Shikhar Dhawan: ಟೀಮ್ ಇಂಡಿಯಾಕ್ಕೆ ಇನ್ಮುಂದೆ ಈ ಆಟಗಾರನ ಅಗತ್ಯ ಇಲ್ಲ ಎಂದ ಭಾರತದ ಮಾಜಿ ಕ್ರಿಕೆಟಿಗ

India vs South Africa: ಈಗಾಗಲೇ ಭಾರತ ಟೆಸ್ಟ್​ ಮತ್ತು ಟಿ-20 ತಂಡದಿಂದ ಹೊರಬಿದ್ದಿರುವ ಆರಂಭಿಕ ಬ್ಯಾಟರ್​ ಶಿಖರ್ ಧವನ್ ಅವ​ರನ್ನು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗಾಗಿ ಆಯ್ಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಸಬಾ ಕರೀಮ್ ಅಭಿಪ್ರಾಯಪಟ್ಟಿದ್ದಾರೆ.

Shikhar Dhawan: ಟೀಮ್ ಇಂಡಿಯಾಕ್ಕೆ ಇನ್ಮುಂದೆ ಈ ಆಟಗಾರನ ಅಗತ್ಯ ಇಲ್ಲ ಎಂದ ಭಾರತದ ಮಾಜಿ ಕ್ರಿಕೆಟಿಗ
Team India
Follow us
TV9 Web
| Updated By: Vinay Bhat

Updated on: Dec 14, 2021 | 7:33 AM

ಭಾರತ ಕ್ರಿಕೆಟ್ ತಂಡ (Indian Cricket Tea,) ಸದ್ಯದಲ್ಲೇ ದಕ್ಷಿಣ ಆಫ್ರಿಕಾ ಪ್ರವಾಸ (India vs South Africa) ಬೆಳೆಸಲಿದೆ. ಅಲ್ಲಿ ಮೂರು ಪಂದ್ಯಗಳ ಏಕದಿನ ಮತ್ತು ಟೆಸ್ಟ್ ಸರಣಿಯನ್ನು ಆಡಲಿದೆ. ಬಿಸಿಸಿಐ (BCCI) ಆಯ್ಕೆ ಸಮಿತಿ ಈಗಾಗಲೇ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟ ಮಾಡಿದೆ. ಆದರೆ, ಸೋಮವಾರ ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿರುವ ವೇಳೆ ಟೆಸ್ಟ್ ತಂಡದ ಉಪ ನಾಯಕ ರೋಹಿತ್ ಶರ್ಮಾ (Rohit Sharma) ಗಾಯಕ್ಕೆ ತುತ್ತಾಗಿ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಇವರ ಜಾಗಕ್ಕೆ ಪ್ರಿಯಾಂಕ್ ಪಾಂಚಾಲ್ (Priyanka Panchal) ಆಯ್ಕೆಯಾಗಿದ್ದಾರೆ. ಆಯ್ಕೆ ಸಮಿತಿ ಕೇವಲ ಟೆಸ್ಟ್ ಪಂದ್ಯಕ್ಕಷ್ಟೆ ತಂಡವನ್ನು ಆರಿಸಿದೆ. ಏಕದಿನ ಸರಣಿಗೆ ಇನ್ನೂ 15 ಸದಸ್ಯರ ಟೀಮ್ ಅನ್ನು ಪ್ರಕಟ ಮಾಡಿಲ್ಲ. ಹೀಗಿರುವಾಗ ಭಾರತದ ಮಾಜಿ ಆಟಗಾರ ಸಬಾ ಕರೀಮ್ (Saba Karim) ಟೀಮ್ ಇಂಡಿಯಾಕ್ಕೆ (Team India) ಇನ್ಮುಂದೆ ಶಿಖರ್ ಧವನ್ (Shikhar Dhawan)​ ಅವರ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಈಗಾಗಲೇ ಭಾರತ ಟೆಸ್ಟ್​ ಮತ್ತು ಟಿ-20 ತಂಡದಿಂದ ಹೊರಬಿದ್ದಿರುವ ಆರಂಭಿಕ ಬ್ಯಾಟರ್​ ಶಿಖರ್ ಧವನ್ ಅವ​ರನ್ನು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗಾಗಿ ಆಯ್ಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಭಾರತ ತಂಡದ ಮಾಜಿ ಆಯ್ಕೆಗಾರ ಸಬಾ ಕರೀಮ್ ಅಭಿಪ್ರಾಯಪಟ್ಟಿದ್ದಾರೆ.

ಶಿಖರ್‌ ಧವನ್‌ ಅವರನ್ನು ಇತ್ತೀಚಿನ ಟಿ20 ಕ್ರಿಕೆಟ್‌ ಸರಣಿಯಿಂದಲೂ ಕೈಬಿಡಲಾಗಿತ್ತು. ಇದೇ ವರ್ಷ ನಡೆದ ಟಿ20 ವಿಶ್ವಕಪ್‌ ಟೂರ್ನಿಗೂ ಧವನ್‌ ಆಯ್ಕೆಯಾಗಿರಲಿಲ್ಲ. 20 ಓವರ್‌ಗಳ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ಜೊತೆಗೆ ಕೆಎಲ್‌ ರಾಹುಲ್‌ ಭಾರತ ತಂಡದ ಮೊದಲ ಆಯ್ಕೆಯ ಓಪನರ್‌ ಆಗಿದ್ದಾರೆ. ಆದರೆ, ಏಕದಿನ ಕ್ರಿಕೆಟ್‌ನಲ್ಲಿ ಧವನ್‌ ಅವರ ಈ ಹಿಂದಿನ ದಾಖಲೆಗಳಷ್ಟೇ ಅವರಿಗೆ ತಂಡದಲ್ಲಿ ಸ್ಥಾನ ತಂದುಕೊಡಬಹುದಾಗಿದೆ. ಅಲ್ಲದೆ ಋತುರಾಜ್‌ ಗಾಯಕ್ವಾಡ್‌, ಪೃಥ್ವಿ ಶಾ ಮತ್ತು ವೆಂಕಟೇಶ್‌ ಅಯ್ಯರ್‌ ಅವರಂತಹ ಆಟಗಾರರ ಉದಯವಾಗಿದ್ದು, ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳ ಸ್ಥಾನಕ್ಕೆ ಭಾರಿ ಪೈಪೋಟಿ ಶುರುವಾಗಿದೆ. ಹೀಗಾಗಿ ಧವನ್‌ ಕ್ರಿಕೆಟ್‌ ವೃತ್ತಿಬದುಕು ಬಹುತೇಕ ಅಂತ್ಯಗೊಂಡಂತೆ ಕಾಣುತ್ತಿದೆ.

“ಒಂದು ವೇಳೆ ಶಿಖರ್‌ ಧವನ್‌ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾದರೂ ಅವರೂ ಆಡುವ ಹನ್ನೊಂದರ ಬಳಗದ ಭಾಗವಾಗಲಿದ್ದಾರೆಯೇ? ರೋಹಿತ್‌ ಮತ್ತು ಕೆಎಲ್‌ ರಾಹುಲ್‌ ಈಗಾಗಲೇ ಟೆಸ್ಟ್‌ ಮತ್ತು ಟಿ-20 ಕ್ರಿಕೆರಟ್‌ನಲ್ಲಿ ಆರಂಭಿಕರಾಗಿ ಆಡುತ್ತಿದ್ದಾರೆ, ಇದೀಗ ಏಕದಿನ ಕ್ರಿಕೆಟ್‌ನಲ್ಲೂ ಅವರೇ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸುತ್ತಾರೆ ಎಂದು ಭಾವಿಸುತ್ತೇನೆ. ಅವರನ್ನು ತಂಡದಲ್ಲಿ ಆಯ್ಕೆ ಮಾಡಿ, ಪಂದ್ಯದಲ್ಲಿ ಆಡಿಸದಿದ್ದರೆ ಆಯ್ಕೆ ಮಾಡುವ ಅಗತ್ಯವಿದೆಯೇ, ಆದ್ದರಿಂದ ಧವನ್‌ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇದರ ಅಗತ್ಯವೂ ಇಲ್ಲ” ಎಂಬುದು ಕರೀಮ್ ಮಾತು.

“ಶಿಖರ್ ಧವನ್ ಎಡಗೈ ಆಟಗಾರ ಎಂಬುದು ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗಲು ಇರುವ ಏಕೈಕ ಸಾಧ್ಯತೆ. ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಎಡಗೈ ಮತ್ತು ಬಲಗೈ ಕಾಂಬಿನೇಷನ್ ಇಲ್ಲಿ ಧವನ್ ಅವರಿಗೆ ಅವಕಾಶವನ್ನು ಒದಗಿಸಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಜೂನ್‌ನಲ್ಲಿ ನಡೆ ಶ್ರೀಲಂಕಾ ವಿರುದ್ಧದ ಒಡಿಐ ಸರಣಿಯಲ್ಲಿ ಶಿಖರ್‌ ಕೊನೆಯ ಬಾರಿ ಭಾರತ ತಂಡದ ಪರ ಆಡಿದ್ದಾರೆ. ಆದರೆ ಅವರ ಇತ್ತೀಚಿನ ಬ್ಯಾಟಿಂಗ್‌ ಅತ್ಯಂತ ಕಳಪೆ ರೀತಿಯಲ್ಲಿದೆ. ಪ್ರಸಕ್ತ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ದಿಲ್ಲಿ ತಂಡದ ಪರ ಆಡುತ್ತಿರುವ ಅವರು ಮೊದಲ ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ 0, 12, 14 ಮತ್ತು 18 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದಾರೆ.

Team India: ಮಾರ್ಚ್​ನಲ್ಲಿ ಅಫ್ಘಾನ್ ವಿರುದ್ಧ ಏಕದಿನ ಸರಣಿ ಆಡಲಿದೆ ಭಾರತ; ಯುವ ಪ್ರತಿಭೆಗಳಿಗೆ ಅವಕಾಶ ಖಚಿತ!

(Saba Karim feels that it would be no use taking Shikhar Dhawan to India tour of South Africa)

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ