AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಜತೆ ಕಾಶಿ ವಿಶ್ವನಾಥನ ದರ್ಶನ ಪಡೆದ ಸಿಎಂ ಬೊಮ್ಮಾಯಿ: ವಾರಣಾಸಿಯಲ್ಲಿ ಇಂದು ಸಿಎಂಗಳ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ

ಸಿಎಂ ಬೊಮ್ಮಾಯಿ ಉತ್ತರ ಪ್ರದೇಶದಲ್ಲಿ ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ. ಪತ್ನಿ ಜತೆ ದೇವಾಲಯಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ, ಕಾಶಿ ವಿಶ್ವನಾಥ ಕಾರಿಡಾರ್ ಅದ್ಭುತವಾಗಿದೆ ಎಂದು ಕೊಂಡಾಡಿದ್ದಾರೆ.

ಪತ್ನಿ ಜತೆ ಕಾಶಿ ವಿಶ್ವನಾಥನ ದರ್ಶನ ಪಡೆದ ಸಿಎಂ ಬೊಮ್ಮಾಯಿ: ವಾರಣಾಸಿಯಲ್ಲಿ ಇಂದು ಸಿಎಂಗಳ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ
ಪತ್ನಿ ಜತೆ ಕಾಶಿ ವಿಶ್ವನಾಥನ ದರ್ಶನ ಪಡೆದ ಸಿಎಂ ಬೊಮ್ಮಾಯಿ
TV9 Web
| Edited By: |

Updated on:Dec 14, 2021 | 10:09 AM

Share

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಕಾಶಿ ವಿಶ್ವನಾಥ ಕಾರಿಡಾರ್ (Kashi Vishwanath corridor) ಉದ್ಘಾಟನೆ ಮಾಡಿದ ಬಳಿಕ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಪತ್ನಿ ಜತೆ ಕಾಶಿ ವಿಶ್ವನಾಥನ ದರ್ಶನ ಮಾಡಿದ್ದಾರೆ.

ಸಿಎಂ ಬೊಮ್ಮಾಯಿ ಉತ್ತರ ಪ್ರದೇಶದಲ್ಲಿ ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ. ಪತ್ನಿ ಜತೆ ದೇವಾಲಯಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ, ಕಾಶಿ ವಿಶ್ವನಾಥ ಕಾರಿಡಾರ್ ಅದ್ಭುತವಾಗಿದೆ ಎಂದು ಕೊಂಡಾಡಿದ್ದಾರೆ. ಹಾಗೂ ಮೋದಿಯವರ ವಿಶನ್ ಮತ್ತು ಪೂರ್ಣಮಾಡಿರೋ ರೀತಿ ಸರ್ಕಾರ ಮನಸ್ಸು ಮಾಡಿದ್ರೆ ಏನ್ ಬೇಕಾದ್ರು ಮಾಡಬಹುದು ಎಂಬುದಕ್ಕೆ ಕಾಶಿವಿಶ್ವನಾಥನ ಕಾರಿಡಾರೇ ಸಾಕ್ಷಿಯಾಗಿದೆ. ಡಬಲ್ ಇಂಜಿನ್ ಸರ್ಕಾರವಿದ್ದರೆ ಏನೆಲ್ಲ ಕೆಲಸವಾಗುತ್ತೆ ಎನ್ನಲು ಇದೇ ಸಾಕ್ಷಿ. ಕಾಶಿಗೆ ದಕ್ಷಿಣ ಭಾರತದವರು ತುಂಬಾ ಜನ ಬರುತ್ತಾರೆ. ಅವರಿಗೆ ಬಹಳ‌ ಸಂತೋಷವಾಗಲಿದೆ. ಇವತ್ತು ಪ್ರಧಾನಿ ಜೊತೆ ಸಿಎಂಗಳ ಸಭೆಯಲ್ಲಿ ಅಭಿವೃದ್ಧಿ ವಿಚಾರ ಚರ್ಚೆಯಾಗಲಿದೆ. ವಿಧಾನ ಪರಿಷತ್​ನ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶದ ನಿರೀಕ್ಷೆಯಲ್ಲಿದ್ದೆವೆ ಎಂದರು.

ಇನ್ನು ವಾರಾಣಸಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಿಎಂಗಳ ಜೊತೆ ಮಹತ್ವದ ಸಭೆ ನಡೆಯಲಿದೆ. 12 ರಾಜ್ಯಗಳ ಸಿಎಂಗಳು, 9 ಡಿಸಿಎಂಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಅರುಣಾಚಲಪ್ರದೇಶ, ಅಸ್ಸಾಂ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲಪ್ರದೇಶ, ಮಧ್ಯಪ್ರದೇಶ, ತ್ರಿಪುರಾ, ಮಣಿಪುರ, ಉತ್ತರ ಪ್ರದೇಶ, ಉತ್ತರಾಖಂಡ್ ಮುಖ್ಯಮಂತ್ರಿ ಇಂದಿನ ಸಭೆಯಲ್ಲಿ ಭಾಗಿಯಾಗುತ್ತಾರೆ. ವಾರಾಣಸಿಯ ವಿಶ್ವನಾಥನ ಸನ್ನಧಿಯಲ್ಲಿ ಬೆಳಗ್ಗೆ 10 ಗಂಟೆಗೆ ಸಭೆ ಆರಂಭವಾಗಲಿದೆ.

ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಭಾಗಿ ರಾಜ್ಯಗಳ ಅಭಿವೃದ್ಧಿ, ಯೋಜನಾ ಅನುಷ್ಠಾನ, ಕೊರೊನಾ ನಿಯಂತ್ರಣ, ಆಡಳಿತದಲ್ಲಿ ಪಾರದರ್ಶಕತೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.

Basavaraj Bommai

ಪತ್ನಿ ಜತೆ ಕಾಶಿ ವಿಶ್ವನಾಥನ ದರ್ಶನ ಪಡೆದ ಸಿಎಂ ಬೊಮ್ಮಾಯಿ

Basavaraj Bommai

ಪತ್ನಿ ಜತೆ ಕಾಶಿ ವಿಶ್ವನಾಥನ ದರ್ಶನ ಪಡೆದ ಸಿಎಂ ಬೊಮ್ಮಾಯಿ

ಇದನ್ನೂ ಓದಿ: Shikhar Dhawan: ಟೀಮ್ ಇಂಡಿಯಾಕ್ಕೆ ಇನ್ಮುಂದೆ ಈ ಆಟಗಾರನ ಅಗತ್ಯ ಇಲ್ಲ ಎಂದ ಭಾರತದ ಮಾಜಿ ಕ್ರಿಕೆಟಿಗ

Published On - 7:56 am, Tue, 14 December 21