡ. ಹೀಗಿದ್ದವನು ಗಣೇಶ್ ಎಂಬಾತನ ಬಳಿ ಹಲವು ವರ್ಷಗಳಿಂದ ವ್ಯವಹಾರ ಮಾಡಿಕೊಂಡು ಬರ್ತಿದ್ದ. ಆದ್ರೆ, ಅತಿಯಾಸೆಗೆ ಬಿದ್ದ ಈತ ಗಣೇಶ್ ಬಳಿ ಇರುವ ಚಿನ್ನ ಎಗರಿಸಲು ಸ್ಕೆಚ್ ಹಾಕಿದ್ದ. ಈ ಕಳ್ಳತನ ತಾನು ಮಾಡಿದ್ರೆ ಲಾಕ್ ಆಗ್ತೀನಿ ಅಂತಾ ರಾಜಸ್ಥಾನದ ರಾಜೇಂದ್ರ ಌಂಡ್ ಟೀಮ್ಗೆ ಸುಪಾರಿ ಕೊಟ್ಟಿದ್ದಾನೆ. ಇಬ್ಬರು ಅರ್ಧ ಅರ್ಧ ಶೇರ್ ಮಾಡಿಕೊಳ್ಳುವ ಡೀಲ್ ಮಾಡಿಕೊಳ್ತಾರೆ. ಅದ್ರಂತೆ, ಕಳೆದ ಎರಡು ತಿಂಗಳ ಹಿಂದೆ ಚಿನ್ನದಂಗಡಿಯ ಬೀಗವನ್ನ ಗ್ಯಾಸ್ ಕಟರ್ನಿಂದ ಕಟ್ ಮಾಡಿದ್ದಾರೆ. ನಂತ್ರ 700 ಗ್ರಾಂಗೂ ಹೆಚ್ಚು ತೂಕದ ಚಿನ್ನದ ಗಟ್ಟಿ, ಒಂದು ಕೆಜಿ ಬೆಳ್ಳಿ ಹಾಗೂ ಒಂದು ಲಕ್ಷದ 15 ಸಾವಿರ ಹಣ ದೋಚಿದ್ರು.
ಈ ಕೇಸ್ ಬೆನ್ನತ್ತಿದ ಪೊಲೀಸರು ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಮೊದ್ಲು ಸುನಿಲ್ನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಗೊತ್ತಾಗಿದೆ. ಅಲ್ದೆ ಸುನಿಲ್ ಮತ್ತು ಸುಪಾರಿ ಗ್ಯಾಂಗ್ ಸೇರಿ 9 ಜನ್ರನ್ನ ಪೊಲಿಸರು ಬಂಧಿಸಿ, ಜೈಲಲ್ಲಿ ಕಂಬಿ ಲೆಕ್ಕಹಾಕಲು ಬಿಟ್ಟಿದ್ದಾರೆ.