ಬೆಂಗಳೂರು: ರಾಷ್ಟ್ರಕವಿ ಕುವೆಂಪು ಸೊಸೆ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ನಿಧನ

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ ಪದವಿ ಇವರು, 1966ರಲ್ಲಿ ಪೂರ್ಣಚಂದ್ರ ತೇಜಸ್ವಿ ಜೊತೆ ವಿವಾಹವಾಗಿದ್ದರು. "ನನ್ನ ತೇಜಸ್ವಿ" ರಾಜೇಶ್ವರಿ ಅವರ ಮೊಟ್ಟ ಮೊದಲ ಪುಸ್ತಕವಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ನ ತೋಟದ ಮನೆಯಲ್ಲಿ ವಾಸವಾಗಿದ್ದ ರಾಜೇಶ್ವರಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Follow us
| Updated By: preethi shettigar

Updated on:Dec 14, 2021 | 2:37 PM

ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾಷ್ಟ್ರಕವಿ ಕುವೆಂಪು ಸೊಸೆ ರಾಜೇಶ್ವರಿ ತೇಜಸ್ವಿ (85) ನಿಧನರಾಗಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ತೇಜಸ್ವಿ ಇಂದು (ಡಿಸೆಂಬರ್ 14) ಕೊನೆಯುಸಿರೆಳೆದಿದ್ದಾರೆ. ಖ್ಯಾತ ಕವಿ, ಸಾಹಿತಿ ಪೂರ್ಣಚಂದ್ರ ತೇಜಸ್ವಿ (Poornachandra Tejaswi) ಅವರ ಪತ್ನಿ ರಾಜೇಶ್ವರಿಯವರು 1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಜನಿಸಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಆನರ್ಸ್‌ ಮತ್ತು ಎಂಎ ಓದುತ್ತಿದ್ದಾಗ ಪೂರ್ಣಚಂದ್ರ ತೇಜಸ್ವಿ ಅವರ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿ 1966ರಲ್ಲಿ ವಿವಾಹವಾಗಿದ್ದರು. 

ಹೊಲಿಗೆ, ಅಂಚೆಚೀಟಿ ಸಂಗ್ರಹ, ಕ್ರೋಶ ಹಾಕುವುದು ರಾಜೇಶ್ವರಿ ಅವರ ನೆಚ್ಚಿನ ಹವ್ಯಾಸವಾಗಿತ್ತು. ರಾಜೇಶ್ವರಿ ಅವರು ಬರೆದಿರುವ ‘ನನ್ನ ತೇಜಸ್ವಿ’ ಪುಸ್ತಕ ಈವರೆಗೆ ಐದು ಮುದ್ರಣಗಳನ್ನು ಕಂಡಿದೆ. ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಎನ್ನುವ ಅವರ ಮತ್ತೊಂದು ಪುಸ್ತಕವೂ ಜನಪ್ರಿಯವಾಗಿದೆ.

ಮೂಡಿಗೆರೆ ತಾಲ್ಲೂಕಿನ ಕಾಫಿತೋಟ ಮತ್ತು ಮನೆ ‘ನಿರುತ್ತರ’ದಲ್ಲಿ ತೇಜಸ್ವಿ ಅವರೊಂದಿಗೆ ವಾಸವಿದ್ದರು. ತೇಜಸ್ವಿ ನಿಧನದ ನಂತರವೂ ಅಲ್ಲಿಯೇ ವಾಸವಿದ್ದ ರಾಜೇಶ್ವರಿ ಅವರು ತೇಜಸ್ವಿ ಅವರ ಕೃಷಿ, ಸಾಹಿತ್ಯ ಹಾಗೂ ಹತ್ತಾರು ಹವ್ಯಾಸಗಳಿಗೆ ಹೆಗಲೆಣೆಯಾಗಿದ್ದವರು.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ನ ತೋಟದ ಮನೆಯಲ್ಲಿ ವಾಸವಾಗಿದ್ದ ರಾಜೇಶ್ವರಿ, ಇಬ್ಬರು ಪುತ್ರಿಯರನ್ನು ಇಂದು  ಅಗಲಿದ್ದಾರೆ.  ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್​ನ ಪುತ್ರಿ ಸುಶ್ಮಿತಾ ಅವರ ಮನೆಯಲ್ಲಿ ಸಂಜೆ 5:30ವರೆಗೆ  ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ದೇಹದಾನ ಮಾಡಲು ಕುಟುಂಬ ನಿರ್ಧರಿಸಿದೆ.

ರಾಜೇಶ್ವರಿ ತೇಜಸ್ವಿ ನಿಧನಕ್ಕೆ ಸಂತಾಪ ಸೂಚಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೇಶ್ವರಿ ತೇಜಸ್ವಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಖ್ಯಾತ ಸಾಹಿತಿ ದಿವಂಗತ ಪೂರ್ಣಚಂದ್ರ ತೇಜಸ್ವಿಯವರ ಧರ್ಮಪತ್ನಿ ಶ್ರೀಮತಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರ ನಿಧನ ವಾರ್ತೆ ತಿಳಿದು ತುಂಬಾ ದುಃಖವಾಗಿದೆ. ಸರಳರು, ಸಹೃದಯಿಗಳು ಆಗಿದ್ದ ರಾಜೇಶ್ವರಿ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಹಾಗೂ ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಆರೋಗ್ಯವಾಗಿದ್ದ ರಾಜೇಶ್ವರಿ ಸಾವು ನೋವು ತಂದಿದೆ: ನಾಗತಿಹಳ್ಳಿ ಚಂದ್ರಶೇಖರ್ ಆರೋಗ್ಯವಾಗಿದ್ದ ರಾಜೇಶ್ವರಿ ಸಾವು ನೋವು ತಂದಿದೆ. ಚಲನಚಿತ್ರಕ್ಕೆ ಸಂಬಂಧಿಸಿದಂತೆ ಅವರ ಮನೆಯ ತೋಟಕ್ಕೆ ಕಡೆಯದಾಗಿ ಹೋಗಿದ್ದೆ, ಆಗ ಅವರನ್ನು ಕಡೆಯದಾಗಿ ಭೇಟಿ ಮಾಡಿದ್ದೆ. ತೇಜಸ್ವಿಯವರ ಬರವಣಿಗೆಗೆ ರಾಜೇಶ್ವರಿಯವರೇ ಶಕ್ತಿಯಾಗಿದ್ದರು. ಸರಳ ವಿವಾಹವಾಗಿ ಆದರ್ಶಮಯ ಜೀವನ ನಡೆಸಿದ್ದರು. ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ತೇಜಸ್ವಿ ಹಾಗೂ ರಾಜೇಶ್ವರಿಯವರ ಪುಸ್ತಕ ಅಧ್ಯಯನ‌ ಮಾಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ.

ತಾಯಿ ಆರೋಗ್ಯವಾಗಿದ್ದರು, ಯಾವುದೇ ಕಾಯಿಲೆ ಇರಲಿಲ್ಲ: ಸುಸ್ಮಿತಾ ಕಳೆದ ಮೂರು ದಿನದ ಹಿಂದೆ ಹಿಮೋಗ್ಲೋಬಿನ್ ಕಡಿಮೆ ಆಗಿತ್ತು. ತಾಯಿ ಆರೋಗ್ಯವಾಗಿದ್ದರು, ಯಾವುದೇ ಕಾಯಿಲೆ ಇರಲಿಲ್ಲ. ಹೀಗಾಗಿ ಮೂಡಿಗೆರೆಯಿಂದ ಬೆಂಗಳೂರಿಗೆ ಕರೆತಂದು ಚಿಕಿತ್ಸೆ ಕೊಡಿಸಿದೆವು. ವೈದ್ಯರು ಎಲ್ಲಾ ರೀತಿಯ ಟೆಸ್ಟ್ ಮಾಡಿದರು. ರಿಪೋರ್ಟ್ ಬರಬೇಕಿತ್ತು. ಅಷ್ಟರಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ವೈದ್ಯರು ಮಲ್ಟಿ ಆರ್ಗನ್ ಫೈಲ್ಯೂರು ಅಂತಿದ್ದಾರೆ. ದೇಹದಾನ ಮಾಡಬೇಕು ಅನ್ನೋ ಆಸೆ ರಾಜೇಶ್ವರಿಯವರಿಗಿತ್ತು. ಅವರ ಆಸೆಯಂತೆ ದೇಹದಾನ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ರಾಜೇಶ್ವರಿ ತೇಜಸ್ವಿ ಹಿರಿಯ ಮಗಳು ಸುಸ್ಮಿತಾ ಹೇಳಿದ್ದಾರೆ.

ಇದನ್ನೂ ಓದಿ:

ಹುನ್ನೂರ ಬಸವ ಗುರುಕುಲದ ತತ್ವ ಪ್ರವಚನಕಾರ ಡಾ ಈಶ್ವರ ಮಂಟೂರ ನಿಧನ

ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ನಂದಾ ಪ್ರಸ್ಟಿ ನಿಧನ; ಪ್ರಧಾನಿ ಮೋದಿಯವರಿಂದ ಸಂತಾಪ

Published On - 9:24 am, Tue, 14 December 21

ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!
7 ಸಿಕ್ಸ್​ಗಳೊಂದಿಗೆ ಸ್ಪೋಟಕ ಹಾಫ್ ಸೆಂಚುರಿ ಸಿಡಿಸಿದ ಪೊಲಾರ್ಡ್
7 ಸಿಕ್ಸ್​ಗಳೊಂದಿಗೆ ಸ್ಪೋಟಕ ಹಾಫ್ ಸೆಂಚುರಿ ಸಿಡಿಸಿದ ಪೊಲಾರ್ಡ್
ಸೆಮಿಕಂಡಕ್ಟರ್ ಕ್ಷೇತ್ರದ ಸಿಇಒಗಳಿಂದ ಮೋದಿಗೆ ಪ್ರಶಂಸೆ
ಸೆಮಿಕಂಡಕ್ಟರ್ ಕ್ಷೇತ್ರದ ಸಿಇಒಗಳಿಂದ ಮೋದಿಗೆ ಪ್ರಶಂಸೆ
ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಶೋ ರೂಮ್​ಗೆ ಬೆಂಕಿ
ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಶೋ ರೂಮ್​ಗೆ ಬೆಂಕಿ